Breaking News

ಮಹಾ ಪರಿನಿರ್ವಾಣ ದಿನ ಪರ್ಯಾಯ ಕಾರ್ಯಕ್ರಮ. ಸತೀಶ ಜಾರಕಿಹೊಳಿಗೆ ಮುನವಳ್ಳಿ ಟಾಂಗ್..

ಬೆಳಗಾವಿ- ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಭಾರತ ರತ್ನ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಸ್ಮಶಾನದಲ್ಲಿ ಆಚರಿಸುತ್ತಿರುವದಕ್ಕೆ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ

ಪತ್ರೀಕಾಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಅವರು ಸ್ಮಶಾನದಲ್ಲಿ ಡಾ ಬಾಬಾ ಸಾಹೇಬರ ಭಾವಚಿತ್ರವನ್ನು ಸ್ಮಶಾನದಲ್ಲಿ ಇಟ್ಟು ಸತ್ತವರ ಎದುರು ಊಟ ಮಾಡಿ ಅಲ್ಲಿಯೇ ಮಲಗಿ ಬಾಬಾಸಾಹೇಬರನ್ನು ಅವಮಾನ ಮಾಡುತ್ತಿದ್ದು ಅವರಿಗೆ ಸ್ಮಶಾನದಲ್ಲಿಯೇ ಕಾರ್ಯಕ್ರಮ ಮಾಡುವ ಶೋಕಿ ಇದ್ದರೆ ವಾಲ್ಮೀಕಿ ಜಯಂತಿಯ ದಿನ ಆಚರಿಸಲಿ ಎಂದು ಶಂಕರ ಮುನವಳ್ಳಿ ಸಲಹೆ ನೀಡಿದ್ದಾರೆ

ಸ್ಮಶಾನದಲ್ಲಿ ಒಂದು ಕಡೆ ಹೆಣ ಸುಡುವಾಗ ಇನ್ನೊಂದು ಕಡೆ ಊಟ ಮಾಡಿ ಬುದ್ದಿವಾದದ ಭಾಷಣ ಮಾಡುವ ಮಠಾಧಿಶರ ನಡೆಗೆ ಮುನವಳ್ಳಿ ಆಕ್ರೋಶ ವ್ಯೆಕ್ತಪಡಿಸಿದ್ಸು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಸತೀಶ ಜಾರಕಿಹೊಳಿ ಅವರನ್ನು ಕರೆದು ಸ್ಮಶಾನದಲ್ಲಿ ಬಾಬಾಸಾಹೇಬರ ಪರಿನಿರ್ವಾಣ ದಿನ ಆಚರಿಸಿದಂತೆ ಬುದ್ದಿವಾದ ಹೇಳದಿದ್ದರೆ ಸತೀಶ ಜಾರಕಿಹೊಳಿ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುವದಾಗಿ ಮುನವಳ್ಳಿ ಎಚ್ಚರಿಕೆ ನೀಡಿದ್ದಾರೆ

ಸ್ಮಶಾನದಲ್ಲಿ ಸತ್ತವರ ಅಂತ್ತಕ್ರಿಯೆ ಮಾಡಲು ಜನ ಬಂದಿರುತ್ತಾರೆ ಅವರೆಲ್ಲರೂ ದುಖದಲ್ಲಿರುವಾಗ ಅವರ ಎದುರು ಸ್ಮಶಾನದಲ್ಲಿ ಊಟ ಮಾಡುವದು ಎಷ್ಟರ ಮಟ್ಟಿಗೆ ಸರಿ ಎನ್ನುವದನ್ನು ಮಠಾಧೀಶರು ಆತ್ಮಾವಲೋಕನ ಮಾಡಿಕೊಳ್ಳಲಿ ಮೂಡ ನಂಬಿಕೆ ವಿರುದ್ಧ ಜಾಗೃತಿ ಮಾಡುವದಾದರೆ ಸ್ಮಶಾನ ಬಿಟ್ಟು ಬೇರೆ ಕಡೆ ಕಾರ್ಯಕ್ರಮ ಆಯೋಜಿಸಲಿ ಎಂದು ಶಂಕರ ಮುನವಳ್ಳಿ ತಿಳಿಸಿದ್ದಾರೆ

ಮಹಾಪರಿನಿರ್ವಾಣದ ದಿನ ಬೆಳಗಾವಿಯ ಅಂಬೇಡ್ಕರ್ ಉದ್ಯಾನವನದಲ್ಲಿ ಭಾರತೀಯ ಬೌದ್ಧ ಮಹಾಸಭಾ ಹಾಗು ದಲಿತ ಸಂಘಟನೆಗಳ ಒಕ್ಕೂಟದ ಪರವಾಗಿ ಒಂದು ದಿನದ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ ಬಾಬಾಸಾಹೇಬರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮುನವಳ್ಳಿ ಮನವಿ ಮಾಡಿಕೊಂಡಿದ್ದಾರೆ

ಡಾ ಬಾಬಾ ಸಾಹೇಬ ಅಂಬೇಡ್ಕರ ಅವರ ಭಾವಚಿತ್ರವನ್ನು ಕೆಲವರು ದುರ್ಬಳಕೆ ಮಾಡಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮುನವಳ್ಳಿ ಪರೋಕ್ಷವಾಗಿ ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ್ದಾರೆ

ಸೂಪರ್ ಸೂಡ್ ಬೇಡ

ಬೆಳಗಾವಿ ಮಹಾನಗೆ ಪಾಲಿಕೆಯನ್ನು ಯಾವುದೇ ಕಾರಣಕ್ಕೂ ಸೂಪರ್ ಸೀಡ್ ಮಾಡಬಾರದು ತಪ್ಪು ಮಾಡಿದವರಿಗೆ  ಮಾತ್ರ ಶಿಕ್ಷೆ ನೀಡಲಿ ಎಂದು ಮುನವಳ್ಳಿ ಒತ್ರಾಯಿಸಿದ್ದಾರೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *