ಬೆಳಗಾವಿ- ಲಾಲ್ ಡೌನ್ ನಿಂದಾಗಿ ನೇಕಾರರ ಬದುಕು ಬೀದಿಗೆ ಬಂದಿದೆ.ತೀವ್ರ ಸಂಕಷ್ಟ ಅನುಭವಿಸುತ್ತಿರುವ ಅವರು ಆತ್ಮಹತ್ಯೆಯ ಹಾದಿ ಹಿಡಿದರೂ ಬೆಳಗಾವಿ ಜಿಲ್ಲೆಯವರೇ ಆಗಿರುವ ಜವಳಿ ಮಂತ್ರಿ ಶ್ರೀಮಂತ ಪಾಟೀಲರು ಮಹಾರಾಷ್ಟ್ರದ ಸಾಂಗ್ಲಿ ಬಿಟ್ಟು ಬೆಳಗಾವಿಗೆ ಬರುವ ಮನಸ್ಸು ಮಾಡುತ್ತಿಲ್ಲ.
ಕಾಗವಾಡ ಕ್ಷೇತ್ರದ ಜನ ಶ್ರೀಮಂತನನ್ನು ಗೆಲ್ಲಿಸಿ ಕಳಿಸಿದ ಬಳಿಕ ಅವರ ಅದೃಷ್ಟವೋ ನೇಕಾರರ ದುರಾದೃಷ್ಟವೋ ಇವರು ಜವಳಿ ಮಂತ್ರಿಯಾದಾಗಿನಿಂದ ನೇಕಾರರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ.ಈ ರಾಜ್ಯಕ್ಕೆ ಒಬ್ಬ ಶ್ರೀಮಂತ ಮಂತ್ರಿ ಸಿಕ್ಕರೂ ಕರ್ನಾಟಕದ ಈ ಜವಳಿ ಮಂತ್ರಿ ಮಹಾರಾಷ್ಟ್ರದ ಸಾಂಗ್ಲಿಯಲ್ಲೇ ಠಿಖಾಣಿ ಹೂಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನೆಲೆಸಿ ಕಾಗವಾಡದಲ್ಲಿ ಸಕ್ಕರೆ ದಂಧೆ ಮಾಡುವ ಪುಣ್ಯಾತ್ಮರೊಬ್ಬರಿಗೆ ಕರ್ನಾಟಕ ಸರ್ಕಾರ ಜವಳಿ ಮಂತ್ರಿ ಮಾಡಿದ್ದರಿಂದಲೇ ನೇಕಾರರ ಉದ್ಯಮ ದಿವಾಳಿಯಾಗಿದ್ದು ಬಡನೇಕಾರರ ಬದುಕು ಬೀದಿಗೆ ಬಂದಿದೆ.
ಕರ್ನಾಟಕ ಸರ್ಕಾರ ಪಾವರ್ ಲೂಮ್ ಹೊಂದಿರುವ ಶೇಟಜೀ ಗಳಿಗೆ ಪರಿಹಾರ,ರಿಯಾಯತಿ,ಎಲ್ಲವನ್ನೂ ಕೊಟ್ಟಿದೆ.ಈ ಶೇಟಜೀ ಬಳಿ ದುಡಿಯುತ್ತಿರುವ ಬಡ ನೇಕಾರ ಕೂಲಿ ಕಾರ್ಮಿಕರಿಗೆ ಕೊಟ್ಟಿದ್ದು ಚೊಂಬು…
ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಈ ರಾಜ್ಯದ ಜವಳಿ ಮಂತ್ರಿ ಅನ್ನೋದು ಬಹುಶ ಅವರೇ ಮರೆತಿದ್ದಾರೆ.ಅವರ ಕುಟುಂಬ ನೆಲೆಸಿರುವದು ಮಹಾರಾಷ್ಟ್ರದ ಸಾಂಗ್ಲಿ ಯಲ್ಲಿ,ಹೀಗಾಗಿ ಅವರು ಆಗಾಗ ಕಾಗವಾಡಕ್ಕೆ ಬೀಗರ ಮನೆಗೆ ಬಂದಂತೆ ಬಂದು ಹೋಗುತ್ತಾರೆ.
ಅವರು ಮಂತ್ರಿ ಆದಾಗಿನಿಂದ ಒಂದೆರಡು ಸಲ ಬೆಳಗಾವಿ ಡಿಸಿ ಕಚೇರಿಗೆ ಬಂದು ಡಿಸಿ ಸಾಹೇಬರಿಂದ ಹೂವಿನ ಗುಚ್ಛ ತಗೊಂಡು ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ವು ನೇಕಾರರಿದ್ದಾರೆ,ಈ ರಾಜ್ಯದ ಜವಳಿ ಮಂತ್ರಿಗೆ ತವರು ಜಿಲ್ಲೆಯ ನೇಕಾರರ ಸಮಸ್ಯೆ ಆಲಿಸಲು ಸಮಯ ಸಿಗುತ್ತಿಲ್ಲ,ಇನ್ನು ಈ ರಾಜ್ಯದ ನೇಕಾರರ ಸಮಸ್ಯೆ ಆಲಿಸುವರ್ಯಾರು? ಎನ್ನುವ ಪ್ರಶ್ನೆ ಎದುರಾಗಿದೆ.
ಹತ್ತರಿಂದ ಇಪ್ಪತ್ತು ಪವರ್ ಲೂಮ್ ಹೊಂದಿರುವ ಬೆಳಗಾವಿಯ ಬಡ ನೇಕಾರರು ನೇಯ್ದು ಸಿದ್ಧಪಡಿಸಿರುವ ಸೀರೆಗಳು ಧೂಳು ತಿನ್ನುತ್ತಿವೆ.ಈ ನೇಕಾರರು ಸಂಕಷ್ಟದ ಹೊಂಡದಲ್ಲಿ ನರಳುತ್ತಿದ್ದಾರೆ.ಸರ್ಕಾರವೇ ಈ ಬಡ ನೇಕಾರರ ಸೀರೆಗಳನ್ನು ಖರೀಧಿಸಿ,ಈ ಸೀರೆಗಳನ್ನು ರಾಜ್ಯದ ಮಹಿಳಾ ಕೊರೋನಾ ವಾರಿಯರ್ಸ್ ಗಳಾದ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ನರ್ಸಗಳು,ಜೊತೆಗೆ ಮಹಿಳಾ ಪೋಲೀಸರಿಗೆ,ಮಹಿಳಾ ಹೋಮ್ ಗಾರ್ಡ್ ಗಳಿಗೆ ಈ ಸೀರೆಗಳನ್ನು ಹಂಚಬೇಕೆಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ .
ಜೊತೆಗೆ ರಾಜ್ಯದ 224 ಶಾಸಕರಿಗೂ ಪತ್ರ ಬರೆದು ಬೆಳಗಾವಿ ನೇಕಾರರ ಸೀರೆಗಳನ್ನು ಖರೀಧಿಸಿ, ತಮ್ಮ ತಮ್ಮ ಕ್ಷೇತ್ರಗಳ ಮಹಿಳಾ ವಾರಿಯರ್ಸ್ ಗಳಿಗೆ ಸಮ್ಮಾನಿಸಿ ಈ ಸೀರೆಗಳನ್ನು ಸಮ್ಮಾನದ ರೂಪದಲ್ಲಿ ನೀಡುವಂತೆ ವಿನಂತಿಸಿದ್ದಾರೆ.
ಆದ್ರೆ ಈ ರಾಜ್ಯದ ಜವಳಿ ಮಂತ್ರಿ ಶ್ರೀಮಂತ ಪಾಟೀಲ,ಸಮಯ ಸಿಕ್ಕರೆ,ರಾಜ್ಯದ ಮುಖ್ಯಮಂತ್ರಿ ಗಳನ್ನು ಭೇಟಿಯಾಗಿ ಸರ್ಕಾರವೇ ಬಡ ನೇಕಾರರ ಸೀರೆಗಳನ್ನು ಖರೀಧಸುವಂತೆ ಒತ್ತಡ ಹೇರಲಿ,ಆದಷ್ಟು ಬೇಗನೆ ಸಾಂಗ್ಲಿ ಬಿಟ್ಟು ಕರ್ನಾಟಕದಲ್ಲಿ ಪ್ರವಾಸ ಮಾಡಿ ಬಡ ನೇಕಾರರ ಸಮಸ್ಯೆ ಆಲಿಸಲಿ ಅನ್ನೋದಷ್ಟೇ ನಮ್ಮ ಹಕ್ಕೊತ್ತಾಯ.