ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಮಹಾರಾಷ್ಟ್ರ ಹೊಂದಿಕೊಂಡಿರುವ ಕಾರಣ ಬೆಳಗಾವಿಯಲ್ಲಿ ಶೀಘ್ರದಲ್ಲಿಯೇ ಕೊರೋನಾ ಸೊಂಕಿಗೆ ಸಮಂಧಿಸಿದ ಗಂಟಲು ದ್ರುವ ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ ಎಂದು,ಆರೋಗ್ಯ ಸಚಿವ ಶ್ರೀರಾಮಲು ಭರವಸೆ ನೀಡಿದ್ದಾರೆ
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕರ್ನಾಟಕದಲ್ಲಿ ಇವತ್ತಿನವರೆಗೆ 16 ಕೊರೋನಾ ಸೊಂಕಿನ ಪ್ರಕರಣಗಳು ಪತ್ತೆಯಾಗಿದ್ದವು,ಅದರಲ್ಲಿ ಐವರು ಜನ ಗುಣಮುಖರಾಗಿದ್ದಾರೆ,ಮೂವರು ಜನ ಡಶ್ಚಾರ್ಜ ಆಗಿದ್ದಾರೆ,ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀರಾಮಲು ಹೇಳಿದರು
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಮತ್ತು ನಾನು ಕೂಡಿಕೊಂಡು ರಾಜ್ಯದ ಆಗು ಹೋಗುಗಳ ಮೇಲೆ ನಿರಂತರವಾಗಿ,ನಿಗಾ ಇಟ್ಟಿದ್ದೇವೆ.ರಾಜ್ಯದಲ್ಲಿ ಈಗಾಗಲೆ ಒಂದುವರೆ ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಿದ್ದೇವೆ.ಕೊರೋನಾ ,ಸೊಂಕು ,ಶಂಕಿತರಿಗೆ ಮನೆಯಲ್ಲಿಯೇ ಉಪಚಾರ ನೀಡಲಾಗುತ್ತಿದೆ.ಇವರ ಮೇಲೆ ನಿಗಾ ಇಡಲು ಹೋಮ್ ಗಾರ್ಡ್ ಗಳನ್ನು ನಿಯೋಜನೆ ಮಾಡಲು ಚಿಂತನೆ ನಡೆಸಿದ್ದೇವೆ .ಎಂದು ಶ್ರೀರಾಮಲು ಹೇಳಿದರು.
ಆರೋಗ್ಯ ಸಚಿವರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶ ಮಾಡುವಾಗ,ಆರೋಗ್ಯ ಸಚಿವರಿಗೂ ಸ್ಕ್ರೀನಿಂಗ್ ಮಾಡಲಾಯಿತು.