ಬೆಳಗಾವಿ- ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕನೇಯ ಬಾರಿಗೆ ಆಯ್ಕೆ ಬಯಿಸಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಇಂದು ನಾಮಪತ್ರ ಸಲ್ಲಿಸಿದರು
ಪ್ರಭಾಕರ ಕೋರೆ.ಅಭಯ ಪಾಟೀಲ ಅನೀಲ ಬೆನಕೆ ಸೇರಿದಂತೆ ಹಲವಾರು ಜನ ಬಿಜೆಪಿ ಮುಖಂಡರ ಜೊತೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಅವರು ನಾಮಪತ್ರ ಸಲ್ಲಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಪ್ರಭಾಕರ ಕೋರೆ ಈ ಬಾರಿಯೂ ಸುರೇಶ ಅಂಗಡಿ ಗೆಲುವು ನಿಶ್ಚಿತ. ಮೂರು ಲಕ್ಷ ಮತಗಳ ಅಂತರದಿಂದಿ ಅವರು ಗೆಲ್ತಾರೆ ಎಂದು ಕೋರೆ ವಿಶ್ವಾಸ ವ್ಯೆಕ್ತಪಡಿಸಿದರು
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಯಾದರೂ ಅಲ್ಲಿಯೂ ಬಿಜೆಪಿ ಗೆಲ್ಲುತ್ತದೆ ನಾನೂ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದೆ ಆದರೆ ಪಕ್ಷದ ವರಿಷ್ಠರು ರಾಜ್ಯಸಭಾ ಸದಸ್ಯನ ಇನ್ನೊಂದು ವರ್ಷ ಅವಧಿ ಇದೆ ಸ್ಪರ್ದೆ ಮಾಡೋದು ಬೇಡ ಅಂದ್ರು ಹೀಗಾಗಿ ನಾನು ಸುಮ್ಮನಾದೆ ಈಗ ರಮೇಶ ಕತ್ತಿ ಮತ್ತು ಜೊಲ್ಲೆ ನಡುವೆ ಪೈಪೋಟಿ ನಡೆದಿದೆ ಟಿಕೆಟ್ ಯಾರಿಗೆ ಸಿಕ್ಕರೂ ನಾವು ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ನಾವು ಪಕ್ಷದ ಶಿಸ್ತಿನ ಸಿಪಾಯಿಗಳು ಎಂದು ಕೋರೆ ಹೇಳಿದರು
ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ ದುಡ್ಡು ಇದ್ದೋರ ಮೇಲೆ ಐಟಿ ದಾಳಿ ನಡೆಯೋದು ಸಹಜ ಇದೊಂದು ರೂಟಿನ್ ಪ್ರಕ್ರಿಯೆ ಎಂದು ಪ್ರಭಾಕರ ಕೋರೆ ಹೇಳಿದರು