Breaking News

ರಿಪಬ್ಲಿಕ್ ಆಫ್ ಗೋಕಾಕ್ ಅಂದ್ರು ಸಿದ್ಧರಾಮಯ್ಯ

ಬೆಳಗಾವಿ- ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಹೋಗುವಾಗ ಕ್ಷೇತ್ರದ ಜನರನ್ನು ಕೇಳಿದ್ರಾ…? ಹಾಗಾದ್ರೆ ನಿಮ್ಮ ಕಿಮ್ಮತ್ತೇನು..? ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಗೋಕಾಕಿನ ಮತದಾರರನ್ನು ಪ್ರಶ್ನಿಸಿದರು

ಗೋಕಾಕಿನ ವಾಲ್ಮೀಕಿ ಕ್ರೀಡಾಂಗಣ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರವಾಗಿ ಮತಯಾಚಿಸಿ ಮಾತನಾಡಿದ ಅವರು

ಪಕ್ಷಾಂತರ ಮಾಡಿದ ಶಾಸಕರು ನಾಲಾಯಕ್,ನಾಲಾಯಕ್,ಎಂದು ಡಯಸ್ ಕುಟ್ಟಿದ ಅವರು ಸತೀಶ್ ಜಾರಕಿಹೊಳಿ ಅವರನ್ನು ಮಂತ್ರಿ ಸ್ಥಾನದಿಂದ ತೆಗೆದು ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದೇ ಆದ್ರೆ ನನ್ನ ವಿರುದ್ಧವೇ ತಿರುಗಿ ಬಿತ್ತು ಆ ಗಿರಾಕಿ ಎಂದು ಸಿದ್ರಾಮಯ್ಯ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು

ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಲಖನ್ ಜಾರಕಿಹೊಳಿ ಗೆಲ್ಲೋದು ಅಷ್ಟೇ ಸತ್ಯ ,ಇದು ರಪಬ್ಲಿಕ್ ಆಫ್ ಗೋಕಾಕ್,ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ ಕೂಡಾ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿಕೊಂಡಿದ್ದರು ಅವರ ಗತಿ ಏನಾಯ್ತು ? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ ನೆರೆ ಹಾವಳಿಯಿಂದ ಹಳೆಯ ಗೋಕಾಕ್ ಸಂಪೂರ್ಣವಾಗಿ ನೀರು ಪಾಲಾಗಿದ್ದಾಗ ನಿಮ್ಮ ಶಾಸಕ ಎರಡೂವರೆ ತಿಂಗಳಿ ಮುಂಬೈಯಲ್ಲಿದ್ದ ರಮೇಶ್ ಈ ಭಾಗದ ಜನರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ ಸತೀಶ್ ಜಾರಕಿಹೊಳಿ ದೀರ್ಘ ಕಾಲದ ಸ್ನೇಹಿತ ಆದ್ರೂ ಅವರ ಮಂತ್ರಿ ಸ್ಥಾನವನ್ನು ರಮೇಶ್ ಜಾರಕಿಹೊಳಿ ಅವರಿಗೆ ಮಂತ್ರಿ ಮಾಡಿದೆ ಆದ್ರೆ ಆ ಪುಣ್ಯಾತ್ಮ ಹತ್ತು ಕ್ಯಾಬಿನೇಟ್ ಮೀಟಿಂಗ್ ಗಳಿಗೆ ಹೋಗಲೇ ಇಲ್ಲ,ಇಂತಹ ಶಾಸಕ ನಿಮಗೇ ಬೇಕಾ.? ಎಂದು ನೆರೆದ ಜನತೆಯನ್ನು ಸಿದ್ಧರಾಮಯ್ಯ ಪ್ರಶ್ನಿಸಿದರು

ಸತೀಶ್ ಜಾರಕಿಹೊಳಿ ಮಾತನಾಡಿ ಮೊನ್ನೆ ಅಮೀತ ಷಾ ಅವರು ಕಾಶ್ಮೀರದಲ್ಲಿ ಆರ್ಟಿಕಲ್,370 ಯನ್ನು ಕಿತ್ತೆಸೆದ್ರು ಬಹುಶ ಅವರು ಗೋಕಾಕ್ ಮರೆತಿರಬಹುದು ,ನಮಗೂ ಗೋಕಾಕಿನಲ್ಲಿ ಆರ್ಟಿಕಲ್ 370 ಯ ಅನುಭವ ನಮಗಾಗುತ್ತಿದೆ ,ಗೋಕಾಕಿನಲ್ಲಿ ಫ್ರೆಂಡ್ಲಿ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದವರು ಮತ್ಯಾರು ಅಲ್ಲ ಅವರು ಸತೀಶ್ ಜಾರಕಿಹೊಳಿ

,70ವರ್ಷದ ಇತಿಹಾಸದಲ್ಲಿ 20 ವರ್ಷದವರೆಗೆ ಕೆಡಿಪಿ ಸಭೆ ಮಾಡದೇ ಇರುವ.ಜನರ ಕೈಗೆ ಸಿಗದೇ ಇರುವ,ಕ್ಷೇತ್ರ ಬಿಟ್ಟು ಹೆಚ್ಚಿನ ಸಮಯ ಹೊರಗಡೆ ಉಳಿದ ಶಾಸಕ ಯಾರಾದ್ರು ಇದ್ರೆ,ಅದು ರಮೇಶ್ ಜಾರಕಿಹೊಳಿ ಎಂದು ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ರು

ಸೇವಾ ಮನೋಭಾವನೆ ಮೊದಲಿನಿಂದಲೂ ಇರಬೇಕು,ಐದಾರು ಜನ ಶಾಸಕರನ್ನು ಕಟ್ಟಿಕೊಂಡು ಮುಖ್ಯಮಂತ್ರಿಯನ್ನು ಬ್ಲ್ಯಾಕ್ ಮೇಲ್ ಮಾಡುವದು ರಮೇಶ್ ಜಾರಕಿಹೊಳಿ ಜಾಯಮಾನ ಎಂದು ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.

ಗೋಕಾಕ್ ಫಾಲ್ಸನಲ್ಲಿ 18 ಸಾವಿರ ಕಾರ್ಮಿಕರಿದ್ದರು ಈಗ 1200 ಜನ ಕಾರ್ಮಿಕರಿದ್ದಾರೆ,ಸಾವಿರಾರು ಜನ ಕಾರ್ಮಿಕರು ಬೀದಿ ಪಾಲಾದರೂ ಇದಕ್ಕೆ ಕಾರಣರಾದ ರಮೇಶ್ ಅಳಿಯ ಅಂಬಿರಾವ್ ಕಾರ್ಮಿಕ ಮುಖಂಡರಾಗಿದ್ದಾರೆ,ಈಗ ಅವರ ಕಣ್ಣು ರಿದ್ಧಿ ಸಿದ್ಧಿ ಕಾರ್ಖಾನೆಯ ಮೇಲೆ ಬಿದ್ದಿದೆ ಅದನ್ನು ಯಾವಾಗ ಮುಚ್ಚುತ್ತಾರೆ ಕಾದು ನೋಡಬೇಕು ಈ ಎಲ್ಲ ಅನಾಹುತಗಳಿಂದ ಬಚಾವ್ ಆಗಲು ರಮೇಶ್ ಜಾರಕಿಹೊಳಿ ಅವರನ್ನು ಹೆಚ್ಚು ಮತಗಳ ಅಂತರದಿಂದ ಸೋಲಿಸಬೇಕು ಎಂದು ಸತೀಶ್ ಮತದಾರರಲ್ಲಿ ಮನವಿ ಮಾಡಿಕೊಂಡರು

ವೀರಕುಮಾರ್ ಪಾಟೀಲ್,ಘಾಟಗೆ ಅಮರಸಿಂಹ ಪಾಟೀಲ ಅವರನ್ನು ಸೋಲಿಸಿದವರೇ ರಮೇಶ್ ಜಾರಕಿಹೊಳಿ ಆದರೂ ಅವರು ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ರಮೇಶ್ ಹೇಳಿ ನನ್ನನ್ನು ಮಂತ್ರಿ ಮಾಡಿ ಎಂದು ಸುತ್ತಾಡುತ್ತಿದ್ದರು ಅವರು ಕಾಂಗ್ರೆಸ್ ಬಿಟ್ಟು ಹೋಗಿದ್ದು ಒಳ್ಳೆಯದಾಯ್ತು,ಎಂದು ಸತೀಶ್ ಜಾರಕಿಹೊಳಿ ಸಮಾಧಾನ ವ್ಯೆಕ್ತಪಡಿಸಿದರು.

ಗೋಕಾಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾತನಾಡಿ ಗೋಕಾಕ ಕ್ಷೇತ್ರದಲ್ಲಿ ಇಬ್ಬರಲ್ಲಿ ಮೂರನೇಯ ವ್ಯೆಕ್ತಿಗೆ ಲಾಭ ಎಂದು ಎಲ್ಲರೂ ಹೇಳುತ್ತಿದ್ದಾರೆ ಬ್ಯಾಲೇಟ್ ಪೇಪರ್ ನಲ್ಲಿ ನನ್ನದು ಮೂರನೇಯ ನಂಬರ್ ಇದೆ ಹೀಗಾಗಿ ಲಾಭ ಆಗುವುದು ನನಗೇ.ಈಗಾಗಲೇ ನನ್ನ ಗೆಲುವಾಗಿದೆ ಎಷ್ಟು ಮತಗಳಿಂದ ಗೆಲ್ಲುತ್ತೇವೆ ಅನ್ನೋದನ್ನು ಮತದಾನ ಮುಗಿದ ಬಳಿಕ ಹೇಳುತ್ತೇನೆ.ಗೋಕಾಕ ಕ್ಷೇತ್ರ ಕೆಲವೇ ಕೆಲವು ಜನರ ಕಪಿ ಮುಷ್ಠಿಯಲ್ಲಿದೆ.ಅದಕ್ಕಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *