ಬೆಳಗಾವಿ-ಬೆಳಗಾವಿಯ ಶಿವಗಂಗಾ ಸ್ಕೇಟಿಂಗ್ ರಿಂಗ್ ನಲ್ಲಿ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ದೆಗೆ ಪಂಜಾಬಿನ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಖ್ಯಾತ ಸ್ಕೇಟಿಂಗ್ ಕ್ರಿಡಾಪಟು ಎ ಡಿ ಶರ್ಮಾ ಅವರು ಚಾಲನೆ ನೀಡಿದರು
ಗುರುವಾರ ಬೆಳಿಗ್ಗೆ ಸ್ಕೇಟಿಂಗ್ ರೇಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು ಬೆಳಗಾವಿ ನಗರ ಸ್ಕೇಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳುತ್ತದೆ ಶಿವಗಂಗಾ ಸ್ಕೇಟಿಂಗ್ ರಿಂಗ್ ಅನೇಕ ವಿಶ್ವದಾಖಲೆಗಳಿಗೆ ಸಾಕ್ಷಿಯಾಗಿದ್ದು ಬೆಳಗಾವಿ ನಗರ ಸ್ಕೇಟಿಂಗ್ ಕ್ರಿಡಾಪಟುಗಳಿಗೆ ಸ್ಪೂರ್ತಿಯಾಗಿದೆ ಎಂದರು
ಮಾಜಿ ಉಪ ಮಹಾಪೌರ ಸಂಜಯ ಶಿಂಧೆ ಮುಖ್ಯ ಅತಿಥಿಯಾಗಿ ಮಾತನಾಡಿ ಶಿವಗಂಗಾ ಸ್ಕೇಟಿಂಗ್ ರೂವಾರಿ ಜ್ಯೋತಿ ಚಿಂಡಕ ಅವರು ನಿರಂತರವಾಗಿ ಸ್ಕೇಟಿಂಗ್ ಸ್ಪರ್ಧೆಗಳನ್ನಯ ಆಯೋಜಿಸಿ ಸ್ಕೇಟಿಂಗ್ ಪಟುಗಳಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ ಸರ್ಕಾರ ಶಿವಗಂಗಾ ಸ್ಕೇಟಿಂಗ್ ಸಂಸ್ಥೆಗೆ ಸ್ಪರ್ದೆಗಳನ್ನು ಆಯೋಜಿಸಲು ಎಲ್ಲ ರೀತಿಯ ಸಹಾಯ ಸವಲತ್ತುಗಳನ್ನು ದೊರಕಿಸಿಕೊಡಬೇಕು ಎಂದು ಹೇಳಿದರು
ಇಂದು ನಡೆದ ಸ್ಕೇಟಿಂಗ್ ರೇಸ್ ನಲ್ಲಿ 18 ವರ್ಷದ ಪರುಷರ ವಿಭಾಗದಲ್ಲಿ ಬೆಳಗಾವಿಯ ಸಬಸ್ಟೇನ್ ಪ್ರಥಮ ವಿಶು ಎರಡನೇಯ ಸ್ಥಾನ ಡ್ಯಾನಿ ಮೂರನೇಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ 18 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಸಾನಿಕಾ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ
16-18 ವರ್ಷದ ಪುರುಷರ ವಿಭಾಗದಲ್ಲಿ ಅನಿಕೇತ ಚಿಂಡಕ ಪ್ರಥಮ ಮತ್ತು ಅವಧೂತ ನಾಯಕ ಎರಡನೇಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ
ಇಂದು ವಿವಿಧ ವಯಸ್ಸಿನ ಕ್ರಿಡಾಪಟುಗಳ ರೇಸಿಂಗ್ ಸ್ಪರ್ದೆ ನಡೆದಿದ್ದು ಒಟ್ಟಾರೆ 500 ಕ್ಕು ಹೆಚ್ಚು ಸ್ಕೇಟಿಂಗ್ ಕ್ರಿಡಾಪಟುಗಳು ಭಾಗವಹಿಸಿದ್ದರು