ಬೆಳಗಾವಿ- ಬೆಳಗಾವಿ ಯಳ್ಳೂರ ರಸ್ತೆಯಲ್ಲಿ ಇಂದು ಬೆಳಿಗ್ಗೆ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ನೇತ್ರತ್ವದಲ್ಲಿ ನೂರಾರು ಜನ ನೇಕಾರ ಬಂಧುಗಳು ನೇಕಾರರ ಸಂತ ದೇವರ ದಾಸಿಮಯ್ಯ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ್ಕೆ ಪೂಜೆ ಮಾಡಿದ್ದಾರೆ
ಇಂದು ದೇವರ ದಾಸಿಮಯ್ಯ ಜಯಂತಿ ಹೀಗಾಗಿ ಯಳ್ಳೂರ ರಸ್ತೆಗೆ ದೇವರ ದಾಸಿಮಯ್ಯ ರಸ್ತೆ ಎಂದು ನಾಮಕರಣ ಮಾಡುವಂತೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಶ್ರೀನಿವಾಸ ತಾಳೂರಕರ ತಾವೇ ಖುದ್ದಾಗಿ ನಾಮ ಫಲಕ ಹಾಕಿ ಹೆಸರು ನಾಮಕರಣ ಮಾಡಿದ್ದಾರೆ
ಈ ಕುರಿತು ಸುದ್ಧಿ ಹರಡುತ್ತಿದ್ದಂತೆಯೇ ಎಂಈಎಸ್ ಯುವಕರ ಗುಂಪು ಅದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದೆ ಎಂದು ತಾಳೂರಕರ ತಿಳಿಸಿದ್ದಾರೆ
ಯುವಕರ ಒಂದು ಗುಂಪು ದೇವರ ದಾಸಿಮಯ್ಯ ರಸ್ತೆ ಎಂಬ ನಾಮ ಫಲಕ ತೆರವು ಮಾಡುವಂತೆ ಶಹಾಪೂರ ನ ಪೋಲೀಸ್ ಠಾಣೆಯಲ್ಲಿ ಒತ್ತಾಯ ಮಾಡಿದ್ದಾರೆ
ಒಂದು ಯುವಕರ ಗುಂಪು ಪೋಲೀಸರಿಗೆ ದೂರು ಕೊಡುತ್ತಿದ್ದಂತೆಯೇ ಶ್ರೀನಿವಾಸ ತಾಳೂರಕರ ಅವರನ್ನು ಠಾಣೆಗೆ ಕರೆಯಿಸಿದ ಪೋಲೀಸರು ಅನುಮತಿ ಇಲ್ಲದೇ ಫಲಕ ಹಾಕುವದು ಸರಿಯಲ್ಲ ಸಂಜೆಯೊಳಗಾಗಿ ಫಲಕ ತೆರವು ಗೊಳಿಸುವಂತೆ ತಾಳೂರಕರ ಅವರಿಗೆ ಪೋಲೀಸರು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಶ್ರೀನಿವಾಸ ತಾಳೂರಕರ ಅವರ ಹೇಳಿಕೆ ಪ್ರಕಾರ ಎಂಈಎಸ್ ಯುವಕರ ಗುಂಪು ಫಲಕ ತೆರವು ಮಾಡುವಂತೆ ಒತ್ತಾಯಿಸಿದೆ ಎಂದು ತಿಳಿದು ಬಂದಿದ್ದು ಫಲಕ ತೆರವಿಗೆ ಶ್ರೀನಿವಾಸ ತಾಳೂರಕರ ಅವರ ಮೇಲೆ ಪೋಲೀಸರು ಒತ್ತಡ ಹೇರಿದ್ದಾರೆ ಎಂದು ಶ್ರೀನಿವಾಸ ತಾಳೂರಕರ ತಿಳಿಸಿದ್ದಾರೆ