ಬೆಳಗಾವಿ- ಬೆಳಗಾವಿ ನಗರದಲ್ಲಿ ಬೀಪ್ ಸ್ಟೋರ್ ಮಾಡುವ ಶೀತಗೃಹಗಳ ಮೇಲೆ ದಾಳಿ ನಡೆದ ಬೆನ್ನಲ್ಲಿಯೇ ಪಾಲಿಕೆ ಮತ್ತು ಪೋಲೀಸ್ ಅಧಿಕೃತ ಕಸಾಯಿಖಾನೆಯ ಮೇಲೆ ದಾಳಿ ನಡೆಸಿ ಲೈಸನ್ಸ ಇಲ್ಲದ ಅನಧೀಕೃತ ಅಂಗಡಿಕಾರರಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ
ಸೋಮವಾರ ಬೆಳಿಗ್ಗೆ ಪಾಲಿಕೆ ಆಯುಕ್ತ ಶಶಿಧರ ಕುರೇರ ಡಿಸಿಪಿ ಸೀಮಾ ಲಾಟ್ಕರ್ ಅವರು ಕೇಂದ್ರ ಬಸ್ ನಿಲ್ಧಾಣದ ಎದುರಿನಲ್ಲಿರುವ ಕಸಾಯಿ ಗಲ್ಲಿಯ ಅಧಿಕೃತ ಕಸಾಯಿಖಾನೆಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಪರಶೀಲಿಸಿದರು ಜೊತೆಗೆ ಬೀಪ್ ಮತ್ತು ಮಟನ್ ಮಾರ್ಕೆಟ್ ನಲ್ಲಿ ಲೈಸನ್ಸ ಹೊಂದಿದ ಅಂಗಡಿಗಳೆಷ್ಟು ಲೈಸನ್ಸ ಇಲ್ಲದ ಅಂಗಡಿಗಳೆಷ್ಟು ಅನ್ನೋದರ ಬಗ್ಗೆ ಪರಶೀಲನೆ ಕೂಡಾ ನಡೆಯಿತು
ಪಾಲಿಕೆಯ ಮಟನ್ ಮತ್ತು ಭೀಪ್ ಮಾರ್ಕೆಟ್ ಆವರಣದಲ್ಲಿ ಯಾವುದೇ ಕಾರಣಕ್ಕು ಜಾನುವಾರಗಳನ್ನು ಕೊಯ್ಯುವಂತಿಲ್ಲ ನಿಗದಿತ ಸ್ಲಾಟರ್ ಹೌಸ್ ನಲ್ಲಿ ಕ್ಲೀನ್ ಮಾಡಿ ಮಾರ್ಕೆಟ್ ನಲ್ಲಿ ಕೇವಲ ಮಾರಾಟ ಮಾಡಬೇಕು ಎಂದು ಅಧಿಕಾರಿಗಳು ತಾಕೀತು ಮಾಡಿದರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಪಾಲಿಕೆ ಆಯುಕ್ತ ಶಶಿಧರ ಕುರೇರ ಬೆಳಗಾವಿ ನಗರದಲ್ಲಿ ಮಟನ್ ಹಾಗು ಬೀಫ್ ಅಂಗಡಿಗಳು ಸೇರಿದಂತೆ ಒಟ್ಟು 160 ,ಲೈಸನ್ಸ ಹೊಂದಿದ ಅಧಿಕೃತ ಅಂಗಡಿಗಳಿವೆ ಲೈಸನ್ಸ ಹೊಂದಿರದ 140 ಅನಧಿಕೃತ ಅಂಗಡಿಗಳಿದ್ದು ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುತ್ತೇವೆ ಜೊತೆಗೆ ಕಸಾಯಿಖಾನೆಗಳ ಸುತ್ತಲು ದುರ್ವಾಸನೆ ಬಾರದ ಹಾಗೆ ಕೊಳಚೆ ನೀರು ಸಂಸ್ಕರಣಾ ಘಟಕ ಸೀವೇಜ್ ಟ್ರಿಟಮೇಂಟ್ ಪ್ಲಾಂಟ್ ನಿರ್ಮಾಣ ಮಾಡುತ್ತೇವೆ ಕಸಾಯುಖಾನೆಗಳ ತ್ಯಾಜ್ಯ ಬೇಕಾಬಿಟ್ಟಿಯಾಗಿ ಚೆಲ್ಲುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಸ್ವಚ್ಛತಾ ಕ್ರಮಗಳನ್ನು ಇಲ್ಲಿ ಅನುಸರಿಸಲು ಕಟ್ಟು ನಿಟ್ಟಿನ ವ್ಯೆವಸ್ಥೆ ಮಾಡುತ್ತೇವೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು
ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ ನಗರಸೇವಕ ಬಾಬುಲಾಲ ಮುಜಾವರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು
ಅಧಿಕಾರಿಗಳು ನಡೆಸಿದ ಸಂಧರ್ಭದಲ್ಲಿ ಈ ಪ್ರದೇಶದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು