Breaking News

ಕನ್ನಡಿಗರ ಕೂಗಿಗೆ ಸ್ಪಂದಿಸಿದ ವೀರ ಕನ್ನಡಿಗ ಶಶಿಧರ್ ಕುರೇರ್ ….!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಕಪಿಮುಷ್ಠಿಯಲ್ಲಿದೆ ಪಾಲಿಕೆಯಲ್ಲಿ ಕನ್ನಡದ ಹಿತ ಕಾಯುವದು ಸರಳ ಮಾತಲ್ಲ ಆದರೆ ಬೆಳಗಾವಿ ಮಹಾನಗರ ಪಾಲಿಕೆ ಕೋರ್ಟ್ ರಸ್ತೆಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಹೆಸರು ನಾಮಕರಣ ಮಾಡಿ ಕನ್ನಡದ ಹಿತ ಕಾಪಾಡಿದ್ದು ಗಡಿನಾಡು ಗುಡಿಯಲ್ಲಿ ಹಬ್ಬದ ವಾತಾವರಣ ಮೂಡಿಸಿದೆ

ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಅಧಿಕಾರ ಸ್ವೀಕರಿಸಿದ ಒಂದೇ ವಾರದಲ್ಲಿ ರಾಜ್ಯೋತ್ಸವದ ಪೂರ್ವಭಾವಿ ಸಭೆ ಕರೆದಿದ್ದರು ಈ ಸಭೆಯಲ್ಲಿ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂರಕರ ಅವರು ರಾಯಣ್ಣ ರಸ್ತೆಯ ನಾಮಕರಣದ ಬಗ್ಗೆ ಮಹಾನಗರ ಪಾಲಿಕೆ ರಾಯಣ್ಣನಿಗೆ ಅವಮಾನ ಮಾಡಿದೆ ರಾಯಣ್ಣನ ರಸ್ತೆಗೆ ಕೋರ್ಟ್ ರಸ್ತೆ ಎಂದು ಫಲಕ ಹಾಕಿದೆ ಎಂದು ಜೋರಾಗಿಯೇ ಅವಾಜ್ ಹಾಕಿದ್ದರು ಇದಕ್ಕೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಸ್ವಲ್ಪ ತಡೀರೀ ನಾನು ಎಲ್ಲ ಸರೀ ಮಾಡ್ತೀನಿ ಎಂದಿದ್ದರು

ಯಾವುದೇ ಒಂದು ರಸ್ತೆಗೆ ನಾಮಕರಣ ಮಾಡಬೇಕಾದರೆ ಬೆಳಗಾವಿ ಮಹಾನಗರ ಪಾಲಿಕೆ ಯಲ್ಲಿ ಸರ್ಕಸ್ ಮಾಡಬೇಕಾಗುತ್ತದೆ ಮೇಯರ್ ಸೂಚನೆ ಕೊಟ್ಟರೂ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಮುಂದಿಡುತ್ತಾರೆ

ಪಾಲಿಕೆ ಆಯುಕ್ತ ಶಶಿಧರ ಕುರೇರ ಕನ್ನಡಿಗರ ಹೋರಾಟಕ್ಕೆ ಸ್ಪಂದಿಸಿ ದಿನ ಬೆಳಗಾಗುವಷ್ಟರಲ್ಲಿ ಕೋರ್ಟ್ ರಸ್ತೆ ಎಂಬ ಫಲಕ ತೆರವು ಮಾಡಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂಬ ಫಲಕ ಹಾಕಿಸಿದ ಶಶಿಧರ ಕುರೇರ ಗಡಿನಾಡ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಈ ವಿಷಯದಲ್ಲಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮೇಯರ್ ಬಸವರಾಜ ಚಿಕ್ಕಲದಿನ್ನಿ ಅವರು ಕನ್ನಡದ ಕಾಳಜಿಯನ್ನು ತೋರಿಸಿದ್ದಾರೆ ಮೇಯರ್ ಚಿಕ್ಕಲದಿನ್ನಿ ನಗರದ ರಾಣಿ ಚನ್ನಮ್ಮ ವೃತ್ತದ ವೀಕ್ಷಣೆ ಮಾಡಿ ವೃತ್ತದ ಸುಂದರೀಕರಣ ಮಾಡುವ ಬಗ್ಗೆ ಪಾಲಿಕೆ ಆಯುಕ್ತರಿಗೆ ಸೂಚನೆ ಕೊಟ್ಟಿದ್ದು ಆಯುಕ್ತ ಶಶಿಧರ ಕುರೇರ ಚನ್ನಮ್ಮ ವೃತ್ತಕ್ಕೆ ಕನ್ನಡದ ಮೇರಗು ನೀಡಲು ಯೋಜನೆ ರೂಪಿಸಿದ್ದಾರೆ ಮೇಯರ್ ಚಿಕ್ಕಲದಿನ್ನಿ ರಾಜ್ಯೋತ್ಸವದ ದಿನ ಚನ್ನಮ್ಮ ವೃತ್ತವನ್ನು ಜನ ನಿಂತು ನೋಡುವ ಹಾಗೆ ವಿಶೇಷ ಅಲಂಕಾರ ಮಾಡುವದಾಗಿ ಭರವಸೆ ನೀಡಿದ್ದು ಈ ಬಾರಿ ಕನ್ನಡದ ಹಬ್ಬದಲ್ಲಿ ಕನ್ನಡದ ಭರವಸೆಯ ಬೆಳಕು ಮೂಡಿದೆ

ಜಿಲ್ಲಾಧಿಕಾರಿಗಳು ಧೈರ್ಯ ಮಾಡಲಿ

ರಾಜ್ಯೋತ್ಸವದ ದಿನ ಈಎಸ್ ಆಚರಿಸುವ ಕರಾಳ ದಿನಾಚರಣೆ ತಡೆಯಲು ಕನ್ನಡಿಗರು ಸೆಡ್ಡು ಹೊಡೆದಿದ್ದು ಕರವೇ ಕರಾಳ ದಿನಾಚರಣೆಗೆ ಮುತ್ತಿಗೆ ಹಾಕಿ ಅದನ್ನು ತಡೆಯುವ ತಯಾರಿ ನಡೆಸಿದೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಸರ್ಕಾರಕ್ಕೆ ಪರಿಸ್ಥಿತಿಯ ಮನವರಿಕೆ ಮಾಡಿಸಿ ಈ ವಿಷಯದಲ್ಲಿ ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ಕರಾಳ ದಿನಾಚರಣೆಯನ್ನು ನಿಷೇಧ ಮಾಡಿ ಆದೇಶ ಹೊರಡಿಸಿ ರಾಜ್ಯೋತ್ಸವದ ಉತ್ಸಾಹವನ್ನು ಹೆಚ್ಚಿಸಬೇಕು ಜಿಲ್ಲಾಧಿಕಾರಿಗಳು ಈ ನಿರ್ಧಾರ ಕೈಗೊಂಡರೆ ಬೆಳಗಾವಿಯ ಕನ್ನಡಪರ ಹೋರಾಟದ ಇತಿಹಾಸದ ಮಹಾರಾಜರಾಗುವದರಲ್ಲಿ ಸಂದೇಹವೇ ಇಲ್ಲ

21 ರಂದು ಟಿಎ ನಾರಾಯಣಗೌಡ ಬೆಳಗಾವಿಗೆ
ಕರಾಳ ದಿನಾಚರಣೆಯನ್ನು ತಡೆಯಲು ತಯಾರಿ ನಡೆಸಲು ಕರವೇ ಅಧ್ಯಕ್ಷ ಟಿ ಎ ನಾರಾಯಣ ಗೌಡರು 21 ರಂದು ಬೆಳಗಾವಿಗೆ ಭೇಟಿ ನೀಡಿ ಅಂದು ಬೆಳಗಾವಿ,ಬಾಗಲಕೋಟೆ,ವಿಜಯಪೂರ,ಹುಬ್ಬಳ್ಳಿ ಧಾರವಾಡ,ಗದಗ ಹಾವೇರಿ ಉತ್ತರ ಕನ್ನಡ ಜಿಲ್ಲೆಯ ಪದಾಧಿಕಾರಿಗಳ ಸಭೆ ನಡೆಸಿ ಕರಾಳ ದಿನಾಚರಣೆ ತಡೆಯಲು ಸಜ್ಜಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *