ಸುರೇಶ ಅಂಗಡಿ ರೈಲು ಮಂತ್ರಿ
ಉತ್ತರ ಕರ್ನಾಟಕದಲ್ಲಿ ರೈಲು ಕ್ರಾಂತಿ
ಬೆಳಗಾವಿ- ಕೇಂದ್ರದ ರಾಜ್ಯ ರೇಲ್ವೆ ಸಚಿವ ಸಂಸದ ಸುರೇಶ ಅಂಗಡಿ ಇಂದು ಹುಬ್ಬಳ್ಳಿಯಲ್ಲಿ ರೇಲ್ವೆ ಇಲಾಖೆಯ ರಿಕ್ರ್ಯುಪ್ ಮೆಂಟ್ ಕಚೇರಿಯನ್ನು ಉದ್ಘಾಟಿಸಿ ನಾಳೆ ಘಟಪ್ರಭಾ ಚಿಕ್ಕೋಡಿ ಜೋಡಿ ರೈಲು ಮಾರ್ಗವನ್ನು ಸೇವೆಗೆ ಸಮರ್ಪಿಸಲಿದ್ದಾರೆ
ಇಂದು ಮಧ್ಯಾಹ್ನ 3 ಘಂಟೆಗೆ ಹುಬ್ಬಳ್ಳಿ ನೈರುತ್ಯ ರೇಲ್ವೆಯ ಹಳೆಯ ಜನರಲ್ ಮ್ಯಾನೇಜರ್ ಕಚೇರಿಯಲ್ಲಿ ರಿಕ್ರ್ಯುಪ್ ಮೆಂಟ್ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ,ಜಗದೀಶ ಶೆಟ್ಟರ್ ಸೇರಿದಂತೆ ಹಲವಾರು ಜನ ಗಣ್ಯರು ಭಾಗವಹಿಸಲಿದ್ದಾರೆ.
ಘಟಪ್ರಭಾ ರೈಲು ನಿಲ್ಧಾಣದಲ್ಲಿ ಘಟಪ್ರಭಾ ಚಿಕ್ಕೋಡಿ ಜೋಡಿ ರೈಲು ಮಾರ್ಗದ ಉದ್ಘಾಟನೆ ಕಾರ್ಯಕ್ರಮ ನಾಳೆ ಬೆಳಿಗ್ಗೆ 10-30 ಘಂಟೆಗೆ ಜರುಗಲಿದ್ದು ಜಿಲ್ಲೆಯ ಗಣ್ಯರು ಭಾಗವಹಿಸಲಿದ್ದಾರೆ
ಇಂದು ಹುಬ್ಬಳ್ಳಿ ನಾಳೆ ಘಟಪ್ರಭಾ ದಲ್ಲಿ ನಡೆಯಲಿರುವ ಎರಡೂ ಕಾರ್ಯಕ್ರಮಗಳ ರೂವಾರಿಯಾಗಿರುವ ಕೇಂದ್ರ ಸಚಿವ ಸುರೇಶ್ ಅಂಗಡಿ ಈ ಎರಡೂ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ರೇಲ್ವೆ ಇಲಾಖೆಯ ರಿಕ್ರ್ಯುಪ್ ಮೆಂಟ್ ಕಚೇರಿ ಇಂದು ಹುಬ್ಬಳ್ಳಿಯಲ್ಲಿ ಶುಭಾರಂಭಗೊಳ್ಳುತ್ತಿದ್ದು ಕನ್ನಡಿಗರಿಗೆ ರೇಲ್ವೇ ಇಲಾಖೆಯಲ್ಲಿ ಉದ್ಯೋಗ ದೊರಕುವ ಆಶಾಕಿರಣ ಮೂಡಿದೆ ಜಿಕ್ಕೋಡಿ,ಮತ್ತು ಘಟಪ್ರಭಾ ನಡುವಿನ ಜೋಡಿ ರೈಲು ಮಾರ್ಗ ಬೆಳಗಾವಿ ಜಿಲ್ಲೆಯ ವ್ಯಾಪಾರ ವೃದ್ಧಿ ಮಾಡುವದರ ಜೊತೆಗೆ ಸಾರ್ವಜನಿಕರಿಗೆ ತುಂಬಾ ಅನಕೂಲವಾಗಲಿದೆ.
ಸುರೇಶ್ ಅಂಗಡಿ ಅವರು ರೈಲು ಮಂತ್ರಿ ಆದಾಗಿನಿಂದ ಬೆಳಗಾವಿ ಜಿಲ್ಲೆಗೆ ಅನೇಕ ರೈಲು ಯೋಜನೆಗಳನ್ನು ತರುವದರ ಜೊತೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಆದ್ಯತೆ ಕೊಟ್ಟು ಈ ಭಾಗದಲ್ಲಿ ದೊಡ್ಡ ರೇಲ್ವೆ ಕ್ರಾಂತಿಯನ್ನೇ ಮಾಡುತ್ತಿದ್ದಾರೆ
ಧಾರವಾಡ- ಕಿತ್ತೂರು-ಬೆಳಗಾವಿ- ನಿಪ್ಪಾಣಿ- ಕೊಲ್ಹಾಪೂರ ನಡುವಿನ ಹೊಸ ರೈಲು ಮಾರ್ಗದ ನಿರ್ಮಾಣ ಕ್ಕೆ ರಾಜ್ಯ ಸರ್ಕಾರದ ಪಾಲು ಪಡೆದಿರುವ ಸುರೇಶ್ ಅಂಗಡಿ ಮಹತ್ವದ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಸಂಕಲ್ಪ ಮಾಡಿದ್ದು ಈ ಭಾಗದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ .
ರೇಲ್ವೆ ಹಳಿಗೆ, ಇನ್ನೊಂದು ಹಳಿ ಜೋಡಿಸಿ ,ಡಬ್ಬಿಗೆ ಡಬ್ಬಿ ಜೋಡಿಸಿ ಈ ರೈಲು ಎಲ್ಲರ ಜೀವನ ರೇಖೆಯಾಗಿಸಲು ಮಂತ್ರಿ ಸುರೇಶ ಅಂಗಡಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದಾರೆ.