Breaking News

ಎಂಈಎಸ್ ಕಂಗಾಲು..ಶರದ್ ಪವಾರ್ ಗೆ ದುಂಬಾಲು…ಸರ್ಕಾರಕ್ಕೆ ಸವಾಲು….!!!!

ಬೆಳಗಾವಿ- ಗಡಿಭಾಗದಲ್ಲಿ ವಿವಿಧ ಸಂಘ ಸಂಸ್ಥಗಳಲ್ಲಿ ಅಧಿಕಾರ ಕಳೆದುಕೊಂಡು ಅಸ್ತಿತ್ವ ಕಳೆದುಕೊಂಡು ಕಂಗಾಲಾಗಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮೀತಿ ಈಗ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ ಪವಾರ ಅವರನ್ನು ಬೆಳಗಾವಿಗೆ ಕರೆಯಿಸಿ ಗಡಿಭಾಗದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ತಯಾರಿ ಮಾಡುತ್ತಿದೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಗಡಿಭಾಗದಲ್ಲಿ ಮುಗ್ದ ಮರಾಠಿ ಭಾಷಿಕರನ್ನು ಪ್ರಚೋದಿಸುವದು ಇವರನ್ನು ಪ್ರಚೋದಿಸುವ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಬೆಂಕಿ ಉಗುಳಿಸುವದು ಮರಾಠಿ ಮೇಳಾವ್ ಹೆಸರಿನಲ್ಲಿ ಮರಾಠಿ ಭಾಷಿಕರನ್ನು ಕರ್ನಾಟಕ ಸರ್ಕಾರದ ವಿರುದ್ದ ಎತ್ತಿಕಟ್ಟಿ ಕಾಲುಕೆದರಿ ಜಗಳ ತಗೆಯುವದು ಎಂಈಎಸ್ ನ ಕೆಟ್ಟ ಚಾಳಿಯಾಗಿದ್ದು ಇದಕ್ಕೆಲ್ಲಾ ಅನುಮತಿ ಕೊಡುವದು ಕರ್ನಾಟಕ ಸರ್ಕಾರದ ವಾಸಿಯಾಗದ ರೋಗವಾಗಿದೆ

ಎಂಈಎಸ್ ಸಂಘಟನೆಯಲ್ಲಿ ಕಾಕಾ..ಮಾಮಾ.ದಾದಾ.ಎಂಬ ಹಲವಾರು ಗುಂಪುಗಳಾಗಿ ಎಂಈಎಸ್ ಈಗ ಭಿನ್ನಮತದ ರೋಗದಿಂದ ಬಳಲುತ್ತಿದೆ ಈ ರೋಗಕ್ಕೆ ಔಷಧಿ ಕೊಡಲು ಮಹಾರಾಷ್ಟ್ರದ ನಾಯಕ ಶರದ ಪವಾರ್ ಅವರನ್ನು ಮಾರ್ಚ 31 ರಂದು ಬೆಳಗಾವಿಗೆ ಕರೆಯಿಸಿ ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ತ ಮರಾಠಿ ಮೇಳಾವ್ ನಡೆಸಲು ಮೈದಾನವನ್ನು ಬುಕ್ ಮಾಡಿರುವ ಎಂಈಎಸ್ ನಾಯಕರು ಈಗ ಪೋಲೀಸರ ಅನುಮತಿಗಾಗಿ ಅರ್ಜಿ ಹಾಕಲಿದ್ದಾರೆ ಅಥವಾ ಅರ್ಜಿ ಹಾಕಿದ್ದಾರೆ ಅನ್ನೋದು ಗೌಪ್ಯ ವಿಷಯ ಈ ವಿಷಯ ಮೇಳಾವ್ ನಡೆಯುವ ಒಂದು ದಿನ ಮೊದಲು ಮದ್ಯರಾತ್ರಿ ಅನುಮತಿ ನೀಡಿರುವ ವಿಷಯ ಗೊತ್ತಾಗೋದು

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ ಪವಾರ ಅವರು ಬೆಳಗಾವಿ ಗಡಿ ವಿಚಾರದಲ್ಲಿ ಬೆಳಗಾವಿಯ ಮರಾಠಿ ಭಾಷಿಕರನ್ನು ಯಾವ ರೀತಿ ಪ್ರಚೋದಿಸಿದ್ದಾರೆ ಎಂಬುದು ಪೋಲೀಸ್ ಇಲಾಖೆಗೆ ಗೊತ್ತಿದೆ ಸ್ವಲ್ಪ ಹಳೆಯ ಫೈಲ್ ಗಳನ್ನು ತೆಗೆದು ನೋಡಿದ್ರೆ ಶರದ್ ಪವಾರ್ ಗಡಿಯಲ್ಲಿ ಯಾವ ರೀತಿ ಹೋರಾಟ ಮಾಡಿದ್ರು ಅವರ ಮೇಲೆ ಯಾವ ಯಾವ ಕೇಸ್ ಹಾಕಲಾಗಿತ್ತು ಎಂಬುವದರ ಬಗ್ಗೆ ನಮ್ಮ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರ ಹತ್ತಿರ ಸಂಪೂರ್ಣ ಮಾಹಿತಿ ಇದ್ದು ಅಶೋಕ ಚಂದರಗಿ ಮಹಿತಿಯೊಂದಿಗೆ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಲಿ ಅನ್ನೋದು ಗಡಿನಾಡ ಕನ್ನಡಿಗರ ನಿರೀಕ್ಷೆ ಯಾಗಿದೆ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಭಾಷೆಯ ಹೆಸರಿನಲ್ಲಿ ಎಂಈಎಸ್ ಮತ ಕೇಳಲು ಹೊರಟಿದೆ ಒಂದು ಭಾಷೆಯ ಸಮುದಾಯವನ್ನು ಪ್ರಚೋದಿಸಲು ಬೆಳಗಾವಿಯಲ್ಲಿ ಮೇಳಾವ್ ನಡೆಸಲು ಹೊರಟಿರುವ ಎಂಈಎಸ್ ಕುತಂತ್ರದ ಕುರಿತು ರಾಜ್ಯ ಸರ್ಕಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಿ ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯ ದಲ್ಲಿದ್ದು ವಿವಾದ ಬಗೆಹರಿಸುವ ವರೆಗೂ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದು ಗಡಿ ವಿವಾದದ ಬಗ್ಗೆ ಮುಗ್ದ ಮರಾಠಿಗರನ್ನು ಕೆರಳಿಸಲು ಕರ್ನಾಟಕ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಅನುಮತಿ ಕೊಡಬಾರದು ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳು ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವದು ಅಗತ್ಯವಾಗಿದೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *