Breaking News

ಎಲ್ಲರೂ ಸೋಶಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಿ- ಸುರೇಶ ಅಂಗಡಿ

ಏ.14ರವರೆಗೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು: ಕೇಂದ್ರ ಸಚಿವ ಅಂಗಡಿ

ಬೆಳಗಾವಿ

ಇಡೀ ದೇಶ ಕರೋನೊ‌ ವಿರುದ್ದ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಏ.14ರ ವರೆಗೂ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು.

ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಹುಕ್ಕೇರಿ ‌ಹಿರೇಮಠದ ಶ್ರೀ‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ 29ನೇ ಸವಿಚಾರ ಚಿಂತನ ಬಳಗದಿಂದ ನಿರ್ಗತಿಕರು ಹಾಗೂ ಬಡವರಿಗೆ ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡಿ‌ ಮಾತನಾಡಿದರು.

ಚೀನಾದಿಂದ ಆರಂಭವಾದ ಭೀಕರ ಮಹಾಮಾರಿ ಕೊರೋನೊ ವೈರಸ್ ವಿಶ್ವದಾದ್ಯಂತ ಪಸರಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರ ವರೆಗೆ ಭಾರತವನ್ನು ಲಾಕ್ ಡೌನ್ ಮಾಡಿದ್ದಾರೆ. ಅದನ್ನು ಎಲ್ಲರೂ ಪಾಲಿಸಬೇಕು. ಕೊರೋನೊ ವೈರಸ್ ಯುದ್ದ ವಿರುದ್ದ ಭಾರತದ ಗೆಲ್ಲಲಿದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ‌ಮೋದಿ ಅವರು ಭಾನುವಾರ ರಾತ್ರಿ 9 ಕ್ಕೆ ಒಂಬತ್ತು ‌ನಿಮಿಷಗಳ ಕಾಲ ಎಲ್ಲ ಮನೆಯ ದೀಪವನ್ನು ಬಂದ್ ಮಾಡಿ ಮೇಣದ ಬತ್ತಿ, ದ್ವೀಪವನ್ನು ಹಚ್ಚಲು ಕರೆ ನೀಡಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ನೀಡಿ ದೇಶದ 135 ಕೋಟಿ ಜನರು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಿ ಕೊಡಬೇಕೆಂದರು.

ಹುಕ್ಕೇರಿ ಹಿರೇಮಠದ ಶ್ರೀಗಳು ಬಡವರಿಗೆ ಹಾಗೂ‌ ನಿರ್ಗತಿಕರಿಗೆ ಶ್ರೀಮಠದಿಂದ ದಿನಸಿ ಸಾಮಗ್ರಿ ಹಂಚುತ್ತಿರುವುದು ಅಭಿಮಾನದ ಸಂಗತಿ. ಶ್ರೀಗಳಿಗೆ ಭಾರತ ಸರಕಾರದ ಪ್ರಧಾನಿ ನರೇಂದ್ರ‌ ಮೋದಿ ಅವರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಏ.14 ರ ವರೆಗೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಹಾಮಾರಿ ಕೊರೋನೊ ವಿರುದ್ದ ಎಲ್ಲರೂ ಹೋರಾಡಬೇಕಿದೆ ಎಂದು ಕರೆ ನೀಡಿದರು.

ಬೆಳಗಾವಿ ಉತ್ತರ ಕ್ಷೇತ್ರದ‌ ಶಾಸಕ‌ ಅನಿಲ್ ಬೆನಕೆ ಮಾತನಾಡಿ, ಕೊರೋನೊ ವೈರಸ್ ವಿರುದ್ದ ಜಾತಿ, ಭಾಷೆ‌ ಮೀರಿ‌ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಹುಕ್ಕೇರಿ ಹಿರೇಮಠ ಶ್ರೀಗಳು ರಾಯವಾಗ, ಹುಕ್ಕೇರಿ, ಯಮಕನಮರಡಿ, ಸಂಕೇಶ್ವರ, ಚಿಕ್ಕೋಡಿ, ಬೆಳಗಾವಿಯ ಬಡವರಿಗೆ ದಿನಸಿ ಸಾಮಗ್ರಿ ವಿತರಿಸಿದ್ದಾರೆ. ಇಂಥ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಶ್ರೀಗಳ‌ ಕಾರ್ಯ ಅನನ್ಯ ಎಂದರು.

ಅಲ್ಪಸಂಖ್ಯಾತ ನಿಗಮ ಮಂಡಳಿಯ ಅಧ್ಯಕ್ಷ ಮುಕ್ತಾರ ಪಠಾಣ, ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ‌ ಚಂದರಗಿ, ವೀರುಪಾಕ್ಷಯ್ಯ ನೀರಲಗಿಮಠ, ಅವರವಿಂದ ಜೋಶಿ, ಅರವಿಂದ ಪಾಟೀಲ, ಮಂಜುಳಾ ಬಳ್ಳಾರಿ, ಎಂ.ವಿ.ಹಿರೇಮಠ, ಡಾ. ನಂದೀಶ,‌ಮಲ್ಲಿಕಾರ್ಜುನ ರೊಟ್ಟಿ, ಸುನೀತಾ ಪಟ್ಟಣಶೆಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *