ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಮೇಯರ್ ಬಸವರಾಜ ಚಿಕ್ಕಲದಿನ್ನಿ ಅವರು ನಾಳೆ ನಗರ ಸೇವಕರ ಸಭೆ ಕರೆದಿದ್ದಾರೆ
ಪಾಲಿಕೆಯಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲ ನಗರ ಸೇವಕರು ಭಾಗವಹಿಸುವಂತೆ ಮೇಯರ್ ಫರ್ಮಾನು ಹೊರಡಿಸಿದ್ದಾರೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಸಮೀತಿಯ ಅಧ್ಯಕ್ಷರಾಗಿದ್ದು ಜಿಯಾವುಲ್ಲಾ ಎಂಡಿ ಯಾಗಿದ್ದಾರೆ ಮೇಯರ್ ಮತ್ತು ನಾಲ್ಕು ಜನ ನಗರ ಸೇವಕರು ಸಮೀತಿಯ ಸದಸ್ಯರಾಗಿದ್ದಾರೆ
2016 ರಲ್ಲಿ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಚೇರಿಯನ್ನು ಟಿಳಕವಾಡಿಯಲ್ಲಿ ಆರಂಭಿದಲಾಯಿತು ಈ ಅವಧಿಯಲ್ಲಿಯೇ ಕೇಂದ್ರ ಸರ್ಕಾರ ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ ಈ ಯೋಜನೆಯನ್ನು ಬದಲು ಮಾಡಲು ಸಾಧ್ಯವಿಲ್ಲ
ಮೇಯರ್ ಚಿಕ್ಕಲದಿನ್ನಿ ನಾಳೆ ಸಭೆ ಕರೆದಿದ್ದು ಸಭೆಯಲ್ಲಿ ಅನೇಕ ಪ್ರಶ್ನೆಗಳು ಎದುರಾಗಲಿವೆ ನಾಳೆ ಬೆಳಿಗ್ಗೆ 11 ಘಂಟೆಗೆ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ಸಭೆ ನಡೆಯಲಿದೆ