ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಸ್ಮಾರಕ ನಿರ್ಮಿಸಲು ಸಿಎಂಗೆ ಮನವಿ ಅರ್ಪಿಸಿದ ಅಳಿಯಂದಿರು
ಬೆಳಗಾವಿ- ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ಸ್ಮಾರಕವನ್ನು ಬೆಳಗಾವಿಯಲ್ಲಿ ನಿರ್ಮಿಸುವಂತೆ ಸುರೇಶ್ ಅಂಗಡಿ ಅವರ ಇಬ್ಬರು ಅಳಿಯಂದಿರು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಅರ್ಪಿಸಿದರು.
ಸಚಿವ,ಮತ್ತು ಸುರೇಶ್ ಅಂಗಡಿ ಅವರ ಬೀಗರಾದ,ಜಗದೀಶ್ ಶೆಟ್ಟರ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸುರೇಶ್ ಅಂಗಡಿ ಅವರ ಇಬ್ಬರು ಅಳಿಯಂದಿರು,ಸುರೇಶ್ ಅಂಗಡಿ ಅವರ ಸಮಾಧಿ ದೆಹಲಿಯಲ್ಲಿದೆ,ಅವರ ಸಮಾಧಿ ಸ್ಥಳದಲ್ಲೂ ಸ್ಮಾರಕ ನಿರ್ಮಿಸಬೇಕು ಜೊತೆಗೆ ಬೆಳಗಾವಿಯಲ್ಲೂ ಸ್ಮಾರಕ ನಿರ್ಮಿಸುವಂತೆ ಅವರ ಅಭಿಮಾನಿಗಳ ಒತ್ತಾಯವಾಗಿದ್ದು ಕೂಡಲೇ ಸ್ಮಾರಕ ನಿರ್ಮಾಣಕ್ಕೆ ಆದೇಶಿಸಬೇಕೆಂದು ಮನವಿ ಮಾಡಿಕೊಂಡರು.