ಬೆಳಗಾವಿ – ಇಂದು ಮದ್ಯಾಹ್ನ ಚಾರ್ಟರ್ಡ ಅಕೌಂಟೆಂಟ್ ಸುಭಾಶ್ ಗಾಳಿ ಎಂದಿನಂತೆ ಕಾಲೇಜು ರಸ್ತೆಯ ತಮ್ಮ ಆಫಿಸಿಗೆ ಬರುತ್ತಾರೆ ಅವರಿಗೆ ವಯಸ್ಸು 70 ಹೀಗಾಗಿ ಕಾರಿನ ಚಾಲ ಎಂದಿನಂತೆ ಅವರ ಕೈ ಹಿಡಿದು ಸ್ಟೆಫ್ ಹತ್ತಿಸಿ ಕಾರಿನ ಬಳಿ ಮರಳಿದಾಗ ಕಾರಿನಲ್ಲಿದ್ದ ಬ್ಯಾಗ್ ಕಾಣೆಯಾದ ಘಟನೆ ನಡೆದಿದೆ
ಸುಭಾಶ್ ಗಾಳಿ ವಡಗಾಂವಿ ಪ್ರದೇಶದ ನಿವಾಸಿ ಇವರು ಹಿರಿಯ ಚಾರ್ಟೆಡ್ ಅಕೌಂಟೆಂಟ್ ಇವರ ವಯಸ್ಸು 70 ಇವರ ಕಚೇರಿ ಇರುವದು ಕಾಲೇಜು ರಸ್ತೆಯ ಅರೋರಾ ಸ್ಪೋರ್ಟ್ಸ ಬಳಿ ಎಂದಿನಂತೆ ಕಚೇರಿಗೆ ಬಂದ ಇವರ ಕಾರಿನಲ್ಲಿದ್ದ ಬ್ಯಾಗ್ ದೋಚಲಾಗಿದೆ
ಇವರ ಬ್ಯಾಗ್ ನಲ್ಲಿ ಲಕ್ಷಾಂತರ ರೂ ಹಣ ಇದೆ ಎಂದು ಹಲವಾರು ದಿನಗಳಿಂದ ನಿಗಾ ಇಟ್ಟಿದ್ದ ಕಳ್ಳ ಇಂದು ಆ ಬ್ಯಾಗ್ ದೋಚಿದ್ದಾನೆ ಬ್ಯಾಗ್ ನಲ್ಲಿ ಇರೋದು ಎಂಟು ನೂರು ಬೆಲೆಯ ಒಂದು ಮೋಬೈಲ್ ಆದಾರ್ ಕಾರ್ಡ್ ಜೊತೆಗೆ ಇತರ ದಾಖಲುಪತ್ರ ಎಂದು ಸುಭಾಶ್ ಗಾಳಿ ಖಡೇಬಝಾರ್ ಠಾಣೆಯಲ್ಲಿ ದೂರು ನೀಡಿದ್ದಾರೆ
ಗಂಟು ಕದಿಯಲು ಬಂದ ಆ ಖದೀಮನಿಗೆ ಕನ್ನಡಿಯೊಳಗಿನ ಗಂಟು ಮಾತ್ರ ಸಿಕ್ಕಿದೆ ರಾಜ್ಯ ರಾಜಕಾರಣ ಆಪರೇಶನ್ ಫೇಲ್ ಆದಂತೆ ಕಳ್ಳನ ಸರ್ಜರಿಯೂ ಫೇಲ್ ಆಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ