ಬೆಳಗಾವಿ ಸುದ್ದಿ: ನಾಲ್ಕು ದಶಕಗಳ ಹಿಂದೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ವೀರಶೈವ ಲಿಂಗಾಯತ ಎಂಬ ತಾರತಮ್ಯ, ಭೇದ ಭಾವ ಇರಲಿಲ್ಲ. ಇಂತಹ ಸಂದರ್ಭದಲ್ಲಿಯೂ ಉತ್ತರ ಕರ್ನಾಟಕ ನಾಗನೂರು ರುದ್ರಾಕ್ಷಿ ಮಠ ಮತ್ತು ದಕ್ಷಿಣ ಕರ್ನಾಟಕದ ಸಿದ್ದಗಂಗಾ ಮಠ ನಡುವೆ ಅನ್ಯೋನ್ಯ ಸಂಬಂಧ ಇತ್ತು. ಹೇಗೆ ಎಂದು ಅಂತೀರಾ? ಹಾಗಾದರೆ ಬೆಳಗಾವಿ ಸುದ್ದಿ ವಿಶೇಷ ಲೇಖನ ಓದಿ. 1967ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ಶಿವಾನುಭವ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಮಹಾಸ್ವಾಮಿಗಳು ಮತ್ತು ತುಮಕೂರಿನ ಸಿದ್ದಗಂಗಾ ಮಠ ಶ್ರೀ ಶಿವಕುಮಾರ್ ಮಹಾಸ್ವಾಮಿಗಳು ಕೇಂದ್ರ ಬಿಂದು ವಾಗಿದ್ದರು. ಈ ಸಮ್ಮೇಳನದಲ್ಲಿ ಭಾಗವಹಿಸಲು ಬೆಳಗಾವಿ ಬಂದ ನಡೆದಾಡುವ ದೇವರು ಬೆಳಗಾವಿ ರುದ್ರಾಕ್ಷಿ ಮಠದಲ್ಲಿ ಮೂರು ದಿನಗಳ ಕಾಲ ತಂಗಿದ್ದರು. ಇವರು ಮಠದಲ್ಲಿ ಉಳಿದ ಸಂದರ್ಭದಲ್ಲಿ ಅವರ ನಡವಳಿಕೆ, ಪೂಜೆ ಮತ್ತು ಆಧ್ಯಾತ್ಮಿಕ ಚಟುವಟಿಕೆ ಕಂಡು ದಂಗಾಗಿದ್ದರು . ಬೆಳಗಿನ ಜಾವ ನಾಲ್ಕು ಗಂಟೆಗೆ ನಿದ್ರೆಯಿಂದ ಎಚ್ಚರವಾಗುವುದು, ಶಿವನಾಮ ಜಪಿಸಿ, ಹಣೆಗೆ ವಿಭೂತಿ ಹಚ್ಚಿಕೊಂಡುವ ಸ್ಮರಣೆಯಲ್ಲಿ ಗಂಟಿಗಳ ಕಾಲ ತಲ್ಲೀನರಾಗಿದ್ದ ನಡೆದಾಡುವ ದೇವರ ಶಿವನಾಮ ಸ್ಮರಣೆ ಕಂಡು 1967ರಲ್ಲಿ ಬೆಳಗಾವಿ ಜಿಲ್ಲೆಯ ಮಠಾಧೀಶರು ಶಿವಕುಮಾರ್ ಮಹಾಸ್ವಾಮಿಗಳ ಭಕ್ತರಾಗಿದ್ದರು.
ಈ ನಡೆದಾಡುವ ದೇವರು ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಯ ಸಪ್ತಋಷಿಗಳು ಶ್ರೀಗಳನ್ನು ಆಹ್ವಾನ ನೀಡಿ ಶ್ರೀಗಳ ಆಧ್ಯಾತ್ಮಿಕ ನಡುವಳಿಕೆ ಕಂಡು ಲಿಂಗಾಯತ ಸಮಾಜದ ಮೇಲೆ ತಮ್ಮ ಗೌರವವನ್ನು, ನಂಬಿಕೆಯನ್ನು ಹೆಚ್ಚಿಸಿಕೊಂಡಿದ್ದರು.
1999 ರಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮತ್ತೊಂದು ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿಯೂ ಸಿದ್ದಗಂಗಾ ಮಠದ ಶ್ರೀಗಳು ಭಾಗವಹಿಸಿ ಗಂಟೆ ಗಟ್ಟಲೇ ಆಶೀರ್ವಚನ ನೀಡಿದ್ದನ್ನು ಶ್ರೀ ಗಳ ಭಕ್ತ ಪ್ರೊ. ಬಿ.ಎಸ್. ಗವಿಮಠ ಅವರು ಈಗಲೂ ಶ್ರೀ ಗಳ ಬೆಳಗಾವಿ ಭೇಟಿಯನ್ನು ಆತ್ಮೀಯವಾಗಿ ಸ್ಮರಿಸುತ್ತಾರೆ.
ಶ್ರೀಗಳ ಆರೋಗ ಚೇತರಿಸಲಿ