ಬೆಳಗಾವಿ- ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿ,ಹಿಂದೂಸ್ತಾನವನ್ನು ಒಗ್ಗೂಡಿಸಿದ ಸಹಾಸ ಮತ್ತು ಶೌರ್ಯಕ್ಕೆ ಸ್ಪೂರ್ತಿಯ ಸೆಲೆಯಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವಕ್ಕೆ ಸಂಸದ ಸುರೇಶ ಅಂಗಡಿ ಅದ್ಧೂರಿ ಚಾಲನೆ ನೀಡಿದರು
ಬೆಳಗಾವಿಯ ಶಿವಾಜಿ ಗಾರ್ಡನ್ ದಲ್ಲಿ ಶಿವಾಜಿ ಮಹಶರಾಜರ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿ ಶಿವಾಜಿ ಮಹಾರಾಜರ ಇತಿಹಾಸದ ಗತ ವೈಭವ ಬಿಂಬಿಸುವ ಕಲಾ ಮೆರವಣಿಗೆಗೆ ಚಾಲನೆ ನೀಡಲಾಯಿತು
ರಾಜ್ಯ ಸರ್ಕಾರ ಪ್ರತಿ ವರ್ಷ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸುತ್ತಿದೆ ಸರ್ಕಾರದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಶಾಸಕ ಸಂಬಾಜಿ ಪಾಟೀಲ,ಸಂಜಯ ಪಾಟೀಲ ಮೇಯರ್ ಸರೀತಾ ಪಾಟೀಲ ,ಜಿಲ್ಲಾಧಿಕಾರಿ ಎನ್ ಜಯರಾಂ ,ರಾಜಶ್ರೀ ಜೈನಾಪುರೆ ವಿದ್ಯಾ ಭಜಂತ್ರಿ ಸೇರಿದಂತೆ ಹಲವಾರು ಜನ ಗಣ್ಯರು ಭಾಗವಹಿಸಿದ್ದರು
ಮೆರವಣಿಗೆಯಲ್ಲಿ ಡೊಳ್ಳು ಕುಣಿತ,ವಿವಿಧ ಕಲಾತಂಡಗಳು ಭಾಗವಹಿಸಿದ್ದವು ಶಿವಾಜಿ ಮಹಾರಾಜರ ಜಯಂತಿ ಉತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ