Breaking News

ಡಿಸೆಂಬರ್ 9 ರ ನಂತರ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ- ಅಥಣಿಯಲ್ಲಿ ಸಿದ್ರಾಮಯ್ಯ ಭವಿಷ್ಯ

ಬೆಳಗಾವಿ- ಅಥಣಿ ಕ್ಷೇತ್ರದ ತೇಲಸಂಗ್ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಪಂಚಿಂಗ್ ಡೈಲಾಗ್ ಗಳ ಮೂಲಕ ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿ ಡಿಸೆಂಬರ 9 ರ ನಂತರ ಕರ್ನಾಟಕದಲ್ಲಿ ಮತ್ತೆ ನಮ್ಮ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅನರ್ಹ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಯಡಿಯೂರಪ್ಪ ಅನರ್ಹರು ಅಭಿವೃದ್ಧಿಗಾಗಿ ಹೋಗಿದ್ದೇವೆ ಅಂತಾ ಹೇಳುತ್ತಿರುವದು ಹಸಿ ಸುಳ್ಳು ಯಾವುದಿಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಯಾಕೆ ಹೋಗಲಿಲ್ಲ, ನಾನು ಯಾಕೆ ಹೋಗಲಿಲ್ಲ ಸತ್ಯ ಹೇಳಿ ನೀವೆಲ್ಲಾ ಮಾರಾಟ ಆಗಿಬಿಟ್ಟಿದ್ದೀರಿಸಂತೆಯಲ್ಲಿ ದನಕರುಗಳು ಮಾರಾಟ ಆಗುತ್ತವೆ.ಇಂದು ಎಂಎಲ್‌ಎ ಗಳು‌ ಮರಾಟವಾಗಿದ್ದೀರಿ ನಾಚಿಕೆ ಆಗಬೇಕು
ಮಹೇಶ್ ಕುಮಟ್ಟಳ್ಳಿ ಸ್ವಂತ ಊರಿನವರನ್ನಾದರೂ ಕೇಳಿದ್ರಾ.ಬಿಜೆಪಿಯವರ ಸ್ವಾರ್ಥಕ್ಕೊಸ್ಕರ ಅಧಿಕಾರದ ಲಾಲಸೆಯಿಂದ ಹೋಗಿದ್ದಾರೆ.

ಮತದಾರರಿಗೆ ಅವಮಾನ ಮಾಡದ್ದಾರೆ.
ನಿಮಗೆ ಕೇಳದೆ ಹೋರಟು ಹೋದವರಿಗೆ ಆಶೀರ್ವಾದ ಮಾಡುತ್ತೀರಾ.ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ ನಿಮ್ಮ ಊರಿಗೆ ಅಗೌರವ ಆಗಿದೆ
ಮಹೇಶ್ ಕುಮಟ್ಟಳ್ಳಿ ಅವರೇ ನೀವು ಎಂಎಲ್‌ಎ ಆಗಲು ಯೋಗ್ಯರಲ್ಲ ಅಂತಾ ಹೇಳಬೇಕು ಎಂದು ಸಿದ್ಧರಾಮಯ್ಯ ಮತದಾರರಲ್ಲಿ ಮನವಿ ಮಾಡಿಕೊಂಡರು.

ಹದಿನೇಳು ಜನ ಶಾಸಕರು ಪಕ್ಷಾಂತರ ಮಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಮೂರು ಜನ ಕಾಂಗ್ರೆಸ್ ನವರು.
ನಾವೆಲ್ಲಾ ಇವರಿಗೆ ಟಿಕೆಟ್ ಕೊಟ್ಟು ಕೆಲಸ ಮಾಡಿ ಗೆಲ್ಲಿಸಿದ್ವಿ.ನಮ್ಮ ಕಡೆ ಕುರುಬರು ಗೌಡರೇ, ನಮ್ಮ ಕಡೆ ಗೌಡ ಅಂತಾ ಇಟ್ಟುಕೊಳ್ಳುತ್ತಾರೆ.
ಹದಿನೇಳು ಜನ ಪಕ್ಷಾಂತರ ಮಾಡಿದ ಮೇಲೆ ಸ್ಪೀಕರ್ ಗೆ ದಿನೇಶ್ ಗುಂಡೂರಾವ್ ನಾನು ಅರ್ಜಿ ಕೊಟ್ಟೇವು.
ಸ್ಪೀಕರ್ ವಿಚಾರಣೆ ನಡೆಸಿ ಹದಿನೇಳು ಜನರು ಅನರ್ಹ ಅಂತಾ ಆದೇಶ ಕೊಟ್ಟರು. ಸುಪ್ರೀಂ ಕೋರ್ಟ್ ಮೇಲೆ ಜನತಾ ನ್ಯಾಯಾಲ. ಸುಪ್ರೀಂ ಕೋರ್ಟ್ ನಲ್ಲಿ ಕೂಡ ಅನರ್ಹರು ಅಂತಾ ತೀರ್ಪು ನೀಡಿದೆ ಅನರ್ಹರು ಅಂದರೆ ಎಂಎಲ್‌ಎ ಆಗಲು ನಾಲಾಯಕ್ ಅಂತಾ.
ಈ ನಾಲಾಯಕ್ ಆದ ಮನಷ್ಯ ಪುನಃ ಲಾಯಕ್ ಮಾಡು ಅಂತಾ ಬರ್ತಿದ್ದಾರೆ. ಸುಪ್ರೀಂ ಕೋರ್ಟ್ ಹೇಳಿದೆ ನೀವು ನಾಲಾಯಕ್ ಅಂತಾ ಇವರನ್ನ ನಾಲಾಯಕ್ ಮಾಡಿ ಮನೆಗೆ ಕಳುಹಿಸಿ. ನಿಮ್ಮ ಕಷ್ಟ ಕೇಳಲು ಆಗದೆ ತಮ್ಮ‌ ಸ್ವಾರ್ಥಕ್ಕಾಗಿ ಮುಂಬೈನಲ್ಲಿದ್ದರು.
ಇಂಥವರು ಮತ್ತೆ ಎಂಎಲ್‌ಎ ಆಗಬೇಕಾ.
ಇಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದರು

ಬಿ.ಸಿ ಪಾಟೀಲ್ ನ‌ ಮನೆಗೆ ಕಳುಹಿಸುತ್ತೇನೆ ಅಂತಾ ಹಿರೇಕೆರೂರ್ ನಲ್ಲಿ ಹೇಳುತ್ತಿದ್ದಾರೆ.
ಅಥಣಿ ಕ್ಷೇತ್ರದಲ್ಲಿ ಅದೇ ರೀತಿ ಆಗಬೇಕು.
ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಹೋಗಿದ್ದಾರೆ ನಿಮಗೆ ಮನಷ್ಯತ್ವ ಇದೆಯಾ. ಮನುಷ್ಯರೇ ಅಲ್ಲಾ ಇವರು, ಅಭಿವೃದ್ಧಿ ಮಾಡೊಕೆ ಹೋಗಿಲ್ಲ ಇವರ ಅಭಿವೃದ್ಧಿ ಮಾಡಿಕೊಳ್ಳಲು ಹೋಗಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕು
ಹದಿನೇಳು ಜನ ಓಡಿ ಹೋಗಿದ್ದರಿಂದ ಸರ್ಕಾರ ಬಿದ್ದು ಹೋಯಿತು.ಶ್ರೀಮಂತ ಪಾಟೀಲ್ ಹೆಂಗೆ ಅಂದ್ರೆ.
ಶುಗರ್ ಪ್ಯಾಕ್ಟರಿ ಪವರ್ ಲೂಮ್ ಬಗ್ಗೆ ಮಾತಾಡಿ ಅಂದ್ರೂ.ನಾನು ಕೂಡಲೇ ಅದನ್ನ ಮಾಡಿಕೊಡುವಂತೆ ಕುಮಾರಸ್ವಾಮಿಗೆ ಹೇಳಿದೆ.ಹೀಗೆ ಹೇಳಿದ ಅರ್ಧ ಗಂಟೆಯಲ್ಲಿ ಪತ್ತೆ ಇರಲಿಲ್ಲ ಗಿರಾಕಿ ಎಂದು ಶ್ರೀಮಂತ ಪಾಟೀಲರ ಕುರಿತು ಲೇವಡಿ ಮಾಡಿದ್ರು

*ನಮ್ಮ ಸರ್ಕಾರ ಒಂಬತ್ತರ ನಂತರ ಮತ್ತೆ ಕರ್ನಾಟಕದಲ್ಲಿ ಬರುತ್ತೆ*ಹದಿನೈದಕ್ಕೂ ಹದಿನೈದು ಸ್ಥಾನ ಬಿಜೆಪಿ ಸೋಲುತ್ತೆ.ಎಷ್ಟೇ ದುಡ್ಡು ಖರ್ಚು‌ ಮಾಡಲಿ ಯಡಿಯೂರಪ್ಪ ಎಷ್ಟೇರೌಂಡ್ ಹೊಡೆಯಲಿ ಹದಿನೈದು ಗೆಲ್ಲುತ್ತೇವೆ.ಡಿ.9ರ ನಂತರ ಮತ್ತೆ ಕಾಂಗ್ರೆಸ್ ಪಕ್ಷ ಬರುತ್ತೆ ಅಂತಾ ಸಿದ್ದರಾಮಯ್ಯ ಭವಿಷ್ಯ ನುಡಿದರು

ಉಚಿತವಾಗಿ ಅಕ್ಕಿಯನ್ನ ನಮ್ಮ ಸರ್ಕಾರದಲ್ಲಿ ಕೊಟ್ಟಿದ್ದೇವೆ.ಗುಜರಾತ್ ನಲ್ಲಿ ಯಾಕೆ ಉಚಿತವಾಗಿ ಅಕ್ಕಿ ಕೊಡುತ್ತಿಲ್ಲ.ಯಡಿಯೂರಪ್ಪ ಸುಳ್ಳು ಹೇಳುವುದನ್ನ ಕಲಿತುಕೊಂಡಿದ್ದಾರೆ.ಯಡಿಯೂರಪ್ಪ ನಾವು ಕೊಟ್ಟ ಯೋಜನೆ ಕೊಟ್ಟರಾ. ನಾವು ಅಧಿಕಾರಕ್ಕೆ ಮತ್ತೆ ಬಂದರೆ ಏಳು ಕೆಜಿ ಅಕ್ಕಿ ಅಲ್ಲ ಹತ್ತು ಕೆ.ಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ.* ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಒಂದೇ ಒಂದು ರೂಪಾಯಿ ಸಾಲಾ ಮನ್ನಾ ಮಾಡಿದ್ದಾರಾ.ಇದೇ ಯಡಿಯೂರಪ್ಪ ಸಾಲಾಮನ್ನಾ ಮಾಡಿ ಎಂದು ಕೇಳಿದ್ರೆ ನಮ್ಮ ಸರ್ಕಾರದಲ್ಲಿ ನೋಟು ಪ್ರಿಂಟ್ ಮಾಡುವ ಮಷೀನ್ ಇಲ್ಲ ಅಂದಿದ್ದರು.
ಯಡಿಯೂರಪ್ಪ ಒಬ್ಬನೇ ರೈತ ಮಕ್ಕಳು ಮತ್ತೆ ನಾವ್ ಯಾರ ಮಕ್ಕಳು.ಪ್ರವಾಹದಲ್ಲಿ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದೆ ಬಿಟ್ಟರೆ ಬೇರೆ ಎನೂ ಪರಿಹಾರ ಕೊಟ್ಟಿಲ್ಲ.ಪರಿಹಾರ ಕೊಡುವಂತೆ ಹೇಳಿದ್ರೆ ಕ್ರಮ ತೆಗೆದುಕೊಳ್ಳದೆ ಈಗ ಚುನಾವಣೆ ಮಾಡಲು ಬಂದಿದ್ದಾರೆ.ನರೇಂದ್ರ ಮೋದಿ ಹೇಳಿದ್ದೆಲ್ಲಾ ಸುಳ್ಳೆ, ಅಚ್ಚೇದಿನ್ ಆಯೆಗಾ ಅಂತಾ ಹೇಳಿದ್ರು ಬಂತಾ.
ರಾಜ್ಯದಲ್ಲಿ ಪ್ರವಾಹ ಬಂದಾಗ ಮೋದಿ ಬರಲಿಲ್ಲ.
*ಆಪರೇಷನ್ ಕಮಲ ಚಾಲ್ತಿ ಬಂದಿದ್ದೆ ಯಡಿಯೂರಪ್ಪ ಅವರಿಂದ.*ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ ಎಂದರು ಸಿದ್ರಾಮಯ್ಯ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *