ಬೆಳಗಾವಿ- ಬೆಳಗಾವಿಯ ಶಿವಾಜಿ ಗಾರ್ಡನ್ ದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತ ವೈಛವ ಬಿಂಬಿಸುವ ಶಿವಸೃಷ್ಠಿ ನಿರ್ಮಿಸಿ ಇದನ್ನು ಉದ್ಘಾಟಿಸಿ ಹಲವಾರು ವರ್ಷಗಳೇ ಗತಿಸಿದ್ದು ಕೂಡಲೇ ಶಿವ ಸೃಷಿಯ ಪ್ರದರ್ಶನ ಆರಂಭಿಸುವಂತೆ ಶ್ರೀರಾಮ ಸೇನೆ ಒತ್ತಾಯಿಸಿದೆ
ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತು ಶಿವಪ್ರೇಮಿಗಳು ಎಪ್ರೀಲ್ 27 ರೊಳಗಾಗಿ ಶಿವ ಸೃಷ್ಠಿಯ ಪ್ರದರ್ಶನ ಆರಂಭ ಆಗದಿದ್ದರೆ ಉಗ್ರ ಪ್ರತಿಭಟನೆ ಮಾಡುವದಾಗಿ ಎಚ್ಚರಿಕೆ ನೀಡಿವೆ
ಮಾಜಿ ಶಾಸಕ ಅಭಯ ಪಾಟೀಲ ಶಾಸಕರಾಗಿದ್ದಾಗ ಬೆಳಗಾವಿಯ ಶಿವಾಜಿ ಗಾರ್ಡನ್ ದಲ್ಲಿ ಶಿವಾಜಿ ಮಹಾರಾಜರ ಇತಿಹಾಸ ಅವರ ಹೋರಾಟದ ಗತ ವೈಭವ ಬಿಂಬಿಸುವ ಧ್ವನಿ ಮತ್ತು ಬೆಳಕು ವ್ಯೆವಸ್ಥೆ ಮಾಡಿದ್ದರು
ಈ ವ್ಯೆವಸ್ಥೆ ಸಿದ್ಧವಾಗಿ ಒಂದೆರಡು ಬಾರಿ ಉದ್ಘಾಟನೆಯಾದರೂ ಇನ್ನುವರೆಗೆ ಪ್ರದರ್ಶನ ಆರಂಭ ವಾಗಿದ ಹಿನ್ನಲೆಯಲ್ಲಿ ಶಿವ ಪ್ರೇಮಿಗಳು ಆಕ್ರೋಶ ವ್ಯೆಕ್ತಪಡಿಸಿದ್ದಾರೆ
ಶ್ರೀರಾಮ ಸೇನೆ ಮುಖಂಡ ರಾಮಾಕಾಂತ ಕುಂಡಸ್ಕರ್ ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ