ಬೆಳಗಾವಿ-
ಬೆಳಗಾವಿ ಪೋಲಿಸರ ಮಿಂಚಿನ ಕಾರ್ಯಾಚರಣೆ. ನಡೆಸಿ ಉಅಂತರಾಜ್ಯ ಶಾರ್ಪ್ ಶೂಟರ್ ಗಳನ್ನು ಬಂಧಿಸಿ ಆತಂಕಕಾರಿ ವಿಷಯವನ್ನು ಬಯಲಿಗೆಳೆದಿದ್ದಾರೆ
. ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೋಲಿಸರು. ವಿಐಪಿ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಐದು ಜನ ಶಾರ್ಪ್ ಶೂಟರಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಬೆಳಗಾವಿಯ ರೆಕ್ಸ್ ಏನಾಕ್ಸ್ ಲಾಡ್ಜ್ ನಲ್ಲಿ ತಂಗಿದ್ದ ಆಗಂತುಕರು. ಬೆಂಗಳೂರು ವಿಳಾಸ ನೀಡಿ ರೂಂ ಪಡೆದಿದ್ದರು ಖಚಿತ ಮಾಹಿತಿ ಮೇರೆಗೆ ಲಾಜ್ ಮೇಲೆ ದಾಳಿ ಮಾಡಿದ ಬೆಳಗಾವಿಯ ಪೋಲೀಸರು ಒಟ್ಟು ಐದು ಜನರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ
ಅಜ್ಞಾತ ಸ್ಥಳಕ್ಕೆ ಆಗುಂತಕರನ್ನ ಕರೆದೊಯ್ದ ಪೋಲಿಸರು. ಆಗುಂತಕರಿಂದ ೫ ಪಿಸ್ತೂಲ್ ೪೦ ಕ್ಕೂ ಹೆಚ್ಚು ಜೀವಂತ ಗುಂಡುಗಳು ಹಾಗೂ ಜಂಬೆಗಳು ಸೇರಿದಂತೆ ಭಾರಿ ಮಾರಕಾಸ್ತೃಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ
. ಶಾರ್ಪ್ ಶೂಟರ್ ಗಳ ಬಗ್ಗೆ ನಿನ್ನೆಯೇ ಬೆಳಗಾವಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಬೆಳಗಾವಿಯ ಎಲ್ಲ ಗಣ್ಯವ್ಯಕ್ತಿಗಳ ಮನೆಗೆ ಭದ್ರತೆ ಒದಗಿಸಿದ್ದ ಪೋಲೀಸರು. ಬೆಳಗಾವಿ ತುಂಬ ಹೈಅಲರ್ಟ್. ಘೋಷಿಸಿ ಆಗುಂತಕರ ಚಲನ ವಲನಗಳ ಮೇಲೆ ನಿಗಾ ವಹಿಸಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ