ಬೆಳಗಾವಿ- ಒಂದು ಕಾಲವಿತ್ತು,ಎಸ್ ಬಿ ಸಿಧ್ನಾಳ ಮತ್ತು ಶಂಕರಾನಂದ ಬೆಳಗಾವಿ ಜಿಲ್ಲೆ ಆಳುತ್ತಿದ್ದರು,ಇಬ್ಬರೂ ಹೇಳಿದ್ದೆ ವೇದವಾಕ್ಯ ಆಗಿತ್ತು,ಅವರ ಹಾಗೆ ಅವರ ಮಕ್ಕಳು ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗಲೇ ಇಲ್ಲ,ಇಬ್ಬರು ದಿಗ್ಗಜರ ಮಕ್ಕಳು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಲಿಲ್ಲ.
ಮಾಜಿ ಸಂಸದ ಎಸ್ ಬಿ ಸಿಧ್ನಾಳ ಅವರು ಇಬ್ಬರು ಮಕ್ಜಳಲ್ಲಿ ಒಬ್ಬನಾದರೂ ರಾಜಕೀಯವಾಗಿ ಬೆಳೆಯಬೇಕೆಂದು ಎಲ್ಲಿಲ್ಲದ ಪ್ರಯತ್ನ ಮಾಡಿದರು ಆದ್ರೆ ಅದು ಸಾಧ್ಯ ಆಗಲೇ ಇಲ್ಲ..
ಆದ್ರೆ ಎಸ್ ಬಿ ಸಿಧ್ನಾಳ ಅವರ ಪುತ್ರ ಶಶಿಕಾಂತ ಸಿಧ್ನಾಳ ಮಾತ್ರ ಯಾವುದೇ ಚುನಾವಣೆ ಬರಲಿ,ಟಿಕರಟ್ ಕೊಡುವ ಪ್ರಕ್ರಿಯೆ ಆರಂಭವಾದಾಗ ಮಾತ್ರ ಕುಂಬಕರ್ಣ ನಿದ್ರೆಯಿಂದ ಎಚ್ಚರಗೊಂಡು ನಾನೂ ಅಖಾಡಾದಲ್ಲಿ ಇದ್ದೇನೆ ಎಂದು ಮೆಸ್ಸೇಜ್ ಕೊಡಲು ಲಕ್ಷಾಂತರ ರೂ ಖರ್ಚು ಮಾಡಿ ನಾನೇ ಜನನಾಯಕ,ಸಮಾಜ ಸೇವೆಯೇ ನನ್ನ ಕಾಯಕ ಎಂದು ಎಂದು ಹೇಳಿಕೊಂಡರೆ ಅದನ್ನು ಸಾಮಾನ್ಯ ಜನ ನಂಬಲು ಸಾಧ್ಯವೇ…
ಸುಳ್ಳು ಹೇಳಿದರೂ ಅದು ಸತ್ಯಕ್ಕೆ ಹತ್ತಿರ ಇರಬೇಕು ,ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಶಶಿಕಾಂತ ಸಿಧ್ನಾಳ ಕಾಣಿಸಿಕೊಳ್ಳುವದೇ ಇಲ್ಲ,ಇಲೆಕ್ಷನ್ ಬಂದಾಗ ಧುತ್ತೆಂದು ಪ್ರತ್ಯಕ್ಷ ಆಗುವ ಇವರು ನಾನೂ ಅಖಾಡದಲ್ಲಿರುವ ಪೈಲವಾನ್ ಎಂದು ಬಿಂಬಿಸುವದು ಸಿದ್ನಾಳ ಪುತ್ರನ ಸಂಪ್ರದಾಯ ಆಗಿ ಬಿಟ್ಟಿದೆ.
ಶಶಿಕಾಂತ ಸಿದ್ನಾಳ ಅವರಿಗೆ ಮಾಜಿ ಸಂಸದ ಸಿದ್ನಾಳ ಅವರ ಪುತ್ರ ಎನ್ನುವ ಹೆಗ್ಗಳಿಕೆ ಬಿಟ್ಟರೆ ಅವರು ಸಾಮಾಜಿಕವಾಗಿ ಸ್ವತಃ ಗುರುತಿಸಿಕೊಳ್ಳುವ ಯಾವದೇ ಕಾರ್ಯ ಮಾಡಿಲ್ಲ,ಶಶಿಕಾಂತ ಸಿದ್ನಾಳ ಗಿಂತಲೂ ಅವರ ಪುತ್ರ ದಿಗ್ವಿಜಯ ಬಿಜೆಪಿ ಘಟನೆಯಲ್ಲಿ ಹೊಸ ಛಾಪು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾನೆ.ಸಿದ್ನಾಳ ಅವರ ಇವರ ಇನ್ನೊಬ್ಬ ಪುತ್ರ ಶಿವಕಾಂತ,ರಾಜಕೀಯದಲ್ಲಿ ಗುರುತಿಸಿಕೊಳ್ಳದಿದ್ದರೂ ಅನೇಕ ಮಾನವೀಯ ಕಾರ್ಯಗಳನ್ನು ಮಾಡುವ ಮೂಲಕ ಸಿಧ್ನಾಳ ಮನೆತನಕ್ಕೆ ಗೌರವ ತಂದುಕೊಟ್ಟಿದ್ದಾರೆ.