ಬೆಳಗಾವಿ- ಬೆಳಗಾವಿಯ ಸ್ಮಾರ್ಟ ಸಿಟಿ ಯೋಜನೆಯ ಕುರಿತು ಕನ್ಸಲ್ಟನ್ಸಿ ಗೆ ಮಾರ್ಗದರ್ಶನ ಮಾಡಲು ಕೆನಡಾ ದೇಶದ ಕಂಪನಿಯೊಂದು ಮುಂದಾಗಿದ್ದು ಕಂಪನಿಯ ಇಬ್ಬರು ಪ್ರತಿನಿಧಿಗಳು ಬೆಳಗಾವಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ
ಜಿಲ್ಲಾಧಿಕಾರಿ ಎನ್ ಜಯರಾಂ,ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪಾಲಿಕೆ ಆಯುಕ್ತ ಶಶಿಧರ ಕುರೇರ ಅಭಿಯಂತರರಾದ ಆರ್ ಎಸ್ ನಾಯಕ ಮತ್ತು ಲಕ್ಷ್ಮೀ ನಿಪ್ಪಾಣಿಕೆರ ಅವರು ಸಮಾಲೋಚನೆಯಲ್ಲಿ ಭಾಗವಹಿಸಿದ್ದಾರೆ
ಕೆನಡಾ ದೇಶದದಲ್ಲಿ ಅನೇಕ ಹೈಟೆಕ್ ಕಾಮಗಾರಿ ನಡೆಸಿರುವ ಕೆನಡಾ ಮೂಲದ ಕಂಪನಿ ಬೆಳಗಾವಿಯ ಸ್ಮಾರ್ಟ್ಸಿ ಸಿಟಿ ಯೋಜನೆಯ ಕಾರ್ಯದಲ್ಲಿ ಕೈಜೋಡಿಸಲು ಮುಂದಾಗಿದೆ ಯಾವ ಯಾವ ರೀತಿಯಲ್ಲಿ ಬೆಳಗಾವಿ ನಗರವನ್ನು ಸ್ಮಾರ್ಟ್ ಮಾಡಬಹುದು ಅನ್ನೋದರ ಬಗ್ಗೆ ಕಂಪನಿಯ ಇಬ್ಬರು ಪ್ರತಿನಿಧಿಗಳು ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ