,ಬೆಳಗಾವಿ- ಸ್ಮಾರ್ಟ ಸಿಟಿ ಯೋಜನೆಗೆ ಸಮಂಧಿಸಿದಂತೆ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಗರದಲ್ಲಿ ನಿರ್ಮಿಸಲಾಗುವ CBT ಬಸ್ ನಿಲ್ಧಾಣದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು
ಪೂನಾ ಮೂಲದ PMC ಲೆಹರ್ ಕಂಪನಿಯ ಪ್ರತಿನಿಧಿಗಳು ಹೈಟೆಕ್ ಬಸ್ ನಿಲ್ಧಾಣಗಳ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು
ಸ್ಮಾರ್ಟ ಸಿಟಿ ಯೋಜನೆಯ ಅನುದಾನದಲ್ಲಿ ನಗರದಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಮುಖ್ಯ ಸಿಬಿಟಿ ನಿಲ್ಧಾಣ ಹಾಗು ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಮತಕ್ಷೇತ್ರಗಳಲ್ಲಿ ತಲಾ ಐದು ಅಂದರೆ ಒಟ್ಟು ಹತ್ತು ಹೈಟೆಕ್ ಬಸ್ ಶೆಲ್ಟರ್ ಗಳನ್ನು ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಲೆಹರ್ ಕಂಪನಿ ಯೀಜನೆ ರೂಪಿಸಿದ್ದು ಅದರ ಮಾದರಿಯನ್ನು ಪಾಲಿಕೆ ಆಯುಕ್ತ ಶಶಿಧರ ಕುರೇರ ಪರಶೀಲಿಸಿದರು
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಬೇಗನೆ ಆರಂಭ ಆಗುವ ಲಕ್ಷಣಗಳು ಕಂಡು ಬಂದಿದೆ
ನಗರದಲ್ಲಿ ನಿರ್ಮಿಸಲಾಗುವ ಹತ್ತು ಹೈಟೆಕ್ ಬಸ್ ಶೆಲ್ಟರ್ ಗಳಲ್ಲಿ ಫುಡ್ ಸ್ಟಾಲ್, ವೈಫೈ ಸೇರಿದಂತೆ ಪ್ರಯಾಣಿಕರಿಗೆ ಸ್ಮಾರ್ಟ್ ಸೌಲಭ್ಯಗಳು ದೊರಕಲಿವೆ