Breaking News

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ, ಚಿಕ್ಕೋಡಿಗೆ ಮೂರನೇಯ ಸ್ಥಾನ

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ

ಬೆಂಗಳೂರು: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಶೇ. 67.87 ರಷ್ಟು ಫಲಿತಾಂಶ ಬಂದಿದ. ಕಳೆದ ಬಾರಿ ಶೇ.75.11 ರಷ್ಟು ಫಲಿತಾಂಶ ಬಂದಿದ್ದು ಪಿಯುಸಿ ರೀತಿಯಲ್ಲಿ ಎಸ್ ಎಸ್ ಎಲ್ ಸಿಯಲ್ಲೂ ಫಲಿತಾಂಶದಲ್ಲಿ ಇಳಿಕೆಯಾಗಿದೆ.

ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಟ್ ಎಸ್.ಎಸ್.ಎಲ್.ಸಿ.ಫಲಿತಾಂಶ ಪ್ರಕಟಿಸಿದರು. 856286 ವಿದ್ಯಾರ್ಥಿಗಳಲ್ಲಿ 581134 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕರು ಶೇ.62.42 ಬಾಲಕಿಯರು ಶೇ.74.08 ರಷ್ಟು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.62.42 ,ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ 74.08 ರಷ್ಟು ಪಾಸಾಗಿದ್ದಾರೆ. ಬಾಲಕಿಯರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.

ಜಿಲ್ಲಾವಾರು ಫಲಿತಾಂಶ:
ಉಡುಪಿ ಶೇ.84.23
ದಕ್ಷಿಣ ಕನ್ನಡ ಶೇ.82.39
ಚಿಕ್ಕೋಡಿ ಶೇ.80.47
ಶಿರಸಿ ಶೇ. 80.09
ಉತ್ತರಕನ್ನಡ ಶೇ.79.82
ರಾಮನಗರ ಶೇ.78.55
ಕೋಲಾರ ಶೇ.78.51
ಧಾರವಾಡ ಶೇ.77.29
ಕೊಡಗು ಶೇ.77.09
ಬೆಂಗಳೂರು ಗ್ರಾಮಾಂತರ ಶೇ.77.03
ಕೊಪ್ಪಳ ಶೇ.76.05
ಚಾಮರಾಜನಗರ ಶೇ.75.66
ಗದಗ ಶೇ.75.62
ದಾವಣಗೆರೆ ಶೇ.75.33
ಶಿವಮೊಗ್ಗ ಶೇ.75.07
ಯಾದಗಿರಿ ಶೇ. 74.84
ಬಳ್ಳಾರಿ ಶೇ.74.65
ಚಿಕ್ಕಮಗಳೂರು ಶೇ. 74.4
ಚಿತ್ರದುರ್ಗ ಶೇ.72.64
ವಿಜಯಪುರ ಶೇ.72.23
ಮೈಸೂರು ಶೇ.72.03
ಮಧುಗಿರಿ ಶೇ.71.84
ಮಂಡ್ಯ ಶೇ.71.73
ಬೆಂಗಳೂರು ಉತ್ತರ ಶೇ.71.44
ಬೆಂಗಾವಿ ಶೇ. 71.2
ಹಾವೇರಿ ಶೇ.70.46
ಕಲಬುರಗಿ ಶೇ.70.24
ಚಿಕ್ಕಬಳ್ಳಾಪುರ ಶೇ.70.13
ಬೆಂಗಳೂರು ದಕ್ಷಿಣ ಶೇ. 69.92
ರಾಯಚೂರ ಶೇ.69.69
ಹಾಸನ ಶೇ.69.58
ತುಮಕೂರು ಶೇ. 68.15
ಬಾಗಲಕೋಟೆ ಶೇ. 64.53
ಬೀದರ್ ಶೇ.62.2

ಶೇ.100 ಫಲಿತಾಂಶ:
ಸರ್ಕಾರಿ ಶಾಲೆ 268
ಅನುದಾನಿತ ಶಾಲೆ 44
ಅನುದಾನರಹಿತ ಶಾಲೆ 612
ಒಟ್ಟು 924 ಶಾಲೆಗಳಿಗೆ ಶೇ.100 ಫಲಿತಾಂಶ

ಶೂನ್ಯ ಫಲಿತಾಂಶ:
ಸರ್ಕಾರಿ ಶಾಲೆ 05
ಅನುದಾನಿತ ಶಾಲೆ 04
ಅನುದಾನ ರಹಿತ ಶಾಲೆ 51
ಒಟ್ಟು 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಪೂರಕ ಪರೀಕ್ಷೆ:

ಜೂನ್ 15 ರಿಂದ ಜೂನ್ 22 ರವರೆಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ ನಿಗದಿಪಡಿಸಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *