ಹಲಗಾದಲ್ಲಿ 19 ಎಕರೆ ಭೂಮಿಯನ್ನು ವಶಕ್ಕೆ ಪಡೆದ ಪಾಲಿಕೆ

ಬೆಳಗಾವಿ- ಮಹಾನಗರ ಪಾಲಿಕೆ ಸಮೀಪದ ಹಲಗಾ ಗ್ರಾಮದಲ್ಲಿ ಸಿವೇಜ್ ಟ್ರಿಟಮೆಂಟ್ ಪ್ಲಾಂಟ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸಲು 19 ಎಕರೆ ಭೂಮಿಯನ್ನು ಭೂಸ್ವಾಧಿನ ಮಾಡಿಕೊಂಡಿದ್ದು ಬುಧವಾರ ಪಾಲಿಕೆ ಅಧಿಕಾರಿಗಳು ಪೋಲೀಸ್ ಬಂದೋಬಸ್ತಿಯಲ್ಲಿ 19 ಎಕರೆ ಜಾಗೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು

ಪಾಲಿಕೆ ಆಯುಕ್ತ ಶಶಿಧರ ಕುರೇರ ನೀರು ಸರಬರಾಜು ಮಂಡಳಿಯ ಪ್ರಸನ್ನ ಮೂರ್ತಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಲಗಾ ಗ್ರಾಮದ ಜಾಗೆಯನ್ನು ತಮ್ಮ ವಶಕ್ಕೆ ಪಡೆಯಲು ಹೋದಾಗ ಇಲ್ಲಿಯ ರೈತರು ಅದಕ್ಕೆ ವಿರೋಧ ವ್ಯೆಕ್ತಪಡಿಸಿದರು ರೈತರ ವಿರೋಧದ ನಡುವೆಯೂ ಪಾಲಿಕೆ ಅಧಿಕಾರಿಗಳು 19 ಎಕರೆ ಜಾಗೆಗೆ ಬೌಂಡರಿ ಫಿಕ್ಸ ಮಾಡಿದರು

ಜಿಲ್ಲಾಡಳಿತ ಕೊಳಚೆ ಸಂಸ್ಕರಣಾ ಘಟಕ ಸ್ಥಾಪಿಸಲು ಹಲಗಾ ಗ್ರಾಮದಲ್ಲಿ 19 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡಿತ್ತು ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ ಮೊರೆ ಹೋಗಿದ್ದರು ಹೈಕೋರ್ಟ್ ರೈತರ ಅರ್ಜಿಯನ್ನು ವಜಾ ಮಾಡಿ ಪಾಲಿಕೆ ಪರವಾಗಿ ಮೂರು ತಿಂಗಳ ಹಿಂದೆಯೇ ತಿರ್ಪು ನೀಡಿತ್ತು

ಹೈಕೋರ್ಟ ಆದೇಶದ ಪ್ರಕಾರ ಪಾಲಿಕೆ ಅಧಿಕಾರಿಗಳು ಜಾಗೆಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಆದರೆ ರೈತರು ಹೈಕೋರ್ಟ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ ಎರಡು ದಿನದಲ್ಲಿ ರೈತರು ಸಲ್ಲಿಸಿರುವ ಮೇಲ್ಮನವಿ ಹೈಕೋರ್ಟನಲ್ಲಿ ವಿಚಾರಣೆಗೆ ಬರಲಿದೆ ಅಲ್ಲಿಯವರೆಗೆ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬಾರದು ಎನ್ನುವದು ರೈತರ ಬೇಡಿಕೆಯಾಗಿತ್ತು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *