ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ,ನೂರಾರು ಸೊಂಕಿತರು ಬೆಳಗಾವಿ ಜಿಲ್ಲೆಯಲ್ಲೆ ಪತ್ತೆಯಾಗುತ್ತಿದ್ದಾರೆ ಸರ್ಕಾರ,ವಸತಿ ಶಾಲೆ,ಹಾಸ್ಟೇಲ್ ಗಳಲ್ಲಿ ಬೆಡ್ ವ್ಯೆವಸ್ಥೆ ಮಾಡುವದರ ಬದಲಾಗಿ,ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ತಾತ್ಕಾಲಿಕವಾಗಿ ಕೋವೀಡ್ ಕೇರ್ ಸೆಂಟರ್ ಮಾಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನುಮಣ್ಣವರ ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಆಸ್ಪತ್ರೆ ಹೊರತು ಪಡಿಸಿ ಬೇರೆ ಕಡೆಗೆ ಕೋವೀಡ್ ಕೇರ್ ಸೆಂಟರ್ ತೆರೆಯಲಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಪ್ರತಿದಿನ ನೂರಾರು ಸೊಂಕಿತರು ಪತ್ತೆಯಾಗುತ್ತಿದ್ದಾರೆ.ಒಂದೇ ಸ್ಥಳದಲ್ಲಿ ಚಿಕಿತ್ಸೆಯ ವ್ಯೆವಸ್ಥೆ ಮಾಡಿದರೆ,ವೈದ್ಯಕೀಯ ಸಿಬ್ಬಂಧಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಸುನೀಲ ಹನುಮಣ್ಣವರ ಅಭಿಪ್ರಾಯ ಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ ಇಂತಹ ದೊಡ್ಡ ಜಿಲ್ಲೆಯಲ್ಲಿ ಸಹಜವಾಗಿ ಸೊಂಕಿತರ ಪ್ರಮಾಣ ಹೆಚ್ಚಾಗಿದೆ.ಸರ್ಕಾರ ಬೆಳಗಾವಿಯ ಸುವರ್ಣ ಸೌಧವನ್ನು ಕೋವೀಡ್ ಕೇರ್ ಸೆಂಟರ್ ಮಾಡಿದ್ರೆ ಸೊಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತೆ,ಜಿಲ್ಲಾಡಳಿತ ಅಲ್ಲಿ,ಇಲ್ಲಿ ಟೆಂಟ್ ಹಾಕುವ ಬದಲು ಸುವರ್ಣಸೌಧದಲ್ಲಿ ತಾತ್ಕಾಲಿಕವಾಗಿ ಟೆಂಟ್ ಹಾಕಬೇಕು,ಬೆಳಗಾವಿ ನಗರದ ನಾಲ್ಕು ಪ್ರದೇಶಗಳಲ್ಲಿ ಜಿಲ್ಲಾಡಳಿತ ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸಬೇಕು,ಸಣ್ಣಪುಟ್ಟ ಕಾಯಿಲೆಗಳಿಗೆ ಈ ಆಸ್ಪತ್ರೆಗಳ ಮೂಲಕ ಬೆಳಗಾವಿ ನಗರದ ನಿವಾಸಿಗಳಿಗೆ ಚಿಕಿತ್ಸೆ ಒದಗಿಸಬೇಕು ಎಂದು ಹನುಮಣ್ಣವರ ಒತ್ತಾಯಿಸಿದ್ದಾರೆ.