Breaking News

ಸುರೇಶ್ ಅಂಗಡಿ ಕುಟುಂಬ ದವರಿಗೆ ಟಿಕೆಟ್ ನೀಡಲು ಬಿಜೆಪಿ ಅಧ್ಯಕ್ಷರಿಗೆ ಮನವಿ….

.

ಬೆಳಗಾವಿ- ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಇಂದು ಬೆಳಗಾವಿಯ ಸದಾಶಿವ ನಗರದಲ್ಲಿರುವ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು

ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಸುರೇಶ್ ಅಂಗಡಿ ಅವರು ಸಮಂಧಿಕರು ಉಪಸ್ಥಿತರಿದ್ದರು

ಈ ಸಂಧರ್ಭದಲ್ಲಿ ಸುರೇಶ್ ಅಂಗಡಿ ಅವರ ಮಾವ ನವರಾದ ಲಿಂಗರಾಜ್ ಪಾಟೀಲ್ ಅವರು ಮಾತನಾಡಿ,ಸುರೇಶ್ ಅಂಗಡಿ ಅವರ ಶ್ರೀಮತಿ ಮಂಗಳಾ ಅಂಗಡಿ ಅವರಿಗೆ ಉಪ ಚುನಾವಣೆಯ ಲೋಕಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಕೊಡಬೇಕು ಎಂದು ಬಿಜೆಪಿ ಅದ್ಯಕ್ಷರಲ್ಲಿ ಮನವಿ ಮಾಡಿಕೊಂಡರು

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಬುನಾದಿ ಹಾಕಿದವರೇ ಸುರೇಶ್ ಅಂಗಡಿ,ಪಕ್ಷಕ್ಕೆ ಅವರ ಸೇವೆ ಅಪಾರವಾಗಿದ್ದು,ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎನ್ನುವದು ಸುರೇಶ್ ಅಂಗಡಿ ಅವರ ಅಭಿಮಾನಿಗಳ ಒತ್ತಾಯವಾಗಿದೆ ಎಂದು ಲಿಂಗರಾಜ್ ಪಾಟೀಲ್ ನಳೀನ್ ಕುಮಾರ್ ಕಟೀಲ್ ಅವರಲ್ಲಿ ಮನವಿ ಮಾಡಿಕೊಂಡರು

ಸುರೇಶ್ ಅಂಗಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್ ಪ್ರಜಾಪ್ರಭುತ್ವದ ಕೊಲೆ ಮಾಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲೇ ಇದೆ.ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್,ಅಧಿಕಾರ ಕಳೆದುಕೊಂಡಾಗ ಜನರನ್ನು ಪ್ರಚೋದಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಾ ಬಂದಿದೆ,ಈಗ ಮುಗ್ದ ರೈತರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಮೊದಲು ರೈತರ ಬೆಳೆಗೆ ದಲ್ಲಾಳಿಗಳು,ಕಮೀಶನ್ ಏಜಂಟರು ರೇಟ್ ಫಿಕ್ಸ್ ಮಾಡುತ್ತಿದ್ದರು ಈಗ ರೈತರೇ ತಮ್ಮ ಬೆಳೆಗಳ ದರವನ್ನು ಫಿಕ್ಸ್ ಮಾಡುವ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ,ಭೂಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳು ರೈತರ ಪರವಾಗಿವೆ,ಈ ಕಾಯ್ದೆಗಳ ಕುರಿತು ರೈತರಿಗೆ ಮನವರಿಕೆ ಮಾಡುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಾರೆ.ಎಂದು ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು

Check Also

ಲೋಕಸಭೆಯಲ್ಲಿ ಬೆಳಗಾವಿ ಗಡಿ ಕುರಿತು ಶಿವಸೇನೆ ಕ್ಯಾತೆ

ಬೆಳಗಾವಿ- ಬೆಳಗಾವಿ ಗಡಿವಿವಾದದ ಕುರಿತು ನಿರಂತರವಾಗಿ ಕಾಲು ಕೆದರಿ ಜಗಳ ತೆಗೆಯುವ ಉದ್ಧವ ಠಾಕ್ರೆ ನೇತ್ರತ್ವದ ಶಿವಸೇನೆ,ಲೋಕಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರ …

Leave a Reply

Your email address will not be published. Required fields are marked *