ಬೆಳಗಾವಿ- ಎಂಬತ್ತರ ದಶಕದಲ್ಲಿ ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಮಾತಾಡಿದ್ರೆ ತಲೆ ಮೇಲೆ ಕಲ್ಲು ಬೀಳುವ ಪರಿಸ್ಥಿತಿ ಇತ್ತು ಆದ್ರೆ ಇವತ್ತು ಪರಿಸ್ಥಿತಿ ಬದಲಾಗಿದೆ ,ಈಗ ಕನ್ನಡದ ಕಾಯಕ ಮಾಡಿದ್ರೆ ಸಾಕು ಬಾಯಿಗೆ ಮೈಸೂರಪಾಕ,ಬುಂದಿ ಲಾಡು ಬೀಳುವ ವಾತಾವರಣ ನಿರ್ಮಾಣವಾಗಿದೆ.
ಕನ್ನಡಪರ ಹೋರಾಟಗಾರರಾದ, ಶ್ರೀನಿವಾಸ ತಾಳೂರಕರ,ಕಸ್ತೂರಿ ಬಾವಿ ,ಮತ್ತು ವಾಜೀದ ನೇತ್ರತ್ವದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಧ್ವಜ ಕಂಬ ನಿಲ್ಲಿಸಿ ಕನ್ನಡದ ಧ್ವಜ ಹಾರಿಸಿ,ಅದಕ್ಕೆ ಜಿಲ್ಲಾಡಳಿತ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿ ಕನ್ನಡದ ಹೋರಾಟಗಾರರು ಪಾಲಿಕೆ ಎದುರು ಮುಕ್ಕಾಂ ಹೂಡಿದ್ದಾರೆ.
ಕನ್ನಡ ಧ್ವಜ ನಿರಂತರವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಹಾರಾಡಬೇಕು,ಅದಕ್ಕೆ ಜಿಲ್ಲಾಡಳಿತ ರಕ್ಷಣೆ ಕೊಡಬೇಕು,ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ಕೊಡುವವರೆಗೂ ಪಾಲಿಕೆ ಎದರು ಮುಕ್ಕಾಂ ಹೂಡುತ್ತೇವೆ ಎಂದು ಕನ್ನಡದ ಸೇನಾನಿಗಳು ಪಟ್ಟು ಹಿಡಿದು ಧ್ವಜದ ಕೆಳಗಡೆ ಮಲಗಿದ್ದಾರೆ.
ಪಾಲಿಕೆ ಎದುರು ಕನ್ನಡದ ಧ್ವಜ ಹಾರಿಸಿ ಅಲ್ಲಿಯೇ ಮೊಕ್ಕಾಂ ಹೂಡಿರುವ ಕನ್ನಡಪರ ಹೋರಾಟಗಾರರಿಗೆ ಅನೇಕ ಜನ ಅಭಿಮಾನಿಗಳು ಸಾಥ್ ಕೊಟ್ಟಿದ್ದಾರೆ.
ಬೆಳಗಾವಿ ಫೇಸ್ ಬುಕ್ ಪೇಜಿನ ಅಡ್ಮೀನ್ ಕಿರಣ ಮಾಳಣ್ಣವರ ಅವರು ಹೋರಾಟಗಾರರಿಗೆ ,ಮೈಸೂರಪಾಕ,ಬುಂದಿ ಲಾಡು ತಿನಸಿ,ಜೊತೆಗೆ ವೇಜ್ ಫಲಾವ್ ಕೊಟ್ಟು ಎಲ್ಲರ ಗಮನ ಸೆಳೆದರು ..
ಎಂಬತ್ತರ ದಶಕದಲ್ಲಿ ಕನ್ನಡ ಎಂದರೆ ಕಲ್ಲು ಬೀಳುತ್ತಿದ್ದವು ಆದ್ರೆ ಇವತ್ತು ಕನ್ನಡ ಎಂದರೆ ಸಾಕು ಬಾಯಿಗೆ ಮೈಸೂರಪಾಕ ಲಾಡು ಬೀಳುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ.
ಗಡಿನಾಡು ಗುಡಿಯ ಕಣ,ಕಣವೂ ಕನ್ನಡ..ಕನ್ನಡ.. ಬನ್ನೀ ನಮ್ಮ ಸಂಗಡ ಎನ್ನುವ ವಾತಾವರಣ ಈಗ ಬೆಳಗಾವಿಯಲ್ಲಿ ನಿರ್ಮಾಣ ಆಗಿರುವದು ಸತ್ಯ…
ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಾಡುತ್ತಿರುವ ಕನ್ನಡದ ಧ್ವಜ ನಿರಂತರವಾಗಿ ಹಾರಾಡುತ್ತದೆಯೋ ಅಥವಾ ಇಂದು ಮಧ್ಯರಾತ್ರಿಯೇ ತೆರವು ಆಗುತ್ತದೆಯೋ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ…..
ಕ್ಯಾಮರಾಮನ್ ಕನ್ನಡ ಜೊತೆ ,.,ಕಸ್ತೂರಿ ನ್ಯುಸ್ ನೆಟವರ್ಕ್
ತಾಳೂರಕರ ಬ್ಯುರೋ
ಬೆಳಗಾವಿ……