ಬೆಳಗಾವಿ
ಬೆಳಗಾವಿಯಲ್ಲಿ ಸಿಕ್ಕಿ ಬಿದ್ದಿರುವ ಶಾರ್ಪ್ ಶೂಟರ್ಸ್ ವಿಚಾರಣೆಯನ್ನ ಪೊಲೀಸರು ತೀವ್ರಗೊಳಿಸಿದ್ದಾರೆ. ಇಂದು 4ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ 6 ಜನ ಬಂಧಿತರನ್ನು ಎಪಿಎಂಸಿ ಪೊಲೀಸರು ಹಾಜರು ಪಡಿಸಿದ್ರು.
ಈ ವೇಳೆ ನ್ಯಾಯಾಧೀಶರು ಹೆಚ್ಚಿನ ವಿಚಾರಣೆಯ ಅಗತ್ಯ ಹಿನ್ನೆಲೆಯಲ್ಲಿ 6 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ. ವೀರ ಮದನರೆಡ್ಡಿ, ಅವಿನಾಶ್ ಅಬುಬಕರ್, ಅಮ್ಜದ್ ಸಯ್ಯದ್ ಹಾಗೂ
ಅಬ್ದುಲ್ ಕರೀಂ,ತಾಹೀರ್ ಹುಸೇನ್ ಪೊಲೀಸ್ ವಶಕ್ಕೆ ನೀಡಲಾಗಿದೆ. ಬಂಧಿತರಿಂದ ಅನೇಕ ಡಕಾಯಿತಿಗಳ ಮಹತ್ವದ ಸುಳಿಯು ಪೊಲೀಸರಿಗೆ ಸಿಕ್ಕಿದೆ.
ಇನ್ನೂ ಬಂಧಿತರಿಗೆ ಮುಂಬೈ, ಪುಣೆ ಹಾಗೂ ಮಂಗಳೂರಿನ ಭೂಗತ ಜಗತ್ತಿನ ನಂಟು ಇರುವುದು ಸಾಬೀತಾಗಿದೆ. ಪೊಲೀಸರಿಂದ ಹೆಚ್ಚಿನ ವಿಚಾರಣೆ ಬಳಿಕ ಮಹತ್ವದ ವಿಷಗಳು ಬಹಿರಂಗವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ವಿಚಾರಣೆ ಬಳಿಕ ಶಾರ್ಪ ಶೂಟರ್ ಬಂಧನದ ಪ್ರಕರಣ ಹೊಸ ಟ್ವಿಸ್ಡ ಪಡೆಯುವ ಸಾಧ್ಯತೆಗಳಿವೆ
ಪೋಲೀಸರಿಗೆ ಬಹುಮಾನ
ಪ್ರಾಣದ ಹಂಗು ತೊರೆದು ಶಾರ್ಪ ಶೂಟರ್ ಗಳನ್ನು ಬಂಧಿಸಿದ ಬೆಳಗಾವಿ ಪೋಲೀಸರ ತಂಡಕ್ಕೆ ಕನ್ನಡಪರ ಹೋರಾಟಗಾರ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ೨೫೦೦ ರೂ ಬಹುಮಾನ ನೀಡುವದಾಗಿ ಘೋಷಿಸಿದ್ದಾರೆ