ಶ್ರೀರಾಮ ನವಮಿ ಯ ಅಂಗವಾಗಿ ನಗರದಲ್ಲಿ ಶ್ರೀರಾಮ ಭಕ್ತರು ಶ್ರೀರಾಮ ಮೂರ್ತಿಯ ಬೃಹತ್ತ ಮೆರವಣಿಗೆ ಹೊರಡಿಸಿ ಜೈ..ಜೈ..ಶ್ರೀರಾಮ ಎನ್ನುವ ಘೋಷಣೆಗಳೊಂದಿಗೆ ಶ್ರೀರಾಮ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು
ಬೆಳಗಾವಿ ನಗರದ ಸದಾಶಿವ ನಗರ ಎಪಿಎಂಸಿ ರಸ್ತೆಯಲ್ಲಿ ಸೇರಿದ ನೂರಾರು ಜನ ಭಕ್ತರು ಏಕ .ಹೀ ನಾಮ..ಏಕ..ಹೀ..ರಾಮ ಎನ್ನುವ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು
ಮೆರವಣಿಗೆಗೆ ಗಣ್ಯರು ಅಂಬೇಡ್ಕರ್ ಉದ್ಯಾನವನದ ಬಳಿ ಅಧಿಕೃತವಾಗಿ ಚಾಲನೆ ನೀಡಲಿದ್ದು ಮೆರವಣಿಗೆಯಲ್ಲಿ ಸಾವಿರಾರು ಜನ ಶ್ರೀರಾಮ ಸೇನೆಯ ಕಾರ್ಯಕರ್ತರು ಮತ್ತು ಶ್ರೀರಾಮನ ಭಕ್ತರು ಪಾಲ್ಗೊಳ್ಳಲಿದ್ದಾರೆ
ಮೆರವಣಿಗೆ ಅಂಬೇಡ್ಕರ್ ಉದ್ಯಾನವನದಿಂದ ಆರಂಭವಾಗಿ ಚನ್ನಮ್ಮ ವೃತ್ತ ಕಾಲೇಜು ರಸ್ತೆ ಮೂಲಕ ಸಂಚರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ
ಶ್ರೀರಾಮ ಜಪಿಸುವ ಭಕ್ತಿ ಗೀತೆಗಳು ಜಾಂಜ್ ಪದಕಗಳು ಮೆರವಣಿಗೆಯ ಆಕರ್ಷಣೆಯಾಗಲಿವೆ ಶ್ರೀರಾಮ ನವಮಿಯ ನಿಮಿತ್ಯ ನಗರದ ಗಲ್ಲಿ ಗಲ್ಲಿಗಳಲ್ಲಿ ಭಗವಾ ಧ್ವಜಗಳನ್ನು ಭಗವಾ ಕಟ್ಟಿ ರಾಮ ನಾಮವನ್ನು ಜಪಿಸಲಾಗುತ್ತಿದೆ
ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಚಾಲನೆ. ನಂತರ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ವೀರ ಸನ್ಯಾಸಿ ಹಾಗೂ ಉಪ್ರ ಸಿಎಂ ಯೋಗಿ ಆದಿತ್ಯ ನಾಥ ಸಮಸ್ತ ಹಿಂದೂಗಳ ಭಾವನೆಗಳಿಗೆ ಸ್ಪಂದಿಸಿ ರಾಮ ಮಂದಿರ ನಿರ್ಮಿಸಲಿದ್ದಾರೆ. ಧಾರ್ಮಿಕ ಆಚರಣೆಗೆ ಅನುಮತಿ ನೀಡದ ಸರ್ಕಾರಗಳು ಧೂಳಿಪಟವಾಗಲಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.