ಬೆಳಗಾವಿಯಲ್ಲಿ ಶಾರ್ಪ್ ಶೂಟರಗಳ ಬಂಧನ ಪ್ರಕರಣದ ಕುರಿತು. ಡಿಸಿಪಿ ಜಿ.ರಾಧಿಕಾ ಪತ್ರಿಕಾಗೋಷ್ಠಿ ನಡೆಸಿದರು
ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ.
ಮಂಗಳೂರು ನ್ಯಾಯವಾದಿ ನೌಶಾದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಅಪರಾಧಿ ದಿನೇಶ ಶೆಟ್ಟಿ ಜೈಲಿನಿಂದ ತಪ್ಪಿಸಿಕೊಳ್ಳಲು ಮತ್ತು ನಗರದಲ್ಲಿ ಡಕಾಯಿತಿ ನಡೆಸಲು ಹೊಂಚು ಹಾಕಿದ್ದ ಆರು ಜನ ಶಾರ್ಪ ಶೂಟರ್ ಗಳನ್ನು ಬಂಧಿಸಲಾಗಿದ್ದು. ಓರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ರಾಧಿಕಾ ತಿಳಿಸಿದರು
ಬಂಧಿತರಿಂದ 5 ಪಿಸ್ತೂಲ್,
29ಸಜೀವ ಗುಂಡುಗಳು, ವಿವಿಧ ಮಾರಕಾಸ್ತ್ರಗಳು ಸೇರಿದಂತೆ ಒಂದು ಕಾರು ವಶಕ್ಕೆ.ಪಡೆಯಲಾಗಿದೆ
ಬೆಂಗಳೂರು ಮೂಲದ ಮದನರೆಡ್ಡಿ, ಮುಂಬೈ ಮೂಲದ ಅವಿನಾಶ, ಅಮ್ಜದಸಯ್ಯದ ಹಾಗೂ ಪುತ್ತೂರು ಮೂಲದ ಅಬ್ದುಲ್ ಕರಿಮ್, ಮಹ್ಮದ ಹನಿಫ್ ಬಂಧಿತ ಆರೋಪಿಗಳು.
ಇಂಥದೊಂದು ತಂಡ ದುಷ್ಕೃತ್ಯವೆಸಗಲು ಬೆಳಗಾವಿಗೆ ಬಂದಿದೆ ಎಂಬ ಖಚಿತ ಮಾಹಿತಿ ನಮಗೆ ಸಿಕ್ಕಿತ್ತು. ಮುಂಜಾಗ್ರತಾ ಕ್ರಮವಾಗಿ ಶಾಸಕರು ಸೇರಿದಂತೆ ಗಣ್ಯರ ಮನೆಗೆ ಭದ್ರತೆ ನೀಡಲಾಗಿತ್ತು ಎಂದು ಡಿಸಿಪಿ ರಾಧಿಕಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು
ಬಂಧಿತ ಆರೋಪಿಗಳು ನಗರದಲ್ಲಿ ಡಕಾಯತಿ ಮಾಡಿ ಹಣ ಸಂಗ್ರಹಿಸಿ ಅದೇ ಹಣದಲ್ಲಿ ಹಿಂಡಲಗಾ ಕಾರಾಗೃಹದಲ್ಲಿರುವ ದಿನೇಶ ಶೆಟ್ಟಿಯನ್ನು ಜೈಲಿನಿಂದ ಬಿಡಿಸಿಕೊಂಡು ಹೋಗುವ ಸ್ಕೆಚ್ ಹಾಕಿದ್ದರು ಎಂದು ಡಿಸಿಪಿ ರಾಧಿಕಾ ತಿಳಿಸಿದರು
ಆರೋಪಿಗಳನ್ನ ಇನ್ನೂ ಕೂಲಂಕುಷವಾಗಿ ತನಿಖೆಗೆ ಒಳಪಡಿಸಲಿದ್ದೇವೆ. ವಿಚಾರಣೆ ಮುಗಿದ ಬಳಿಕ ಶೀಘ್ರದಲ್ಲಿ ಪ್ರಕರಣದ ಪರಿಪೂರ್ಣ ಸತ್ಯಾಸತ್ಯತೆ ತಿಳಿಯಲಿದೆ. ಬೆಳಗಾವಿಯಲ್ಲಿ ಡಿಸಿಪಿ ಜಿ.ರಾಧಿಕಾ ಹೇಳಿದರು