ಬೆಳಗಾವಿ- ಚರ್ಚ ಬದಿಯಲ್ಲಿರುವ ಜಮೀನಿನಲ್ಲಿ ಶಂಕರ ಮುನವಳ್ಳಿಗೂ ಕುಲಕರ್ಣಿ ಕುಟುಂಬದ ಯಾವುದೇ ಹಕ್ಕಿಲ್ಲ ಎಂದು ಹೇಳಿಕೆ ನೀಡಿರುವ ಸತೀಶ ಜಾರಕಿಹೊಳಿ ಯಾರು? ಮುಖ್ಯಮಂತ್ರಿನಾ ಅಥವಾ ನ್ಯಾಯಾದೀಶನಾ ಎಂದು ಶಂಕರ ಮುನವಳ್ಳಿ ಪ್ರಶ್ನಿಸಿದ್ದಾರೆ
ಪತ್ರಿಕಾ ಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಯಾವುದೇ ಸಾಕ್ಷಾಧಾರಗಳಿಲ್ಲದೇ ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದು ನಾನು ಬೆಂಗಳೂರಿನ ಅರಮನೆ ಮಾರಿದ್ದೇನೆ ಜೈಲು ಶಿಕ್ಷೆ ಅನುಭವಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದು ಅವರ ವಿರುದ್ಧ ಶೀಘ್ರದಲ್ಲಿಯೇ ಬೆಳಗಾವಿಯ ಜೆಎಂಎಫ ಸಿ ನ್ಯಾಯಾಲಯದಲ್ಲಿ ಮಾನ ಹಾನಿ ಪ್ರಕರಣ ದಾಖಲಿಸಲಾಗುವದು ಎಂದು ಶಂಕರ ಮುನವಳ್ಳಿ ತಿಳಿಸಿದ್ದಾರೆ
ನಗರದ ಹೃದಯ ಭಾಗದಲ್ಲಿರುವ ಜಮೀನಿನಲ್ಲಿ ನನ್ನ ಹಕ್ಕಿದೆ ಕುಲಕರ್ಣಿ ಕುಟುಂಬ ಡಮ್ಮಣಗಿ ಅವರಿಗೆ ಜಮೀನು ಮಾರಾಟ ಮಾಡಿದ್ದು ಇದರಲ್ಲಿ ಶೇ ೪೫ ರಷ್ಟು ತಮ್ಮ ಪಾಲಿದೆ ಕುಲಕರ್ಣಿ ಕುಟುಂಬಕ್ಕೆ ಇನ್ನೂ ಡುಡ್ಡು ಬರಬೇಕಾಗಿದ್ದು ಜಮೀನಿನಲ್ಲಿ ಶಂಕರ ಮುನವಳ್ಳಿ ಮತ್ತು ಕುಲಕರ್ಣಿ ಕುಟುಂಬದ ಹಕ್ಕಿದೆ ಆದರೆ ಇದರಲ್ಲಿ ಹಕ್ಕಿಲ್ಲ ಎಂದು ಹೇಳಲು ಸತೀಶ ಜಾರಕಿಹೊಳಿ ಅವರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಮುನವಳ್ಳಿ ಸತೀಶ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ
ಸತೀಶ ಜಾರಕಿಹೊಳಿ ಒಬ್ಬ ಮಾಮೂಲಿ ಶಾಸಕ ತಮಗೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕಡ್ಟಡ ಕಟ್ಟುವ ಅಧಿಕಾರ ಕೊಟ್ಟವರು ಯಾರು? ಇವರೇನು ಸರ್ಕಾರನಾ..ಮುಖ್ಯಮಂತ್ರಿನಾ..ಜಿಲ್ಲಾ ಮಂತ್ರಿನಾ..ಅಥವಾ ಕಂದಾಯ ಮಂತ್ರೀನಾ ಎಂದು ಶಂಕರ ಮುನವಳ್ಳಿ ಪ್ರಶ್ನಿಸಿದ್ದಾರೆ
ಜಿಲ್ಲಾಡಳಿತ ಸತೀಶ ಜಾರಕಿಹೊಳಿ ಅವರ ಕೈಗೊಂಬೆಯಾಗಿದೆ ಕಾನೂನು ಬಾಹಿರವಾಗಿ ತಮಗೆ ಸೇರಿದ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಹೊರಡಿಸಿರುವ ಅಧಿಕಾರಿಗಳು ಜೇಲಿಗೆ ಹೋಗುವದು ಗ್ಯಾರಂಟಿ ಎಂದು ಶಂಕರ ಮುನವಳ್ಳಿ ತಿಳಿಸಿದ್ದಾರೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					