ಬೆಳಗಾವಿ: ನಿವೃತ್ತ ಡಿಎಸ್ಪಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಮಾಜಿ ಮೇಯರ್ ಶಿವಾಜಿ ಸುಂಟಕರ್ ನ್ಯಾಯಾಂಗ ಬಂಧನಕ್ಕೆ.ಒಪ್ಪಿಸಲಾಗಿದೆ ಎಪ್ರೀಲ್ ೨೮ ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಸುವಂತೆ ಬೆಳಗಾವಿಯ ೨ನೇ ಜೆಎಂಎಫ್.ಸಿ ನ್ಯಾಯಾಲಯ. ಆದೇಶಿಸಿದೆ
ಬೆಳಗಾವಿ ಮಾಜಿ ಮೇಯರ ಎಂ.ಇ.ಎಸ್ ಮುಖಂಡ ಶಿವಾಜಿ ಸುಂಠಕರ ಗುಂಡಾಗರ್ದಿ ಹೇಚ್ಚಾಗಿದ್ದು ಮಾಜಿ ಪೊಲೀಸ್ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಂಧನಕ್ಕೊಳಗಾಗಿದ್ದಾನೆ.
ಬೆಳಗಾವಿ ರಾಮತಿರ್ಥನಗರದ ನಿವೃತ್ತ ಡಿವೈಎಸ್ಪಿ ಸದಾನಂದ ಪಡೋಳ್ಕರ್ ಎಂಬ ಮಾಜಿ ಪೊಲೀಸ್ ಅಧಿಕಾರಿ ವಾಕಿಂಗ್ ಮಾಡಿ ಮರಳಿ ಮನೆಗೆ ತೆರಳುವಾಗ ರಸ್ತೆ ಮೇಲೆ ಅಡ್ಡಲಾಗಿ ವಾಹನ ನಿಲ್ಲಿಸಿದ್ದನ್ನು ಪ್ರಶ್ನೇ ಮಾಡಿದ್ದೆ ತಪ್ಪೆಂದು ತಿಳಿದ ಗುಂಡಾ ಮಾಜಿ ಮೇಯರ್ ಶಿವಾಜಿ ಸುಂಟಕರ್ ಮತ್ತು ಅವನ ಸಹಚರರು ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ
ಹಲ್ಲೆಗೋಳಗಾದ ಮಾಜಿ ಡಿ.ವೈ. ಎಸ್.ಪಿ ಸದಾನಂದ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ಶಿವಾಜಿ ಸುಂಟಕರ್ ಬಂದಿಸಿದ್ದಾರೆ. ಮಗ ಸೇರಿ ನಾಲ್ಕು ಆರೋಪಿಗಳು ಪರಾರಿಯಾಗಿದ್ದು , ಪರಾರಿಯಾದ ಆರೋಪಿಗಳನ್ನು ಆದಷ್ಟು ಬೇಗ ಬಂದಿಸುವುದಾಗಿ ಬೆಳಗಾವಿ ಡಿ.ಸಿ.ಪಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ
ಹಲ್ಲೆಗೊಳಗಾದ ಸದಾನಂದ ಪಡೋಳಕರ ಹಲ್ಲೆಯನ್ನು ಖಂಡಿಸಿದ್ದು ನಮ್ಮಂತ ಪೊಲೀಸ್ ಅಧಿಕಾರಿ ಮೇಲೆನೇ ಹೀಗೆ ಹಲ್ಲೆ ನಡೆದರೆ ಸಾಮನ್ಯ ಜನರ ಪರಿಸ್ಥಿತಿ ಹೇಗೆ ಸರ್ ಎಂದು ಮಾದ್ಯಮದವರನ್ನೆ ಮುಂದೆ ಅಳಲು ತೊಡಿಕೊಂಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ