ಬೆಳಗಾವಿ ಎಪಿಎಂಸಿ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಲು ಸಿಎಂ ಪಾಲಿಟಿಕ್ಸ ಸಕ್ರೇಟರಿ ಎಂಟ್ರಿ….!!!

 

ಬೆಳಗಾವಿ- ಇಂದು ಬೆಳಿಗ್ಗೆ
ಎಪಿಎಂಸಿ ಮಾರುಕಟ್ಟೆಗೆ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅವರು ಭೇಟಿ ನೀಡದರು. ವರ್ತಕ ಮತ್ತು ಸಗಟು ವ್ಯಾಪಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಎಪಿಎಂಸಿ ಸಭಾಂಗಣದಲ್ಲಿ ಶಂಕರಗೌಡ ಪಾಟೀಲ ಸಭೆ ನಡೆಸಿದರು

ಸಭೆಯಲ್ಲಿ ಭಾಗವಹಿಸಿದ ವರ್ತಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು ಕೆಲವರು ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡುವಂತೆ ಒತ್ತಾಯಿಸಿದರು ಇನ್ನು ಕೆಲವರು ಎಪಿಎಂಸಿ ಆವರಣದಲ್ಲಿ ಹೆಚ್ಚಿನ ಅಂಗಡಿಗಳನ್ನು ನಿರ್ಮಿಸಿ ದಲಾಲರಿಗೆ ಅನಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಪರ ವಿರೋಧ ಅಭಿಪ್ರಾಯಗಳು ಮೂಡಿದಾಗ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು ಎಲ್ಲರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಎಲ್ಲರನ್ನು ಸಮಾಧಾನ ಪಡಿಸಿದರು.

ಎಪಿಎಂಸಿ ವರ್ತಕರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಅತೀ ಶಿಘ್ರದಲ್ಲೇ ವರ್ತಕರ ಸಮಸ್ಯೆ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಂಕರಗೌಡ ಪಾಟೀಲ ಭರವಸೆ ನೀಡಿದರು.

ರಾಜ್ಯದ ಬಹುತೇಕ ನಗರಗಳಲ್ಲಿ ಖಾಸಗಿ ತರಕಾರಿ ಮಾರುಕಟ್ಟೆಗಳಿವೆ ,ಬೆಳಗಾವಿಯಲ್ಲೂ ಖಾಸಗಿ ಮಾರುಕಟ್ಟೆಗೆ ಅನುಮತಿ ಕೊಡಬೇಕು ಎಂದು ವರ್ತಕರು ಶಂಕರಗೌಡರಿಗೆ ಮನವಿ ಮಾಡಿಕೊಂಡರು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *