SSLC ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ
ಬೆಂಗಳೂರು:, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಆದರೆ ಶುಕ್ರವಾರದಿಂದಲೇ ಎಲ್ಲಾ ಶಾಲೆಗಳು ಪರೀಕ್ಷಾ ಸಿದ್ಧತೆ ರಜೆ ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.ಎಂದು ರಾಜ್ಯ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ ಆವರು, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ೧ ರಿಂದ ೬ ನೇ ತರಗತಿವರೆಗೆ ನಾಳೆಯಿಂದಲೇ ಬೇಸಿಗೆ ರಜೆ ಆರಂಭವಾಗಲಿದೆ ಎಂದರು.
ರಜೆ ಮುಗಿದ ಬಳಿಕ ಮಕ್ಕಳಿಗೆ ಪರೀಕ್ಷೆ ನಡೆಸುವುದಿಲ್ಲ. ಎಫ್ಎ _1,2,3,4, ಎಸ್ಎ 1 ಆಧಾರದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದರು.
೭ ರಿಂದ ೧೦ ನೇ ತರಗತಿವರೆಗೆ ಶುಕ್ರವಾರದಿಂದಲೇ ಅಭ್ಯಾಸ ರಜೆ ನೀಡಬೇಕು. ೯ ನೇ ತರಗತಿವರೆಗೆ ೨೩ ರೊಳಗೆ ಪರೀಕ್ಷೆ ಕೊನೆಗೊಳಿಸಿ ಬೇಸಿಗೆ ರಜೆ ನೀಡುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ