ಬೆಳಗಾವಿ-ಬೆಳಗಾವಿ ನಗರದಲ್ಲಿ ಅ ವೈಜ್ಞಾನಿಕವಾಗಿರುವ ಸ್ಪೀಡ್ ಬ್ರೇಕರ್ ಗಳಿಂದ ದಿನ ನಿತ್ಯ ರಸ್ತೆ ಅಪಘಾತ ಸಂಭವಿಸುತ್ತಿರುವದನ್ನು ಗಮನಿಸಿದ ಬೆಳಗಾವಿಯ ಯುವ ಪಡೆ ವೇಗ ತಡೆಗಳಿಗೆ ಸುಣ್ಣ ಬಳಿದು ಎಲ್ಲರ ಗಮನ ಸೆಳೆಯಿತು
ಬೆಳಗಾವಿ ನಗರದಲ್ಲಿ ನೂರಾರು ಅ ವೈಜ್ಞಾಕವಾದ ವೇಗ ತಡೆಗಳಿವೆ ಈ ವೇಗ ತಡೆಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಲ್ಲಿ ಸ್ಪೀಡ್ ಬ್ರೆಕರ್ ಗಳಿವೆ ಅನ್ನೋದು ವಾಹನ ಸವಾರರಿಗೆ ಗೊತ್ತಾಗುವದೇ ಇಲ್ಲ ರಾತ್ರಿ ಹೊತ್ತಿನಲ್ಲಿ ಇವುಗಳು ಕಣ್ಣಿಗೆ ಕಾಣಿಸದೇ ಇರುವದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ
ಸ್ಪೀಡ್ ಬ್ರೇಕರ್ ಗಳು ಇರಬೇಕು ಆದರೆ ಇವುಗಳು ವೈಜ್ಞಾನಿಕವಾಗಿರಬೇಕು ಜೊತೆಗೆ ವಾಹನ ಸವಾರರಿಗೆ ಕಾಣಿಸುವಂತೆ ಆಗಾಗ ಸುಣ್ಣ ಬಣ್ಣ ಬಳಿಯಬೇಕು ಅಂತಾರೆ ಬೆಳಗಾವಿ ನಗರದ ಯುವ ಪಡೆ
ಸುಣ್ಣ ಬಣ್ಣ ಹಚ್ಚಿ ಎಂದು ಅಧಿಕಾರಿಗಳಿಗೆ ಹೇಳಿದರೆ ಅಥವಾ ಅರ್ಜಿ ಬರೆದರೆ ಉದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತಾ ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕ್ತಾರೆ ಅದೆಲ್ಲ ಉಸಾಬರಿ ಮಾಡೋದೇ ಬೇಡ ಎಂದು ತೀರ್ಮಾಣಿಸಿದ ಆಜಂ ನಗರದ ಯುವಕರು ಭಾನುವಾರ ಮಧ್ಯಾಹ್ನ ನಗರದ ಬಾಕ್ಸೈಟ್ ರಸ್ತೆಯ ವೇಗ ತಡೆಗಳಿಗೆ ಸುಣ್ಣ ಬಳಿದು ಸಂಭಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ
ಈಗಲಾದರು ಅಧಿಕಾರಿಗಳು ನಗರದಲ್ಲಿ ಅ ವೈಜ್ಞಾನಿಕವಾಗಿರುವ ಸ್ಪೀಡ್ ಬ್ರೇಕರ್ ಗಳನ್ನು ತೆರವು ಮಾಡಿ ವೈಜ್ಞಾನಿಕ ವಾಗಿರುವ ಸ್ಪೀಡ್ ಬ್ರೇಕರ್ ಗಳಿಗೆ ಸುಣ್ಣ ಬಣ್ಣ ಹಚ್ಚುವಂತೆ ಆಝಂ ನಗರದ ಯುವಕರ ಒತ್ತಾಯ ವಾಗಿದೆ