Breaking News

ಯಡಿಯೂರಪ್ಪ ಅವರನ್ನು ಭೇಟಿಯಾದ ಶಿವಾಜಿ ಸುಂಠಕರ

 

ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಟಕ ಮುಕ್ತಾಯದ ಹಂತದಲ್ಲಿದೆ ಮಾಜಿ ಮಹಾಪೌರ ವಿಜಯ ಮೋರೆ ಎಂಈಎಸ್ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದರೆ ಇನ್ನೊಬ್ಬ ಮಾಜಿ ಮಹಾಪೌರ ಶಿವಾಜಿ ಸುಂಠಕರ ತಮ್ಮ ಬೆಂಬಲಿಗ ನಾಯಕರೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ

ಸೋಮವಾರ ಮಾಜಿ ಮಹಾಪೌರ ಶಿವಾಜಿ ಸುಂಠಕರ ಮತ್ತು ಎಂಈಎಸ್ ತಾಲೂಕಾ ಪಂಚಾಯ್ತಿ ಸದಸ್ಯ ಅಷ್ಟೇಕರ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಚಿಕ್ಕೋಡಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ಮಾಡಿದ್ದಾರೆ
ಎಂಈಎಸ್ ನಾಯಕರ ಧೋರಣೆಯಿಂದ ಬೇಸತ್ತ ಶಿವಾಜಿ ಸುಂಠಕರ ಹಲವಾರು ದಿನಗಳಿಂದ ಶಾಸಕ ಸಂಜಯ ಪಾಟೀಲ ಅವರ ಜೊತೆ ಗುರುತಿಸಿಕೊಂಡಿದ್ದು ಅವರು ಮಂಗಳವಾರ ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಸೇರಲಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿವೆ
ಗಡಿನಾಡ ಸಮುದ್ರದಲ್ಲಿ ಈಗ ಎಂಈಎಸ್ ಹಡಗು ಮುಳಗುತ್ತಿದೆ ಹೀಗಾಗಿ ರಾಜಕೀಯ ಜೀವ ಉಳಿಸಿಕೊಳ್ಳಲು ಎಂಈಎಸ್ ನಾಯಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದು ಬಿಜೆಪಿ ನಾಡವಿರೋಧಿಗಳಿಗೆ ಆಶ್ರಯ ನೀಡುತ್ತದೆಯೋ ಇಲ್ಲವೋ ಅನ್ನೋದನ್ನು ಕಾದು ನೋಡಬೇಕಿದೆ

ಚಿಕ್ಕೋಡಿಯಲ್ಲಿ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಶಿವಾಜಿ ಸುಂಠಕರ ಮತ್ತು ಅವರ ಬೆಂಬಲಿಗರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದು ಶಿವಾಜಿ ಸುಂಠಕರ ಅವರು ಬೆಳಗಾವಿ ಉತ್ತರ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದು ಬೆಳಗಾವಿ ಉತ್ತರದಿಂದ ಶಿವಾಜಿ ಸುಂಠಕರ ಅವರಿಗೆ ಟಿಕೆಟ್ ಕೊಡಿಸಿ ಗ್ರಾಮೀಣ ಕ್ಷೇತ್ರದಲ್ಲಿ ಶಿವಾಜಿ ಸುಂಠಕರ ಅವರ ವರ್ಚಸ್ಸಿನ ಲಾಭ ಪಡೆಯುವದು ಶಾಸಕ ಸಂಜಯ ಪಾಟೀಲರ ಮಾಸ್ಟರ್ ಪ್ಯಾನ್ ಆಗಿದೆ ಎನ್ನುವ ಚರ್ಚೆ ಈಗ ಬಿಜೆಪಿ ವಲಯದಲ್ಲಿಯೇ ಶುರುವಾಗಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *