ಬೆಳಗಾವಿ ಜಾರಕಿಹೊಳಿ ಮತ್ತು ಹೆಬ್ಬಾಳಕರ ಕಿತ್ತಾಟ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ ಬೆಂಬಲಿಗರಿಂದ ಸುದ್ದಿಗೋಷ್ಠಿ ನಡೆಯಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ತಾಪಂ ಶಂಕರಗೌಡ ಪಾಟೀಲ್, ಸಿ.ಸಿ.ಪಾಟೀಲ್ ಸಚಿವರು ಹೆಬ್ಬಾಳಕರ ಕುರಿತು ಹಗುರವಾಗಿ ಮಾತನಾಡಬಾರದು ಎಂದು ಮನವಿ ಮಾಡಿಕೊಂಡರು
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬಳಸಿದ ಪದ ಸರಿಯಲ್ಲ. ಹೆಬ್ಬಾಳಕರ ಸತೀಶ ಜಾರಕಿಹೊಳಿ ಕಾಲ ಕಸ ಆಗುವುದಿಲ್ಲ ಎಂದು ಸಚಿವರು ಹೇಳಿದ್ದರು. ಭಾರತದೇಶ ಸಂಸ್ಕತಿ, ಸಂಸ್ಕಾರವನ್ನ ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ.ಸಚಿವರು ದೊಡ್ಡವರು ತಾವು ಇಂತಹ ಮಾತುಗಳನ್ನ ಆಡಬಾರದು ಎಂದರು
ಸಚಿವರು ನೀಡಿದ ಹೇಳಿಕೆಯಿಂದ ಕಾರ್ಯಕರ್ತರು, ಮುಖಂಡರ ಮನಸ್ಸಿಗೆ ನೋವಾಗಿದೆ.ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಒಂದೇ ಪಕ್ಷದಲ್ಲಿ ಇರುವುದರಿಂದ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಳ್ಳಬೇಕು.ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೆಜ್ ಆಗದಂತೆ ಸಚಿವರು ನೋಡಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡರು
ಯುವರಾಜ ಕದಂ ಸೇರಿದಂತೆ ಅನೇಕ ಜನ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ