ಬೆಳಗಾವಿ- ರಾಣಿಚನ್ನಮ್ಮ ವಿವಿಯಲ್ಲಿ ಅಲ್ಲಿನ ಸಮೀಪದ ಹಳ್ಳಿ ಕೆಲವರು ವಿವಿಯ ಕುಲಪತಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಮೇಯರ್ ಸಿದ್ದನಗೌಡ ಪಾಟೀಲ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಸಾಕಷ್ಟು ವಿಶ್ವ ವಿದ್ಯಾಲಯಗಳಿವೆ. ಇಲ್ಲಿಯವರೆಗೂ ಯಾವುದೇ ಶೈಕ್ಷಣಿಕ ಕ್ಷೇತ್ರದಲ್ಲಿ ಇಂಥ ಘಟನೆ ನಡೆದಿರಲಿಲ್ಲ. ರಾಣಿ ಚನ್ನಮ್ಮ ವಿವಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ವಿವಿಗೆ ಜಾಗೆ ಕೊಡಿಸಲು ರಾಮೇಗೌಡರು ಸಾಕಷ್ಟುಹೋರಾಟ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಲ್ಲಿ ಜಮೀನು ನೀಡಿದರು.
ಕನ್ನಡ ಹೋರಾಟಗಾರ ಪ್ರಯತ್ನದಿಂದ ವಿವಿ ಸ್ಥಾಪನೆಯಾಯಿತು. ಕುಲಪತಿಗಳು ಮೇಲೆ ಹಲ್ಲೆ ನಡೆಸಿರುವವರನ್ನು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಎಂ ಎಸ್.ಇಂಚಲ ಮಾತನಾಡಿ, ವಿವಿಯಲ್ಲಿ ಎಲ್ಲ ರೀತಿಯ ಧರ್ಮದ ಮಕ್ಕಳು ವಿದ್ಯಾ ಕೇಂದ್ರದಲ್ಲಿ ಇರುತ್ತಾರೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ವಿವಿಯಲ್ಲಿ ಒಳ ಹೊಕ್ಕು ಕುಲಪತಿಗಳ ಮೇಲೆ ಹಲ್ಲೆ ಮಾಡಿರುವುದು ಸರಕಾರಕ್ಕೆ ಅವಮಾನವಾಗಿದೆ ಇದನ್ನು ನಾವು ಖಂಡಿಸುತ್ತೇವೆ ಎಂದರು.
.ಬಿ.ಮಾವಿನಕಟ್ಟಿ, ಜೋರಾಪುರ, ಪುಷ್ಪಾ ಹುಬ್ಬಳ್ಳಿ, ಕಸ್ತೂರಿ ಬಾವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.