ಬೆಳಗಾವಿ- ಬೆಳಗಾವಿ ಸದಾಶಿವ ನಗರದ ಸ್ಮಶಾನದಲ್ಲಿ ನಡೆದ ಅಂಥದೊಂದು ಪ್ರಸಂಗ,ಮನಕಲಕುವ ಆ ಕ್ಷಣಗಳಿಂದ ಹೊರ ಬರಲು ಸಾದ್ಯವಾಗುತ್ತಿಲ್ಲ ,ಆ ತಾಯಿಯ ವೇದನೆಯನ್ನು ಬರವಣಿಗೆಯ ಮೂಲಕ ಹೇಳಲು ಸಾದ್ಯವೇ ಇಲ್ಲ.
ನಿನ್ನೆ ಸಂಜೆ ಹೆತ್ತಮ್ಮ ತನ್ನ ಒಡಲು ಕುಡಿಯ ಅಂತ್ಯ ಸಂಸ್ಕಾರಕ್ಕಾಗಿ ಪಟ್ಟ ವೇದನೆ ನೆನಪಿಸಿದರೆ ಈಗಲೂ ಕೈಕಾಲು ನಡಗುತ್ತಿವೆ.
ಪತ್ರಿಕಾ ಮಿತ್ರನ ನೆರವಿನಿಂದ ಅಂತ್ಯ ಸಂಸ್ಕಾರ ಮುಗಿಸಿದ ಹೆತ್ತಮ್ಮ ಮಗಳ ಜೊತೆ ಊರಿಗೆ ಹೋಗೋದು ಹೇಗೆ ಎನ್ನುವ ಚಿಂತೆಯಲ್ಲಿ ಕುಳಿತಿರುವಾಗ ಪತ್ರಿಕಾ ಮಿತ್ರ ನಾನು ವಾಹನದ ವ್ಯೆವಸ್ಥೆ ಮಾಡುತ್ತೇನೆ ಮಾರ್ಗದ ಮದ್ಯ ಪೋಲೀಸರು ತಡೆದರೆ ಕಷ್ಟ ಎಂದು ತಿಳಿದು ಈ ವಿಷಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಆಮೇಲೆ ಊರಿಗೆ ಹೋಗೋಣ ಎಂದು ಪತ್ರಿಕಾ ಮಿತ್ರ ಎಸ್ ಪಿ ಸಾಹೇಬರಿಗೆ ಫೋನ್ ಮಾಡಿದ್ದಾನೆ.
ದೂರವಾಣಿಯಲ್ಲಿ ಸ್ಮಶಾನದಲ್ಲಿ ನಡೆದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನಿಂಬರಗಿ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ವಾಹನದ ವ್ಯೆವಸ್ಥೆಯನ್ನು ತಾವೇ ಮಾಡಿ ತಾಯಿ ಮತ್ತು ಮಗಳನ್ನು ಊರಿಗೆ ಮುಟ್ಟಿಸಿ ಕರುಣೆ ತೋರಿದ ವಿಷಯ ಗೊತ್ತಾಗಿದ್ದು ಈಗ
ಪೋಲೀಸರಿಗೂ ತಾಯಿ ಹೃದಯವಿರುತ್ತದೆ ಎಂದು ಎಸ್ ಪಿ ನಿಂಬರಿಗಿ ಅವರು ತೋರಿಸಿದ್ದಾರೆ.
ನಿಂಬರಗಿ ಅವರೇ ನಿಮ್ಮ ಕರುಣೆಗೊಂದು ಮನದಾಳದ ಸಲಾಂ…