ಬೆಳಗಾವಿಯಲ್ಲಿ ಆರ್. ವ್ಹಿ.ದೇಶಪಾಂಡೆ ಕಿರಣ ಠಾಖೂರ ಕಲಿತ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ..
ಬೆಳಗಾವಿ- ಶಿಕ್ಷಣ ಸಂಸ್ಥೆಗಳ ತವರು ದೇಶಕ್ಕೆ ಅನೇಕ ಜ್ಞಾನಿಗಳನ್ನು ನೀಡಿದ ಬೆಳಗಾವಿಯ ಸೌಥ್ ಕೊಂಕಣ ಎಜ್ಯುಕೇಶನ್ ಸಂಸ್ಥೆಯು 75 ವರ್ಷಗಳ ಸುಧೀರ್ಘ ಶಿಕ್ಷಣ ಸೇವೆ ನೀಡಿದ್ದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
ದೇಶಕ್ಕೆ ಆರ್ ವ್ಹಿ ದೇಶಪಾಂಡೆ ಅವರಂತಹ ನಾಯಕ,ಕಿರಣ ಠಾಖೂರ ಅವರಂತಹ ಸಾವಿರಾರು ಪ್ರತಿಭೆಗಳನ್ನು ನೀಡಿರುವ ಬೆಳಗಾವಿಯ ಸೌಥ್ ಕೊಂಕಣ ಎಜ್ಯುಕೇಶನ್ ಸಂಸ್ಥೆ ಡಿಸೆಂಬರ್ 21 ರಿಂದ 24 ರವರೆಗೆ ಅಮೃತ ಮಹೋತ್ಸವ ಆಚರಿಸುತ್ತಿದ್ದು ಈ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಡಿಸೆಂಬರ್ 21 ರಂದು ಮಾಜಿ ಸಚಿವ ಸಂಸ್ಥೆಯ ಹಳೆಯ ವಿಧ್ಯಾರ್ಥಿ ಆರ್ ವ್ಹಿ ದೇಶಪಾಂಡೆ ಅವರ ನೇತ್ರತ್ವದಲ್ಲಿ ಹಳೆಯ ವಿಧ್ಯಾರ್ಥಿಗಳ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಒಂದುವರೆ ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಭಾಗವಹಿಸಲಿದ್ದಾರೆ.ಇದೇ ಸಮಾವೇಶದಲ್ಲಿ ಪತ್ರಕರ್ತ ಕಿರಣ ಠಾಖೂರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಡಿಸೆಂಬರ್ 22 ರಂದು ಸಂಜೆ 5 ಘಂಟೆಗೆ ಅಮೃತ ಮಹೋತ್ಸವದ ಮುಖ್ಯ ಕಾರ್ಯಕ್ರಮ ನಡೆಯಲಿದೆ ಮುಖ್ಯ ಅತಿಥಿಗಳಾಗಿ ಸುಶೀಲ ಪಂಡಿತ ಮತ್ತು ಮರಾಠಿ ಚಿತ್ರ ನಟ ಸುಭೋದ ಭಾವೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
1944 ರಲ್ಲಿ ಮಹಾತ್ಮಾ ಗಾಂಧಿ ಅವರ ನೇತ್ರತ್ವದಲ್ಲಿ ಚಲೇಜಾವ್ ಚಳುವಳಿ ನಡೆಯುತ್ತಿದ್ದ ಸಂಧರ್ಭದಲ್ಲಿ ಈ ಚಳುವಳಿಯ ಪ್ರೇರಣೆಯಿಂದಾಗಿ ಸೌಥ್ ಕೊಂಕಣ ಭಾಗದ ಸಮಾಜ ಸೇವಕರು ಸ್ವಾತಂತ್ರ್ಯ ಹೋರಾಟಗಾರರು ಸೇರಿ ಸೌಥ್ ಕೊಂಕಣ ಎಜ್ಯುಕೇಶನ್ ಸಂಸ್ಥೆ ಹುಟ್ಟು ಹಾಕಿದ್ರು ಸಾವಂತವಾಡಿಯಲ್ಲಿ ರಾಣಿ ಪಾರ್ವತಿ ದೇವಿ ಅವರ ನೇತ್ರತ್ವದಲ್ಲಿ ಆರಂಭಗೊಂಡ ಈ ಸಂಸ್ಥೆ ಇಂದಿಗೆ 75 ವರ್ಷಗಳನ್ನು ಪೂರೈಸಿದೆ ,ಬೆಳಗಾವಿಯಲ್ಲಿ ಜಮಖಂಡಿಯ ಪಟವರ್ಧನರು ಜಾಗೆ ನೀಡಿದ ಪರಿಣಾಮ ಬೆಳಗಾವಿಯಲ್ಲಿ ರಾಣಿ ಪಾರ್ವತಿದೇವಿ ಕಲಾ ವಿದ್ಯಾಲಯ ಗೋವಿಂದರಾಮ ಸೆಕ್ಟೇರಿಯಾ ವಿಜ್ಞಾನ ಮಹಾ ವಿದ್ಯಾಲಯ ಆರಂಭಗೊಂಡಿತು
ದೇಶಕ್ಕೆ ಅನೇಕ ಮಹಾಜ್ಞಾನಿಗಳನ್ನು ಸಾಹಿತಿಗಳನ್ನು,ಲೇಖಕರನ್ನು ರಾಜಕಾರಣಿಗಳನ್ನು ಕೊಡುಗೆಯಾಗಿ ಕೊಟ್ಟ ಸೌಥ್ ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಯ 75 ವರ್ಷಗಳ ಸೇವೆಯನ್ನು ಸ್ಮರಿಸಿ,