ಬೆಳಗಾವಿ ಡಿಸಿ ಕಚೇರಿಯಲ್ಲಿ ಸಿದ್ಧರಾಮಯ್ಯ ಮೀಟೀಂಗ್….

ಐದು ವರ್ಷಗಳ ಕಾಲ ಬೆ‌ಂಗಳೂರಿನಲ್ಲಿ ಕವದಿ ಹೊತ್ತು ಮಲಗಿಕೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಈಗ ಜ್ಞಾನೋದಯವಾಗಿದೆ ಬೆಳಗಾವಿ ರಾಜ್ಯದ ಗಡಿ ಅನ್ನೋದು ಈಗ ಮನವರಿಕೆಯಾಗಿ ಬೆಳಗಾವಿಗೆ ಬಂದು ಕನ್ನಡದ ಪಾಠ ಹೇಳುತ್ತಿದ್ದಾರೆ

ಬೆಳಗಾವಿ- ಹೆಸರಿಲ್ಲದ ರಸ್ತೆ, ಉದ್ಯಾನವನಗಳಿಗೆ ಕನ್ನಡ ಕವಿಗಳ ಹೆಸರು ಇಡುವಂತೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಮಾತನಾಡಿದರು.ಬೆಳಗಾವಿ ಗಡಿಭಾಗದಾಗಿದ್ದು ಸಮಸ್ಯೆಗಳು ಸಾಕಷ್ಟಿವೆ. ರಾಜ್ಯದ ಎಲ್ಲ ಕಡೆ ಸರಕಾರಿ ಇಲಾಖೆಗಳು.

ಪೊಲೀಸ್ ಇಲಾಖೆಯ ವೆಬ್ ಸೈಟ್ ಇಂಗ್ಲಿಷ್ ಮಯವಾಗಿದೆ ಅದನ್ನು ಕನ್ನಡಿಕರಣಗೊಳಿಸಬೇಕಿದೆ .ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಸಾಕಷ್ಟು ‌ಸಮಸ್ಯೆಗಳನ್ನು ಎದುರಿಸುತ್ತಿದೆ. ಕನ್ನಡ ಅನುಷ್ಟಾನವಾಗಿಲ್ಲ. ಹದಿನೈದು ದಿನದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕು.

ನವೆಂಬರ್ ಒಂದರೊಳಗಾಗಿ ಬೆಳಗಾವಿಯ ನಾಮಫಲಕಗಳು ಸಂಪುರ್ಣವಾಗಿ ಕನ್ನಡಮಯವಾಗಬೇಕು ಸೂಚಿಸಿದರು. ಒಂದು ನಿಯಮವನ್ಬು ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು.ಕೂಡಲೇ ಜಿಲ್ಲಾಧಿಕಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆದು ಸೂಚನೆ ನೀಡಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು.

ಕನ್ನಡ ಪ್ರಾಧಿಕಾರದ ಕಾರ್ಯದರ್ಶಿ ಮುರಳಿಧರ, ಎಡಿಸಿ ಹೆಚ್.ಬಿ.ಬೂದೇಪ್ಪ, ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ.ರಾಜಪ್ಪ, ಎಸ್ಪಿ ಸುಧೀಂದ್ರಕುಮಾರ ರೆಡ್ಡಿ, ಡಾ.ಸರಜೂ ಕಾಟ್ಕರ್, ಅನಂತ‌ ಬ್ಯಾಕೂಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *