ಬೆಳಗಾವಿ:
ಮಾಜಿ ಸಚಿವ ಸತೀಶ ಜಾರಕಿಹೊಳಿ ಬಡವರ ಬಂದು, ಸಮಾಜ ಸೇವಕ ಎಂದು ತಿಳಿದುಕೊಂಡಿದ್ದೆ. ಆದರೆ ಇತ್ತೀಚಿನ ಅವರ ನಡುವಳಿಕೆ ನೋಡಿದಾಗ ಅವರ ಕರಾಳ ಮುಖದ ದರ್ಶನವಾಗಿದ್ದು, ಅವರು ಸಮಾಜ ಸೇವಕ ಅಲ್ಲವೇ ಅಲ್ಲ. ದುರ್ಬಲರ ಜಮೀನುಗಳನ್ನು ಒತ್ತಾಯ ಪೂರ್ವಕವಾಗಿ ಕಬಳಿಸುವ ಭಯೋತ್ಪಾದಕ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯ ಭಾಗದಲ್ಲಿರುವ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಮೀನನ್ನು ಕಬಳಿಸಲು ಸತೀಶ್ ಜಾರಕಿಹೊಳಿ ಅವರು ಜಿಲ್ಲಾದಿಕಾರಿ ಎನ್ .ಜಯರಾಮ್, ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಉಪವಿಭಾಗಾಧಿಕಾರಿ ಹಾಗೂ ಬೆಳಗಾವಿ ತಹಶೀಲ್ದಾರನ್ನು ದುರುಪಯೋಗ ಪಡಿಸಿಕೊಂಡು ಉಪವಿಭಾಗ ಅಧಿಕಾರಿ ರಾಜಶ್ರೀ ಜೈನಾಪುರೆ ಅವರನ್ನು ಹೆದರಿಸಿ ಬೆದರಿಸಿ ಕಾನೂನು ಬಾಹೀರವಾಗಿ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಮೀನನ್ನು ಸರ್ಕಾರದ ಮುಟ್ಟುಗೋಲು ಮಾಡುವ ಆದೇಶ ಹೊರಡಿಸಿ ದುರ್ಬಲರ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆಂದು ಶಂಕರ ಮುನವಳ್ಳಿ ಸತೀಶ್ ಜಾರಕಿಹೊಳಿ ವಿರುದ್ದ ಕಿಡಿ ಕಾರಿದ್ದಾರೆ.
ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಮೀನು ಕೃಷಿ ಜಮೀನು ಅಲ್ಲವೇ ಅಲ್ಲ.ಈ ಜಮೀನಿಗೆ ಸಿಟಿ ಸರ್ವೆ ನಂಬರ್ ಬಿದ್ದಿದೆ. ಆದಾಗ್ಯೂ ಸತೀಶ ಜಾರಕಿಹೊಳಿ ಅವರು ಡಿಸೆಂಬರ್ ೨ ರಂದು ಮಧ್ಯಾಹ್ನ ೧ ಗಂಟೆಯಿಂದ ರಾತ್ರಿ ೩ ಗಂಟೆವರೆಗೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕುಳಿತು ಅಧಿಕಾರಿಗಳನ್ನು ದುರುಪಯೋಗಿಸಿಕೊಂಡು ಇದು ಕೃಷಿ ಜಮೀನು ಎಂದು ಕೊಟ್ಟಿ ದಾಖಲೆ ಗಳನ್ನು ಸೃಷ್ಠಿಸಿ ರಾತ್ರೊರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಉಪವಿಭಾಗಾಧಿಕಾರಿಗಳ ಮೂಲಕ ಮುಟ್ಟುಗೋಲ ಆದೇಶ ಹೊರಡಿಸಿರುವ ಸತೀಶ್ ಜಾರಕಿಹೊಳಿ ರೀ ಗ್ರ್ಯಾಂಟ್ ಮೂಲಕ ಜಮೀನನ್ನು ಕಬಳಿಸುವ ತಂತ್ರ ರೂಪಿಸಿದ್ದಾರೆಂದು ಮುನವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಎನ್.ಜಯರಾಮ್ ಆರು ವರ್ಷವಾದರೂ ಬೆಳಗಾವಿಯಿಂದ ವರ್ಗಾವಣೆಗೊಂಡಿಲ್ಲ. ಇಂತಹ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಜಿಲ್ಲೆಯ ರಾಜಕಾರಣಿಗಳ ಮೂಲಕ ಮರ್ಜಿ ಕಾಯುತ್ತಿದ್ದಾರೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನವರಿಗೆ ನಿಜವಾಗಿಯೂ ಸಾಮಾಜಿಕ ಕಳಕಳಿ ಇದ್ದರೆ ಬೆಳಗಾವಿಯ ಜಾಮೀನು ಮುಟ್ಟುಗೋಲು ಪ್ರಕರಣವನ್ನು ಇಲಾಖೆಯಿಂದ ಅಥವಾ ಲೋಕಾಯುಕ್ತರಿಂದ ತನಿಖೆ ಮಾಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಕುಲಕರ್ಣಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಿ ಎಂದು ಮುನವಳ್ಳಿ ಒತ್ತಾಯಿಸಿದ್ದಾರೆ.
ಕಂದಾಯ ಸಚಿವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ನ್ಯಾಯಾಲಯದ ಮೆಟ್ಟಿಲೇರಿ ತಪ್ಪು ಮಡಿದ ಅಧಿಕಾರಿಗಾಳನ್ನು ಜೈಲಿಗೆ ಕಳುಹಿಸುತ್ತೇನೆ. ನ್ಯಾಯಕ್ಕಾಗಿ ಕೇಂದ್ರ ಗೃಹಸಚಿವರ ಮನೆ ಎದುರು ಧರಣಿ ಮಾಡುತ್ತೇನೆ. ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆ ಮೂಲಕ ತನಿಖೆ ಮಾಡಿಸುವಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡುವದಾಗಿ ಮುನವಳ್ಳಿ ಎಚ್ಚರಿಕೆ ನೀಡಿದ್ದಾರೆ.
ಲಕ್ಷ್ಮಣರಾವ್ ಜಾರಕುಹೊಳಿ ಅವರು ದುರ್ಬಲರ ಹಾಗೂ ದಲಿತರ ಏಳಿಗೆಗಾಗಿ ಶ್ರಮಿಸಿ ಬಡವರ ಮತ್ರು ದೀನ ದಲಿತರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಅದೇ ಕುಟುಂಬದಿಂದ ಬಂದಿರುವ ಸತೀಶ ಜಾರಕಿಹೊಳಿ ಹಿಡಕಲ್ ಡ್ಯಾಮ್ ಪ್ರದೇಶದಲ್ಲಿ ತಮ್ಮ ಚೇಲಾಗಳ ಮೂಲಕ ನೂರಾರು ಎಕರೆ ಬಡವರ ಜಮೀನನ್ನು ಕಬಳಿಸಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಸಮಾಜ ಸೇವೆ ಹೆಸರಿನಲ್ಲಿ ತಮ್ಮ ಕರಾಳ ಮಖವನ್ನು ಮುಚ್ಚಿಕೊಂಡಿದ್ದಾರೆ ಎನ್ನುವುದು ಮುನವಳ್ಳಿ ಅವರ ಆರೋಪವಾಗಿದೆ.
ಸದ್ಯಕ್ಕೆ ಭೂ ನ್ಯಾಯಾದೀಕರಣ ಯತಾಸ್ಥಿತಿ ಕಾಯುವಂತೆ ಆದೇಶ ಹೊರಡಿಸಿದ್ದು ನ್ಯಾಯಾಂಗ ಹೋರಾಟ ಮುಂದುವರಿಯಲಿದೆ ಎಂದು ಮುನವಳ್ಳಿ ತಿಳಿಸಿದರು.