ಬೆಳಗಾವಿ- ಇಂದು ಸಂಜೆ 4 ಗಂಟೆಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದ್ದು ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಗಳು ಸ್ಪೂರ್ತಿ ಬೆಳಗಾವಿಯಿಂದ ದೆಹಲಿಗೆ ನಿರ್ಗಮಿಸಿದರು.
ಬೆಳಗಾವಿಯ ಸದಾಶಿವ ನಗರದಲ್ಲಿರುವ ಮನೆಯಿಂದ ಸುರೇಶ ಅಂಗಡಿ ಅವರ ಹಿರಿಯ ಪುತ್ರಿ ಸ್ಪೂರ್ತಿ ತಮ್ಮ ಮಗಳ ಜೊತೆ ದೆಹಲಿಗೆ ತೆರಳಿದರು.
ಬೆಳಗಿನ ಜಾವ ಸುರೇಶ್ ಅಂಗಡಿ ಅವರ ಅಭಿಮಾನಿಗಳು,ಗಣ್ಯರು,ನಾಯಕರು,ಸದಾಶಿವ ನಗರದಲ್ಲಿರುವ ಸುರೇಶ್ ಅಂಗಡಿ ಅವರ ಮನೆಗೆ ದೌಡಾಯಿಸಿ,ಸಾಂತ್ವನ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಬೆಂಗಳೂರಿನಿಂದಲೂ ಬಿಜೆಪಿ ನಾಯಕರು,ಮಂತ್ರಿಗಳು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ