Breaking News

ನವೀಲ ತೀರ್ಥ ಜಲಾಶಯದಲ್ಲಿ ಕೇವಲ ಒಂದೇ ಒಂದು TMC ತೀರ್ಥ ಬಾಕಿ..!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲದ ಭಾಯೆ ಆವರಿಸಿದೆ ಜಿಲ್ಲೆಯ ಕೃಷ್ಣಾ ನದಿಯ ಮಡಿಲಲ್ಲಿ ಮಹಾರಾಷ್ಟ್ರದ ನೀರು ಹರಿಯುತ್ತಿದ್ದು ಇದನ್ನು ಬಿಟ್ಟರೆ ಜಿಲ್ಲೆಯ ಉಳಿದ ನದಿ,ಕೆರೆ,ಹಳ್ಳಗಳು ಬತ್ತಿ ಹೋಗಿವೆ

37.731 TMC ನೀರಿನ ಸಾಮರ್ಥ್ಯ ಹೊಂದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ನವೀಲ ತೀರ್ಥ ಜಲಾಶಯದಲ್ಲಿ ಕೇವಲ 1.516 TMC ನೀರು ಮಾತ್ರ ಬಾಕಿ ಉಳಿದುಕೊಂಡಿದೆ ಈ ಜಲಾಶಯ ದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಬಾಕಿ ಉಳಿದಿರುವದರಿಂದ ಬೆಳಗಾವಿ ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಜನರಿಗೆ ನೀರಿನ ಸಮಸ್ಯೆ ಎದುರಾಗಲಿದೆ

ಈ ಜಲಾಶಯದಿಂದ ಬೆಳಗಾವಿ ಜಿಲ್ಲೆಯ ಸವದತ್ತಿ,ಬೈಲಹೊಂಗಲ ರಾಮದುರ್ಗ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆ ಆಗುವದರ ಜೊತೆಗೆ ಹುಬ್ಬಳ್ಳಿ ಧಾರವಾಡ ಮಹಾನಗರಗಳಿಗೆ ನವೀಲ ತೀರ್ಥ ಜಲಾಶಯದಿಂದ ನೀರು ಪೂರೈಕೆ ಆಗುತ್ತದೆ

ನವೀಲ ತೀರ್ಥ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಪ್ರತಿ ದಿನ 64 ಕ್ಯುಸೆಕ್ಸ ನೀರು ಸರಬರಾಜು ಆಗುತ್ತದೆ ಬೆಳಗಾವಿ ಜಿಲ್ಲೆಯ ಕೆಲವು ತಾಲೂಕುಗಳು ಸೇರಿ ಹುಬ್ಬಳ್ಳಿ ಧಾರವಾಡಕ್ಕೆ ಈ ಜಲಾಶಯದಿಂದ ಪ್ರತಿ ದಿನ 124 ಕ್ಯುಸೆಕ್ಸ ನೀರು ಖಾಲಿಯಾಗುತ್ತಿದೆ

ಒಂದು TMC ಅಂದ್ರೆ 11 ಸಾವಿರ 574 ಕ್ಯಸೆಕ್ಸ ಪ್ರತಿ ದಿನ 154 ಕ್ಯುಸೆಕ್ಸ ನೀರು ಸರಬರಾಜು ಆದರೆ ಜೂನ್ ತಿಂಗಳವರೆಗೂ ನೀರು ಸರಬರಾಜು ಮಾಡಲು ಸಾದ್ಯ ಅಂತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು

ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ ಬಿಸಿಲಿನ ಕಾವಿಗೆ ಜಲಾಶಯದ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗುತ್ತಿದೆ ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದ್ದು ಬೆಳಗಾವಿ ಹಾಗು ಹುಬ್ಬಳ್ಳಿ ಧಾರವಾಡ ಮಹಾನಗರದ ಜನ ನೀರನ್ನು ಪೋಲು ಮಾಡದೇ ಬರಗಾಲದ ಪರಿಸ್ಥಿತಿಯನ್ನು ಎದುರಿಸಲು ಸಹಕರಿಸುವದು ಅತ್ಯಗತ್ಯವಾಗಿದೆ

ಸಕಾಲದಲ್ಲಿ ಮಳೆರಾಯ ಕೃಪೆ ತೋರದಿದ್ದರೆ ಬರಗಾಲದ ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳಲಿದೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *