ಬೆಳಗಾವಿಯಲ್ಲಿ ಸ್ವಚ್ಛತೆ ಕಾಪಾಡಿದ ಪಂಚ ಮಂಡಳಿಗೆ ಫಾರೇನ್ ಟೂರ್.,….!!!!!
ಬೆಳಗಾವಿ- ಬೆಳಗಾವಿ ನಗರವನ್ನು ಸ್ವಚ್ಛ ಮತ್ತು ಸುಂಧರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಪಡೆಯಲು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೆಳಗಾವಿಯ ಇಬ್ಬರು ಶಾಸಕರು ವಿಭಿನ್ನವಾದ ಯೋಜನೆ ರೂಪಿಸಿದ್ದಾರೆ.
ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರನ್ನು ಆಕರ್ಷಿಸಲು ನಿರ್ಧರಿಸಿದ್ದಾರೆ ಬೆಳಗಾವಿ ನಗರದ ಪ್ರತಿಯೊಂದು ಗಲ್ಲಿಯಲ್ಲಿ ,ಯುವಕ,ಮಂಡಳ ,ಮಹಿಳಾ ಮಂಡಳ,ಗಲ್ಲಿಯ ಹಿರಿಯರನ್ನು ಸೇರಿಸಿ ಸ್ವಚ್ಛತಾ ಸ್ವಾಭಿಮಾನ್ ಸಮೀತಿ ರಚಿಸಿ ಆ ಸಮೀತಿ ತಮ್ಮ ಗಲ್ಲಿಯ ಸ್ವಚ್ಛತೆಯ ಕುರಿತು ನಿಗಾ ವಹಿಸುವ ಜವಾಬ್ದಾರಿ ನೀಡಲಿದ್ದಾರೆ .ಯಾವ ಸಮೀತಿ ನಿರಂತರವಾಗಿ ನಾಲ್ಕು ತಿಂಗಳ ಕಾಲ ತಮ್ಮ ಗಲ್ಲಿಯಲ್ಲಿ ವ್ಯೆವಸ್ಥಿತವಾಗಿ ಸ್ವಚ್ಛತೆ ಕಾಪಾಡುವಲ್ಲಿ ಯಶಸ್ವಿ ಆಗುತ್ತದೆಯೋ ಆ ಸಮೀತಿಯ ಎಲ್ಲ ಸದಸ್ಯರನ್ನು ಫಾರೇನ್ ಟೂರ್ ಗೆ ಕಳಿಸುವ ಯೋಜನೆಯನ್ನು ಈ ಇಬ್ಬರು ಶಾಸಕರು ಬೆಳಗಾವಿಯಲ್ಲಿ ಜಾರಿಗೆ ತರಲು ತಯಾರಿ ನಡೆಸಿದ್ದಾರೆ.
ಶಾಸಕ ಅಭಯ ಪಾಟೀಲ ಈ ಕುರಿತು ಪಾಲಿಕೆಯ ಆರೋಗ್ಯ ವಿಭಾಗದ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ಸ್ವಚ್ಛತಾ ಸ್ವಾಭಿಮಾನ್ ಸಮೀತಿಯ ಜವಾಬ್ದಾರಿಗಳೇನು ? ಸಮೀತಿಗಳು ತಮ್ಮ ತಮ್ಮ ಗಲ್ಲಿಗಳಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡಬೇಕು,ಒಣ ಕಸ ,ಹಸಿ ಕಸವನ್ನು ಬೇರ್ಪಡಿಸುವ ನಿಟ್ಟಿನಲ್ಲಿ ಯಾವ ರೀತಿ ಜಾಗೃತಿ ಮೂಡಿಸಬೇಕು ,ಈ ಸಮೀತಿಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಅನ್ನೋದರ ಬಗ್ಗೆ ನಿಗಾ ವಹಿಸುವ ಜವಾಬ್ದಾರಿಯನ್ನು ಯಾರಿಗೆ ಕೊಡಬೇಕು ಎನ್ನುವದರ ಬಗ್ಗೆ ಸಮಗ್ರವಾದ ರೂಪುರೇಷೆಗಳನ್ನು ಸಿದ್ಧ ಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ಸ್ವಚ್ಛತಾ ಸ್ವಾಭಿಮಾನ್ ಸಮೀತಿಯ ಕುರಿತು ಶೀಘ್ರದಲ್ಲೇ ಹ್ಯಾಂಡಬಿಲ್ ಮುದ್ರಿಸಿ ಬೆಳಗಾವಿ ನಗರದಾದ್ಯಂತ ಫಾರೇನ್ ಟೂರ್ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಬೆಳಗಾವಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ,ಸ್ಮಾರ್ಟ್ ನಗರಿಯನ್ನು ಇನ್ನಷ್ಟು ಸುಂದರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಪಡೆದುಕೊಳ್ಳುತ್ತೇವೆ ಎಂದು ಶಾಸಕ ಅಭಯ ,ಪಾಟೀಲ ಮತ್ತು ಶಾಸಕ ಅನೀಲ ಬೆನಕೆ ತಿಳಿಸಿದ್ದಾರೆ …
ನಿರಂತರವಾಗಿ ನಾಲ್ಕು ತಿಂಗಳ ಕಾಲ ತಮ್ಮ ಗಲ್ಲಿಯಲ್ಲಿ ಸ್ವಚ್ಛತೆ ಕಾಪಾಡುವ ಬೆಳಗಾವಿ,ದಕ್ಷಿಣ ಮತ್ತು ಉತ್ತರದ ತಲಾ ಒಂದೊಂದು ಸಮೀತಿ ಎಂಜಾಯ್ ಮಾಡಲು ಫಾರೇನ್ ಟೂರ್ ಗೆ ಹೋಗುವ ಭಾಗ್ಯ ಒದಗಿ ಬಂದಿದೆ