ಬೆಳಗಾವಿ- ರಾಜ್ಯದಲ್ಲಿ ಹಾಗು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿಶ್ರೀರಾಮಸೇನೆಯಿಂದ ಪ್ರತಿಭಟನೆ ನಡೆಸಲಾಯಿತು
ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಹಿಂಧು ಪರ ಮತ್ತು ರಾಷ್ಟ್ರ ಭಕ್ತರ ಹತ್ಯೆ ವಿರೋಧಿಸಿ ಕೂಡಲೇ ಆರೋಪಿಗಳ ಪತ್ತೆ ಮಾಡಬೇಕೆಂದು ಒತ್ತಾಯಿಸಲಾಯಿತು
ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ನೆತೃತ್ವದಲ್ಲಿ ಪ್ರತಿಭಟನೆ ನಡೆಯಿತು
ರಾಮಾಕಾಂತ ಕೊಂಡುಸ್ಕರ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಪರೇಶ ಮೆಸ್ತಿ ಒಬ್ಬ ರಾಷ್ಟ್ರ ಪ್ರೇಮಿ. ಆತನನ್ನ ಹಿಂಸಿಸೆ ಸಾಯಿಸಲಾಗಿದೆ ಸರಕಾರ ಇದನ್ನ ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ತರನ್ನು ಹಿಡಿದು ಶಿಕ್ಷೆ ಕೊಡಿಸಬೇಕು ಎಂದರು
ಇದು ಕೇವಲ ರಾಜ್ಯ ದಲ್ಲಿ ಮಾತ್ರವಲ್ಲ. ರಾಷ್ಟ್ರಾದಂತ್ಯ ಇದೆ ಪರಿಸ್ತಿತಿ ಇದೆ. ಈ ದೇಶದಲ್ಲೂ ರಾಷ್ಟ್ರ ಭಕ್ತರಿಗು ಸೇಪ್ ಇಲ್ಲ. ಬೆಳಗಾವಿಯಲ್ಲೂ ಇಂಥದೇ ಪರಿಸ್ಥಿತಿ ಇದೆ ಎಂದು ರಾಮಾಕಾಂತ ಕುಂಡಸ್ಕರ್ ಆರೋಪಿಸಿದರು
ಬೆಳಗಾವಿಯಲ್ಲಿ ಸಾಮನ್ಯ ಜನರನ್ನ ಹಿಡಿದು ಲೂಟಿ ಮಾಡಲಾಗುತ್ತಿದೆ ಮೊನ್ನ ಇಂಥ ಒಂದು ಗ್ಯಾಂಗನ್ನು ನಾವೇ ಹಿಡಿದು ಕೊಟ್ಟಿದ್ದೇವೆ
ಲೂಟಿ ಕೊರರಿಂದ ನಮಗೆ ಧಮಕಿ ಇದೆ. ಜೈಲುನಿಂದ ಬಂದ ಮೇಲೆ ನಮ್ಮನ್ನು ನೊಡಿಕೊಳ್ಳುತ್ತೇನೆ ಎಂದಿದ್ದಾರೆ ಇಲ್ಲಿ ಲೂಟಿಕೊರರಿಗೆ ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ