ಬೆಳಗಾವಿಯಲ್ಲಿ ಮಾಜಿ ಸಚಿವ ಹಾಗೂ ಎಆಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರು
ಅವರು ತಮ್ಮ ನಿವಾಸದಲ್ಲಿ ಮಾದ್ಯಮ ಗಳ ಜೊತೆ ಮಾತನಾಡಿ ಹೈಕಮಾಂಡ ಸೂಚನೆಯಂತೆ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲು ಒಪ್ಪಿದ್ದೆನೆ. ಎಂದರು
ಹೈ ಕಮಾಂಡ್ ಕೂಡಾ ನನಗೆ ಕೇಳಿತ್ತು ರಾಷ್ಟ್ರದ ಮಟ್ಟದಲ್ಲಿ ಕೆಲಸ ಮಾಡಲು ಇಷ್ಟಾ ಇದ್ರೆ ಬನ್ನಿ ಅಂತಾ ಹೇಳಿತ್ತು. ಈಗಾಗಿ ನಾವು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರದ ಮಟ್ಟದಲ್ಲಿ ಕೆಲಸಮಾಡಲು ಒಪ್ಪಿದ್ದೆನೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು
ರಾಷ್ಟ್ರ ಮಟ್ಟದಲ್ಲಿ ರಾಹುಲಗಾಂದಿ ಕಚೇರಿ, ಬೇರೆ ರಾಜ್ಯದ ಉಸ್ತುವಾರಿ ಸೇರಿದಂತೆ ಅನೇಕ ಕೆಲಸ ಮಾಡಲು ಅವಕಾಶ ಗಳು ಇವೆ . ಅವರು ಯಾವುದೇ ಜವಾಬ್ದಾರಿ ಕೊಟ್ರು ಮಾಡುತ್ತೇನೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಕವನ್ನ ಅಧಿಕಾರ ಕ್ಕೆ ತರುವುದೆ ನಮ್ಮ ಟಾರ್ಗೆಟ್.. ಸಿಎಂ ಅಭ್ಯರ್ಥಿ ಘೋಷಣೆ ಮಾಡುವದು ಹೈಕಮಾಂಡಗೆ ಬಿಟ್ಟಿದ್ದು ಎಂದು ಸತೀಶ ಹೇಳಿದರು
ದಲಿತರ ಮನೆಯಲ್ಲಿ ಊಟಾ ಮಾಡುವ ವಿಚಾರ. ದಲಿತರ ನ್ನ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಅವರೂ ಮನುಷ್ಯರೇ ಎಂದು ಸತೀಶ ಯಡಿಯೂರಪ್ಪ ನವರ ದಲಿತ ಪ್ರೇಮವನ್ನು ಟೀಕಿಸಿದರು
ಈ ಬಾರಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತಿದೆ. ಅಂತಹವರಿಗೆ ಸಿಪಾರಸ್ಸು ಮಾಡುತ್ತೆವೆ ಎಂದ ಅವರು
ಯಮಕನಮರಿ ಕ್ಷೇತ್ರದಿಂದ ಸಹೊದರ ಲಖನ ಜಾರಕಿಹೊಳಿ ಸ್ಪರ್ದೆಗೆ ಇಳಿಯುವ ವಿಚಾರ. ಅವರ ಸ್ಪರ್ಧೆಗೆ ಯಾವುದೇ ವಿರೋಧ ವಿಲ್ಲ. ಆದ್ರೆ ಅವರು ಬೇರೆಯವರ ಜೊತೆ ಗುರಿತಿಸಿ ಕೊಂಡಿದಕ್ಕೆ ನನ್ನ ವಿರೋಧವಿದೆ. ಎಂದರು
ಈ ಬಾರಿ ೧೫೩ ಸೀಟು ಟಾರ್ಗೆಟ್ ಇಡಲಾಗಿದೆ.ಎಂದರು