ಬೆಳಗಾವಿ- ಮಹಾಮಾರಿ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶದಲ್ಲಿ 20 ಸಾವಿರ ರೇಲ್ವೆ ಬೋಗಿಗಳು ಐಸೊಲೇಟೆಡ್ ವಾರ್ಡ್‌ಗಳಾಗಿ ಪರಿವರ್ತನೆ ಮಾಡುವ ಕೆಲಸ ನಡೆದಿದೆ ಎಂದು ರಾಜ್ಯ ರೇಲ್ವೆ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ರೇಲ್ವೆ ಬೋರ್ಡ್‌ಗೆ ಪ್ರಧಾನಿ ಮೋದಿ, ರೇಲ್ವೆ ಸಚಿವ ಪಿಯೂಷ್ ಗೋಯಲ್ ನಿರ್ದೇಶನ ಕೊಟ್ಟಿದ್ದಾರೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಿ ಬೋಗಿಗಳನ್ನು ಐಸೊಲೇಟೆಡ್ ವಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ ಹುಬ್ಬಳ್ಳಿಯ ಡಿವಿಜನ್‌ಗೆ 312 ಕೋಚ್‌ಗಳನ್ನು ಮಾಡಲು ಕೊಟ್ಟಿದ್ದಾರೆ ಈಗಾಗಲೇ 15 ಬೆಡ್‌ಗಳನ್ನು ಮಾಡಿ ರೆಡಿ ಇಟ್ಟಿದ್ದಾರೆ ಎಂದರು
ಮುಂದೆ ಏನಾದರೂ ಅನಾಹುತ ಆದರೆ ಬೇಕಾದ ವ್ಯವಸ್ಥೆ ಇರಬೇಕು,ಚೀನಾದವರು 10 ದಿನಗಳಲ್ಲಿ ಸಾವಿರ ಬೆಡ್‌ಗಳ ಆಸ್ಪತ್ರೆ ನಿರ್ಮಿಸಿದ್ರು ನಾವು ಒಂದು ದಿನದಲ್ಲಿ ಬೋಗಿಗಳಲ್ಲಿ 6700 ಬೆಡ್‌ಗಳ ವ್ಯವಸ್ಥೆ ಮಾಡಿದ್ದೇವೆ. ಪ್ರಧಾನಿ ಆದೇಶ ಮೇರೆಗೆ ಜನರಿಗಾಗಿ ಈ ವ್ಯವಸ್ಥೆ ಮಾಡಿದ್ದೇವೆ ಬೆಳಗಾವಿಯಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಪ್ರಕರಣ ನಡೆದಿದ್ದು ದುರ್ದೈವದ ಸಂಗತಿ. ಭಗವಂತನ ದಯೆಯಿಂದ ಎಲ್ಲ ಸುಸೂತ್ರವಾಗಿ ಬಗೆಹರಿದರೆ ಏಪ್ರಿಲ್ 15ರಿಂದ ರೈಲು ಸಂಚಾರ ಆರಂಭ ಮಾಡುತ್ತೇವೆ. ದುಷ್ಟಶಕ್ತಿಗಳು ಇದನ್ನು ಮುಂದುವರಿಸಲು ಬಯಸುತ್ತಿವೆ ಅವುಗಳ ಬಗ್ಗೆ ಎಚ್ಚರಿಕೆಯಿಂದ ಇರೋಣ ಎಂದು ಅಂಗಡಿ ಹೇಳಿದರು.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ನಮ್ಮ ಆರೋಗ್ಯಕ್ಕಾಗಿ ತಮ್ಮ ಜೀವನ ಬದಿಗಿಟ್ಟು ನಮ್ಮ ರಕ್ಷಿಸುತ್ತಿದ್ದಾರೆ ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕೆಂದು ಸಿಎಂರಲ್ಲಿ ಮನವಿ ಮಾಡ್ತೇನೆ ಎಂದು ತಿಳಿಸಿದರು.
ಅಗತ್ಯ ವಸ್ತುಗಳ ಪೂರೈಕೆಗೆ ರೇಲ್ವೆ ಇಲಾಖೆಯಿಂದ ಸಕಲ ವ್ಯವಸ್ಥೆ ಮಾಡಿದ್ದೇವೆ. ಸೊಲ್ಲಾಪುರ – ಬೆಂಗಳೂರು ಮಾರ್ಗದಲ್ಲಿ ರೋಲ್ ಆನ್ ರೋಲ್ ಆಫ್ ಯೋಜನೆ ಇದೆ. ಗೂಡ್ಸ್ ರೈಲಿನಲ್ಲಿ ಅಗತ್ಯ ವಸ್ತು ಪೂರೈಸುವ ಲಾರಿಗಳ ಸಾಗಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸೊಲ್ಲಾಪುರ – ಬೆಂಗಳೂರು ಮಾರ್ಗದಲ್ಲಿ ಸಂಚಾರ ಆರಂಭವಾಗಿದೆ. ಉಭಯ ರಾಜ್ಯಗಳ ಮಧ್ಯೆ ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಕೂಲ ವಾಗಿದೆ. ಎಂದು
ಬೆಳಗಾವಿಯಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.