ರೇಲ್ವೆ ಬೋಗಿಗಳನ್ನು ಆಸ್ಪತ್ರೆ ಮಾಡ್ತಾರಂತೆ,ರೈಲು ಮಂತ್ರಿ ಸುರೇಶ ಅಂಗಡಿ…!!

 

ಬೆಳಗಾವಿ- ಬೆಳಗಾವಿಯ ಉದ್ಯಮಿಗಳ ಜೊತೆ ಕೇಂದ್ರ ಸಚಿವ ಸುರೇಶ್ ಅಂಗಡಿ ಸಭೆ ನಡೆಸಿದರು
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಅವರು ಕಾರ್ಮಿಕರ ಸಂಬಳ ಪಾವತಿಗೆ ವ್ಯವಸ್ಥೆ ಮಾಡಲು ಉದ್ಯಮಿಗಳ ಜೊತೆ ಸಮಾಲೋಚನೆ ನಡೆಸಿದರು.

ಕಾರ್ಮಿಕರಿಗೆ ಪಾಸ್ ಕೊಟ್ಟು ಸಂಬಳ ಪಾವತಿ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು ಬರುವ ಒಂದು ವಾರದಲ್ಲಿ ಕಾರ್ಮಿಕರಿಗೆ ಸಂಬಳ ಕೊಡಿಸುವ ಕುರಿತು ಕೇಂದ್ರ ರೈಲು ಸಚಿವ ಸುರೇಶ್ ಅಂಗಡಿ ಉದ್ಯಮಿಗಳಿಗೆ ಮನವರಿಕೆ ಮಾಡಿದರು.ನಂತರ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಲಾಕ್‌ಡೌನ್ ವಿಸ್ತರಣೆ ವಿಚಾರ ನಾವು ಎಷ್ಟು ಕಠಿಣವಾಗಿ ಲಾಕ್‌ಡೌನ್ ಪಾಲಿಸುತ್ತೇವೋ ಅದರ ಮೇಲೆ ಅವಲಂಬಿತವಾಗಿದೆ*

ಲಾಕ್‌ಡೌನ್ ನ್ನು ಇನ್ನೂ ಹೆಚ್ಚು ಗಂಭೀರವಾಗಿ ತಗೆದುಕೊಂಡರೇ ಸಮಸ್ಯೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ದೊಡ್ಡಮಟ್ಟಕ್ಕೆ ಅನಾಹುತ ಆಗುವ ಸಂಭವವಿರುತ್ತೆ,ಹೀಗಾಗಿ ದಯವಿಟ್ಟು ಲಾಕ್‌ಡೌನ್‌ನ್ನು ಗಂಭೀರವಾಗಿ ಪಾಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಮನೆ ಬಿಟ್ಟು ಹೊರಬರಬೇಡಿ, ನಿಮಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸುತ್ತೇವೆ ಗೂಡ್ಸ್ ರೈಲುಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಏನಾದರೂ ಅನಾಹುತ ಆದರೆ ಹೆಚ್ಚಿನ ವ್ಯವಸ್ಥೆ ಬೇಕಾಗುತ್ತದೆ,ಅದಕ್ಕಾಗಿ ಮುಂಜಾಗೃತವಾಗಿ ಹಳೆಯ ಬೋಗಿಗಳನ್ನು ಆಸ್ಪತ್ರೆಯಾಗಿ ಪರಿವರ್ತಿಸುವ ಕೆಲಸ ಮಾಡಲಾಗುತ್ತೆ ಎಲ್ಲಾ ರೇಲ್ವೆ ವಲಯಗಳಲ್ಲಿ ಈ ಕೆಲಸ ಮಾಡಲಾಗುತ್ತೆ ಎಲ್ಲಿಯೂ ಅಗತ್ಯವಸ್ತುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಬಂದಿಲ್ಲ.ನಿಮ್ಮ ಗಮನಕ್ಕೆ ಬಂದರೆ ತಿಳಿಸಿ ಅಗತ್ಯ ವಸ್ತುಗಳ ಪೂರೈಕೆ ಮಾಡ್ತೇವೆ ಎಂದು ಸುರೇಶ್ ಅಂಗಡಿ ಭರವಸೆ ನೀಡಿದರು.

ಆಸ್ಪತ್ರೆ ಡಾಕ್ಟರ್, ನರ್ಸ್‌ಗಳು, ಪೊಲೀಸ್ ಇಲಾಖೆ, ಮಾಧ್ಯಮಗಳಿಗೆ ಅಭಿನಂದನೆ,ಸಲ್ಲಿಸಿದ ಅವರು, ರಾಜ್ಯದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಇನ್ನೂ 15 ದಿನ ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಅಂತಾರಾಜ್ಯ ಕಾರ್ಮಿಕರು ಯಾರೂ ಸಹ ಗಲಾಟೆ ಮಾಡುವ ಅವಶ್ಯಕತೆ ಇಲ್ಲ, ಗೃಹ ಇಲಾಖೆ ಹಾಗೂ ಗೃಹ ಮಂತ್ರಿ ನೇರವಾದ ಡೈರೆಕ್ಷನ್ ಕೊಟ್ಟಿದ್ದಾರೆ ಯಾವುದೇ ರಾಜ್ಯದ ಕಾರ್ಮಿಕರಿದ್ದರೂ ಅವರನ್ನು ನೋಡಿಕೊಳ್ಳುವದು ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸುರೇಶ್ ಅಂಗಡಿ ಹೇಳಿದರು. ಆಯಾ ರಾಜ್ಯ ಸರ್ಕಾರ ಕಾರ್ಮಿಕರಿಗೆ ಬೇಕಾದ ವ್ಯವಸ್ಥೆ ಮಾಡಬೇಕು ಎಂದರು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *